ಕಟ್ಟಡದಿಂದ ಜಿಗಿದು ಐಎಎಸ್ ದಂಪತಿ ಪುತ್ರಿ ಆತ್ಮಹತ್ಯೆ; ಕಾರಣವೇನು?
ಐಎಎಸ್ ದಂಪತಿಯ ಮಗಳು 10ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದಕ್ಷಿಣ ಮುಂಬೈನ ಮಂತ್ರಲಯದ ಬಳ ಸರ್ಕಾರಿ ವಸತಿ ಕಟ್ಟಡದಲ್ಲಿ ಘಟನೆ ನಡೆದಿದೆ.
ಹರಿಯಾಣದ ಸೋನಿಪತ್‌ನಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ ಕಾನೂನು ವಿದ್ಯಾರ್ಥಿನಿ 27 ವರ್ಷದ ಲಿಪಿ ರಸ್ತೋಗಿ ಮುಂಜಾನೆ 4 ಗಂಟೆಗೆ ಮಂತ್ರಾಲಯದ ಬಳಿಯ ಐಎಎಸ್ ಅಧಿಕಾರಿಗಳ ಸರ್ಕಾರಿ ವಸತಿಗೃಹದಲ್ಲಿ ಎಲ್ಲರೂ ಮಲಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆವರಣದ ಬಳಿ ನಿಲ್ಲಿಸಿದ್ದ ಮೋಟಾರ್‌ಬೈಕ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಲಿಪಿ ರಸ್ತೋಗಿ ಬಿದ್ದಿರುವುದನ್ನು ಕಂಡು ಕಟ್ಟಡದಲ್ಲಿ ನಿಯೋಜಿಸಲಾದ ಸಿಬ್ಬಂದಿ ಯುವತಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದರು, ನಂತರ ಅವರನ್ನು ಜಿಟಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒತ್ತಡದಿಂದ ಬೇಸತ್ತು ಆತ್ಮಹತ್ಯೆ?
ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇದು ಆತ್ಮಹತ್ಯೆ ಎಂದು ನಂಬಲು ಲಿಪಿ ಕೋಣೆಯಲ್ಲಿ ಪತ್ರವೊಂದ ಸಿಕ್ಕಿದೆ.
ಸಿಕ್ಕಿರುವ ಪತ್ರದಲ್ಲಿ ಲಿಪಿ ತನ್ನ ನಿರ್ಧಾರಕ್ಕೆ ಯಾರೂ ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. ಕಫೆ ಪರೇಡ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲಿಪಿ ತನ್ನ ಶೈಕ್ಷಣಿಕ ಸಾಧನೆಗೆ ಸಂಬಂಧಿಸಿದಂತೆ ಅಪಾರ ಒತ್ತಡದಲ್ಲಿದ್ದು, ಆಕೆಯ ಸಂಕಷ್ಟಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಲಿಪಿ ಅವರ ತಂದೆ ವಿಕಾಸ್ ರಸ್ತೋಗಿ ಅವರು ಮಹಾರಾಷ್ಟ್ರದ ಉನ್ನ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮುಖ ಸ್ಥಾನವನ್ನು ಹೊಂದಿದ್ದು, ಅವರ ತಾಯಿ ರಾಧಿಕಾ ರಸ್ತೋಗಿ ಅವರು ರಾಜ್ಯ ಸರ್ಕಾರದಲ್ಲಿ ಹಿರಿಯ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಘಟನೆಯು 2017 ರಲ್ಲಿ ಮಿಲಿಂದ್ ಮತ್ತು ಮನಿಷಾ ಮೈಸ್ಕರ್ ಅವರ 18 ವರ್ಷದ ಮಗ ಮುಂಬೈನಲ್ಲಿ ಎತ್ತರದ ಮಹಡಿಯಿಂದ ಜಿಗಿದ ಘಟನೆಯನ್ನು ನೆನಪಿಸಿದೆ.












Click it and Unblock the Notifications