Lionel Messi: ಅನಂತ್ ಅಂಬಾನಿಯ 'ವಂತಾರ'ಕ್ಕೆ ಫುಟ್ಬಾಲ್ ದಂತಕಥೆ ಮೆಸ್ಸಿ ಭೇಟಿ
ಭಾರತದ ಪ್ರವಾಸದಲ್ಲಿರುವ ಜಾಗತಿಕ ಫುಟ್ಬಾಲ್ ತಾರೆ ಲಯೋನೆಲ್ ಮೆಸ್ಸಿ ಅವರು ಅನಂತ್ ಅಂಬಾನಿ ಅವರು ಆರಂಭಿಸಿರುವ ಗುಜರಾತ್‌ನ ವಂತಾರಕ್ಕೆ ಭೇಟಿ ನೀಡಿದರು. ವಂತಾರಾ ಅನಂತ್ ಅಂಬಾನಿ ಅವರು ಆರಂಭಿಸಿದ ವನ್ಯಜೀವಿಗಳ ಪುನರ್ವಸತಿ ಹಾಗೂ ಸಂರಕ್ಷಣಾ ತಾಣಕ್ಕೆ ಲಯೋನೆಲ್ ಮೆಸ್ಸಿ ಅವರ ಈ ಭೇಟಿ ಗಮನ ಸೆಳೆಯಿತು. ಮೆಸ್ಸಿ ತಮ್ಮ ಭೇಟಿಯ ವೇಳೆ ಸಾಂಸ್ಕೃತಿಕ ಮೌಲ್ಯವನ್ನು ಪ್ರತಿಬಿಂಬಿಸುವಂತಹ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾದರು. ವಂತಾರದಲ್ಲಿ ಪ್ರಾಣಿಗಳ ಆರೈಕೆ ಮಾಡುವವರು, ಸಂರಕ್ಷಣಾ ತಂಡದ ಜೊತೆಗೆ ಮಾತುಕತೆ ನಡೆಸಿ ವನ್ಯಪ್ರಾಣಿಗಳನ್ನು ವೀಕ್ಷಿಸಿದರು.
ತಮ್ಮ ವಿನಯವಂತಿಕೆ ಹಾಗೂ ಮಾನವೀಯ ಮೌಲ್ಯಗಳಿಗೆ ಬಹಳ ಹೆಸರುವಾಸಿಯಾಗಿರುವ ಮೆಸ್ಸಿ ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಅನಂತ್ ಅಂಬಾನಿ ಅವರ ಬದ್ಧತೆಯನ್ನು ಶ್ಲಾಘಿಸಿದರು. ಈ ವೇಳೆ ಇಬ್ಬರ ಬಾಂಧವ್ಯ ಹಾಗೂ ಸ್ನೇಹ ಗಮನ ಸೆಳೆಯುತ್ತಿತ್ತು. ವಂತಾರ ಭೇಟಿ ಸಂದರ್ಭದಲ್ಲಿ ಮೆಸ್ಸಿ ಜೊತೆಗೆ ಅವರ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುಯೆರೆಜ್ ಮತ್ತು ರೋಡ್ರಿಗೋ ಡಿ ಪಾಲ್ ಸಹ ಇದ್ದರು. ಜನಪದ ಸಂಗೀತದೊಂದಿಗೆ ಎಲ್ಲರಿಗೂ ಭರ್ಜರಿ ಸ್ವಾಗತ ಕೋರಲಾಯಿತು. ಸ್ವಾಗತದ ಸಂದರ್ಭದಲ್ಲಿನ ಆರತಿ ಸಹ ಮಾಡಲಾಯಿತು. ದೇವಸ್ಥಾನದಲ್ಲಿ ಮಹಾ ಆರತಿ ವೇಳೆ ಮೆಸ್ಸಿ ಪಾಲ್ಗೊಂಡರು. ಅಂಬೆ ಮಾತಾ ಪೂಜೆ, ಗಣೇಶನ ಪೂಜೆ, ಹನುಮಂತನ ಪೂಜೆ ಮತ್ತು ಶಿವನ ಅಭಿಷೇಕಗಳಲ್ಲಿಯೂ ಭಾಗಿಯಾದರು. ವಿಶ್ವಶಾಂತಿ ಮತ್ತು ಒಗ್ಗಟ್ಟಿಗಾಗಿ ಪ್ರಾರ್ಥಿಸಲಾಯಿತು.

