• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು?

|

ಬೆಂಗಳೂರು, ಏಪ್ರಿಲ್ 05 : ಕೊರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಏಪ್ರಿಲ್ 14ರ ಮಂಗಳವಾರ ಲಾಕ್ ಡೌನ್ ಮುಕ್ತಾಯವಾಗಲಿದೆ. ಮುಂದೇನು?

   ನಿಮಗೊಂದು ಸಲಾಂ ದೀಪಿಕಾ ದಾಸ್ | Deepika Das | Light up Dia | Oneindia kannada

   ದೇಶಾದ್ಯಂತ ಕುತೂಹಲ ಹುಟ್ಟಿಸಿರುವ ಪ್ರಶ್ನೆ ಇದು. ಏಪ್ರಿಲ್ 15ರಿಂದ ದೇಶದಲ್ಲಿ ಯಾಥಾಸ್ಥಿತಿ ಮುಂದುವರೆಯಲಿದೆಯೇ?, ಬಸ್, ವಿಮಾನ, ರೈಲು ಸಂಚಾರ ಆರಂಭವಾಗಲಿದೆಯೇ? ಎಂಬುದು ಜನರನ್ನು ಕಾಡುತ್ತಿರುವ ಪ್ರಶ್ನೆ.

   ಲಾಕ್ ಡೌನ್ ತೆರವು: ಇದ್ದ ಗೊಂದಲ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರಕಾರ

   ಕೇಂದ್ರ ಆರೋಗ್ಯ ಸಚಿವಾಲಯ ಲಾಕ್ ಡೌನ್ ಮುಗಿದ ಮೇಲೆಯೂ ಕೆಲವು ಷರತ್ತುಗಳನ್ನು ಹಾಕಲಿದೆ. ಲಾಕ್ ಡೌನ್ ಅವಧಿ ಮುಗಿದ ಮೇಲೆಯೂ ದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಈ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆದಿದೆ.

   ಲಾಕ್ ಡೌನ್; ಮದ್ಯ ಪ್ರಿಯರಿಗಾಗಿಯೇ ಈ ಸುದ್ದಿ !

   ಲಾಕ್ ಡೌನ್ ಅವಧಿ ಮುಗಿದ ಬಳಿಕ ಸರ್ಕಾರದ ಕಣ್ಣು ಹಾಟ್ ಸ್ಪಾಟ್‌ಗಳ ಮೇಲೆ ಬೀಳಲಿದೆ. ಹೆಚ್ಚು ಜನಸಂದಣಿ ಸೇರುವ ಪ್ರದೇಶವನ್ನು ಹಾಟ್ ಸ್ಪಾಟ್ ಎಂದು ಸರ್ಕಾರ ಗುರುತಿಸಲಿದೆ. ಹಾಟ್ ಸ್ಪಾಟ್‌ಗಳಲ್ಲಿ ಹೆಚ್ಚು ಜನ ಸೇರದಂತೆ ಮಾಡಲು ಹಲವು ನಿಯಮ ಘೋಷಣೆ ಮಾಡಲಾಗುತ್ತದೆ.

   ಲಾಕ್ ಡೌನ್ ನಡುವೆಯೂ ವ್ಯಾಪಾರಕ್ಕೆ ತೆರೆದ ರೇಷ್ಮೆ ಮಾರುಕಟ್ಟೆ!

   2009ರಲ್ಲಿ ಎಚ್‌1 ಎನ್‌1 ಹೆಚ್ಚು ಜನಸಂದಣಿ ಇರುವ ನಗರ ಪ್ರದೇಶದಲ್ಲಿ ಬೇಗ ಹಬ್ಬಿತ್ತು. ತಾಲೂಕು, ಗ್ರಾಮೀಣ ಮಟ್ಟದಲ್ಲಿ ಕಡಿಮೆ ಹರಡಿತ್ತು. ಇದನ್ನ ಉದಾಹರಣೆಯಾಗಿ ಇಟ್ಟುಕೊಂಡು ಸರ್ಕಾರ ಹಾಟ್ ಸ್ಪಾಟ್‌ಗಳ ಮೇಲೆ ಕಣ್ಣು ಇಡಲಿದೆ.

   ಈಗ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚು ಜನ ಸಂದಣಿ ಸೇರುವ ಪ್ರದೇಶಗಳ ಮೇಲೆ ನಿಷೇಧ ಹೇರಲಾಗಿದೆ. ಏಪ್ರಿಲ್ 14ರ ಬಳಿಕವೂ ಹಾಟ್ ಸ್ಪಾಟ್‌ಗಳ ಮೇಲಿನ ನಿರ್ಬಂಧವನ್ನು ತಕ್ಷಣ ತೆರವುಗೊಳಿಸುವುದಿಲ್ಲ. ಸಮುದಾಯದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ.

   ಕೇಂದ್ರ ಆರೋಗ್ಯ ಸಚಿವಾಲಯ ಹೇಳುವ ಪ್ರಕಾರ ಪ್ರಸ್ತುತ ಕೊರೊನಾ ಸಮುದಾಯಕ್ಕೆ ಹರಡುವ ಸ್ಥಿತಿಯಲ್ಲಿ ಇಲ್ಲ. ಲಾಕ್ ಡೌನ್ ಬಳಿಕ ಯಾವ-ಯಾವ ನಿಯಮ ಜಾರಿಗೆ ತರಬೇಕು? ಎಂದು ಪ್ರತ್ಯೇಕವಾದ ಯೋಜನೆಯನ್ನು ತಯಾರು ಮಾಡಲಾಗುತ್ತಿದೆ.

   ಕ್ವಾರಂಟೈನ್ ಝೋನ್, ಬಫರ್ ಝೋನ್ ಎಂದು ಎರಡು ವಿಭಾಗವನ್ನು ಮಾಡಲಾಗುತ್ತದೆ. ಝೋನ್‌ಗಳ ಆಧಾರದ ಮೇಲೆ ವಾಹನಗಳ ಸಂಚಾರ, ಜನ ಸೇರುವುದಕ್ಕೆ ನಿಷೇಧ ಹೇರಲಾಗುತ್ತದೆ. ಅಗತ್ಯ ವಸ್ತುಗಳ ಸಾಗಣೆಗೆ ವಿಶೇಷ ಪಾಸುಗಳನ್ನು ವಿತರಣೆ ಮಾಡಲಾಗುತ್ತದೆ. ಹೆಚ್ಚು ಜನರು ಸೇರದಂತೆ ಇರುವ ನಿಷೇದ ಮುಂದುವರೆಸುವ ಸಾಧ್ಯತೆ ಇದೆ.

   English summary
   Union Health Ministry is putting in place measures to ensure that the coronavirus does not spread further, following the nation wide lockdown coming to an end on April 14, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X