ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮೊದಲ ಬಾರಿಗೆ ಸುಪ್ರೀಂಕೋರ್ಟ್ ಕಲಾಪದ ನೇರ ಪ್ರಸಾರ

|
Google Oneindia Kannada News

ನವದೆಹಲಿ ಸೆಪ್ಟೆಂಬರ್ 27: ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಚಾರಣೆಗಳನ್ನು ಇಂದು (ಸೆಪ್ಟೆಂಬರ್ 27) ನೇರ ಪ್ರಸಾರ ಮಾಡಲಾಗುತ್ತಿದೆ. ಸುಪ್ರೀಂಕೋರ್ಟ್ ವಿಚಾರಣೆಗಳನ್ನು ನೇರ ಪ್ರಸಾರ ಮಾಡಲು 2018 ರಲ್ಲಿ ಶಿಫಾರಸು ಮಾಡಲಾಗಿತ್ತು. ಮೂರು ವರ್ಷಗಳ ನಂತರ ಮೊದಲ ಬಾರಿಗೆ ವಿಚಾರಣಾ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.

ಆಗಸ್ಟ್ 26 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಅಧಿಕಾರವಧಿಯ ಕೊನೆಯ ದಿನವಾಗಿತ್ತು. ಆ ದಿನವನ್ನು ಗುರುತಿಸಲು ಆಗಸ್ಟ್ 26 ರಂದು, ಸುಪ್ರೀಂಕೋರ್ಟ್ ಕಲಾಪಗಳನ್ನು ಆನ್‌ಲೈನ್‌ನಲ್ಲಿ ನೇರವಾಗಿ ನೋಡುವ ಟ್ರಯಲ್ ಮಾಡಲಾಯಿತು.

ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪಗಳ ನೇರ ಪ್ರಸಾರಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪಗಳ ನೇರ ಪ್ರಸಾರ

ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ನೋಟಿಸ್ ಪ್ರಕಾರ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ವಿದಾಯ ಹೇಳುವ ವಿಧ್ಯುಕ್ತ ಪೀಠದ ಪ್ರಕ್ರಿಯೆಗಳನ್ನು ವೆಬ್‌ಕಾಸ್ಟ್ ಪೋರ್ಟಲ್ ಮೂಲಕ ನೇರ ಪ್ರಸಾರ ಮಾಡಲಾಯಿತು.

Live streaming of Supreme Court proceedings for the first time

ಇಂದು ಮೊದಲ ಬಾರಿಗೆ ಉನ್ನತ ನ್ಯಾಯಾಲಯವು ತನ್ನ ವಿಚಾರಣೆಯನ್ನು ಲೈವ್-ಸ್ಟ್ರೀಮ್ ಮಾಡುತ್ತಿದೆ. ನಾಗರಿಕರು ಕೂಡ https://webcast.gov.in/events/MTc5Mg-- ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವಿಚಾರಣೆಯನ್ನು ನೇರವಾಗಿ ವೀಕ್ಷಿಸಬಹುದು. ಆದರೆ, ಇದು ಇಂದಿಗೆ ಮಾತ್ರ ಸೀಮಿತವೇ ಅಥವಾ ವಿದ್ಯುಕ್ತ ಪೀಠದ ವಿಚಾರಣೆಯ ಪ್ರಸಾರವನ್ನು ಪ್ರಾಯೋಗಿಕ ಯೋಜನೆಯಾಗಿ ನಡೆಸಲಾಗುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ವಿದ್ಯುಕ್ತ ಪೀಠದ ಹಾಲಿ ನ್ಯಾಯಾಧೀಶ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ನ ಇ-ಸಮಿತಿಯು, ಲೈವ್-ಸ್ಟ್ರೀಮಿಂಗ್ ನ್ಯಾಯಾಲಯದ ಪ್ರಕ್ರಿಯೆಗಳಿಗೆ ವಿಶೇಷ ವೇದಿಕೆಯನ್ನು ಪ್ರಾರಂಭಿಸುವ ಪ್ರಸ್ತಾಪದಲ್ಲಿ ಕೆಲಸ ಮಾಡುತ್ತಿದೆ.

ಉನ್ನತ ನ್ಯಾಯಾಲಯದ ವಿಚಾರಣೆಗಳನ್ನು ನೇರ ಪ್ರಸಾರ ಮಾಡುವುದು ಇ-ಕೋರ್ಟ್‌ಗಳ ಯೋಜನೆಯ ಮೂರನೇ ಹಂತದ ಭಾಗವಾಗಿದೆ, ಇದು ಭಾರತದ ನ್ಯಾಯಾಂಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆಯನ್ನು ಕಾರ್ಯಗತಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

Live streaming of Supreme Court proceedings for the first time

ಸೆಪ್ಟೆಂಬರ್ 2018 ರ ತೀರ್ಪಿನ ಪ್ರಕಾರ ಸುಪ್ರೀಂ ಕೋರ್ಟ್ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ನ್ಯಾಯವನ್ನು ಪಡೆಯುವ ಹಕ್ಕಿನ ಭಾಗವಾಗಿ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವನ್ನು ಘೋಷಿಸಿತು. ಸೆಪ್ಟೆಂಬರ್ 26, 2018 ರಂದು, ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರು ನೇರ ಪ್ರಸಾರ ಮಾಡುವ ಸಾಮಾನ್ಯ ತೀರ್ಪು ನೀಡಿದರು. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ತೀರ್ಪು ಪ್ರತ್ಯೇಕವಾಗಿತ್ತು, ಆದರೆ ನೇರ ಪ್ರಸಾರಕ್ಕೆ ಸಮ್ಮತ ನೀಡಿತ್ತು.

ನ್ಯಾಯಾಂಗ ಪ್ರಕ್ರಿಯೆಗಳ ನೇರ ಪ್ರಸಾರವು ನ್ಯಾಯಾಂಗ ಪ್ರಕ್ರಿಯೆಗಳಿಗೆ ಹೆಚ್ಚು ಪಾರದರ್ಶಕತೆಯನ್ನು ತರುತ್ತದೆ ಮತ್ತು ತಿಳಿವಳಿಕೆ ಪಡೆಯುವ ಸಾರ್ವಜನಿಕ ಹಕ್ಕನ್ನು ಜಾರಿಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ತರುವಾಯ, ಸುಪ್ರೀಂ ಕೋರ್ಟ್‌ನ ಇ-ಸಮಿತಿಯು ಭಾರತದಲ್ಲಿ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವನ್ನು ನಿಯಂತ್ರಿಸಲು ಮಾದರಿ ಮಾರ್ಗಸೂಚಿಗಳನ್ನು ನೀಡಿತ್ತು.

ಪ್ರಸ್ತುತ, ದೇಶದ ಗುಜರಾತ್, ಒರಿಸ್ಸಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ ಮತ್ತು ಮಧ್ಯಪ್ರದೇಶದ ಆರು ಹೈಕೋರ್ಟ್‌ಗಳು ತಮ್ಮ ಕಲಾಪಗಳನ್ನು ಯೂಟ್ಯೂಬ್‌ನಲ್ಲಿ ತಮ್ಮದೇ ಚಾನೆಲ್‌ಗಳ ಮೂಲಕ ಲೈವ್-ಸ್ಟ್ರೀಮ್ ಮಾಡುತ್ತವೆ.

English summary
Live streaming of Supreme Court proceedings for the first time on Friday, to mark outgoing Chief Justice NV Ramana’s last day. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X