ಸಿಂಹದ ಮರಿಗೆ ಮೆಸ್ಸಿ ಹೆಸರು
ಇಡೀ ವಂತಾರವನ್ನು ಮೆಸ್ಸಿ ಸುತ್ತಾಡಿದರು. ಇಲ್ಲಿನ ಗ್ರೀನ್ ಎನರ್ಜಿ ಸಮುಚ್ಚಯಕ್ಕೆ ಕೂಡ ಭೇಟಿ ನೀಡಿದ ಅವರು, ವಿಶ್ವದ ಅತಿದೊಡ್ಡ ಸಂಸ್ಕರಣಾ ಘಟಕವನ್ನು ವೀಕ್ಷಿಸಿದರು. ಅಷ್ಟು ದೊಡ್ಡ ಮಟ್ಟದ ಕಾರ್ಯಾಚರಣೆ ಕಂಡು ಆಶ್ಚರ್ಯ ಪಟ್ಟರು. ಭಾರತದಲ್ಲಿ ವನ್ಯಪ್ರಾಣಿಗಳ ಬಗೆಗಿನ ಕಾಳಜಿ ಹಾಗೂ ಸಂರಕ್ಷಣೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಬದ್ಧತೆ ಕುರಿತು ಮೆಸ್ಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಅನಂತ್-ರಾಧಿಕಾ ದಂಪತಿ ವಂತಾರದಲ್ಲಿನ ಸಿಂಹದ ಮರಿಯೊಂದಕ್ಕೆ 'ಲಯೋನೆಲ್' ಎಂದು ನಾಮಕರಣ ಮಾಡಿದರು. ಇಡೀ ಪ್ರವಾಸದಲ್ಲಿ ಆನೆ ಕಾಳಜಿ ಕೇಂದ್ರದಲ್ಲಿ ಮೆಸ್ಸಿ ಅವರು ಮಾಣಿಕ್ ಲಾಲ್ ಎಂಬ ಆನೆ ಮರಿ ಹಾಗೂ ಅದರ ತಾಯಿ ಪ್ರತಿಮಾ ಜೊತೆಗೆ ಖುಷಿಯಿಂದ ಸಮಯ ಕಳೆದರು.
ಮೆಸ್ಸಿ ವಂತಾರಕ್ಕೆ ಭೇಟಿ ನೀಡಿದ್ದಕ್ಕಾಗಿ ಅನಂತ್ ಅಂಬಾನಿ ಧನ್ಯವಾದ ಹೇಳಿದರು. ಇದಕ್ಕೆ ವಂತಾರ ಮಾಡುತ್ತಿರುವುದು ನಿಜವಾಗಿಯೂ ಸುಂದರವಾದದ್ದು. ಆ ಪ್ರಾಣಿಗಳಿಗಾಗಿ ಮಾಡುತ್ತಿರುವ ಕೆಲಸ, ಅವುಗಳು ಪಡೆದುಕೊಳ್ಳುವ ಕಾಳಜಿ, ಅವುಗಳ ಸಂರಕ್ಷಣೆ ಮತ್ತು ಅವುಗಳನ್ನು ನೋಡಿಕೊಳ್ಳುವುದು ಎಲ್ಲವೂ ಚಂದ. ನಿಜಕ್ಕೂ ಮೆಚ್ಚುಗೆ ಪಡೆಯುವಂಥದ್ದು. ನಾವು ಇಲ್ಲಿ ಅದ್ಭುತ ಕ್ಷಣಗಳನ್ನು ಕಳೆದೆವು. ಈ ಅನುಭವ ನಮ್ಮ ಜೊತೆ ಸದಾ ಉಳಿಯುತ್ತದೆ. ಈ ಅರ್ಥಪೂರ್ಣ ಕಾರ್ಯಕ್ಕೆ ಸ್ಫೂರ್ತಿ ನೀಡುವುದಕ್ಕೆ, ಬೆಂಬಲಿಸುವ ಸಲುವಾಗಿ ಖಂಡಿತವಾಗಿಯೂ ಇಲ್ಲಿಗೆ ಮತ್ತೆ ಬರುತ್ತೇನೆ ಎಂದು ಹೇಳಿದರು.

ಈ ಭೇಟಿಯ ಕೊನೆಯಲ್ಲಿ ನಾರಿಯಲ್ ಉತ್ಸರ್ಗ್ ಹಾಗೂ ಮಟ್ಕಾ ಫೋಡ್ ಎಂಬ ಸಾಂಪ್ರದಾಯಿಕ ಆಚರಣೆಯಲ್ಲಿ ಮೆಸ್ಸಿ ಭಾಗಿಯಾದರು. ಇದು ಶುಭಾರಂಭದ ದ್ಯೋತಕವಾಗಿ ಹೀಗೆ ಆಚರಿಸಲಾಗುತ್ತದೆ. ಎಲ್ಲರ ಒಳಿತಿಗೆ ಹಾಗೂ ಶಾಂತಿಗಾಗಿ ಮಂತ್ರ ಪಠಣ ಮಾಡಲಾಯಿತು. ಮೆಸ್ಸಿ ಅವರು ಲಿಯೋ ಮೆಸ್ಸಿ ಫೌಂಡೇಷನ್ ಎಂಬುದನ್ನು ಹೊಂದಿದ್ದು, ಇದು ಸಾಮಾಜಿಕ ಕಾರ್ಯಗಳಿಗೆ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿಶ್ವದಾದ್ಯಂತ ಕೆಲಸ ಮಾಡುತ್ತದೆ. ವಂತಾರದ ಉದ್ದೇಶ ಕೂಡ ಅದನ್ನು ಹೋಲುವಂತೆಯೇ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications