ವಿಮೆ ಪಾಲಿಸಿಯೊಂದಿಗೂ ಆಧಾರ್ ಜೋಡಣೆ ಕಡ್ಡಾಯ

ನವದೆಹಲಿ, ನವೆಂಬರ್ 09: ಇನ್ನುಮೇಲೆ ಸಾರ್ವತ್ರಿಕ ಗುರುತಿನ ಸಂಖ್ಯೆಯಾದ ಆಧಾರ್ ಅನ್ನು ವಿಮಾ ಪಾಲಿಸಿಯೊಂದಿಗೂ ಜೋಡಿಸುವುದು ಕಡ್ಡಾಯ. ಹೌದು, ಈ ನಿಯಮವನ್ನು ದಿ ಇನ್ಶುರನ್ಸ್ ರೆಗ್ಯುಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ(ಐಆರ್ ಡಿಎಐ)ಜಾರಿಗೆ ತಂದಿದೆ.

ಹಣಕಾಸು ಅವ್ಯವಹಾರ ತಪ್ಪಿಸುವ ಸಲುವಾಗಿ ಈ ನಿಯಮ ಜಾರಿಗೆ ತರಲಾಗಿದ್ದು, ವಿಮಾ ಪಾಲಿಸಿಗೆ ಆಧಾರ್ ಜೋಡಿಸುವುದಕ್ಕೆ ಕೊನೆಯ ದಿನಾಂಕ ಯಾವುದು ಎಂಬ ಬಗ್ಗೆ ಐಆರ್ ಡಿಎಐ, ಇನ್ನೂ ಮಾಹಿತಿ ನೀಡಿಲ್ಲ.

Linking Aadhaar with insurance policy mandatory

ಇನ್ಶುರೆನ್ಸ್ ಮತ್ತಿತರ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ನಂಬರ್ ಅಥವಾ ಆಧಾರ್ ಅನ್ನು ಈ ಮೊದಲೇ ಕಡ್ಡಾಯಗೊಳಿಸಲಾಗಿತ್ತು. ಈಗಾಗಲೇ ಇರುವ ಪಾಲಿಸಿಗಳನ್ನೂ ಆಧಾರ್ ಜೊತೆ ಜೋಡಿಸುವಂತೆ ಐಆರ್ ಡಿಎಐ ತಿಳಿಸಿದೆ.

ದೇಶದಲ್ಲಿ ಈಗಾಗಲೇ ಇರುವ 24 ಜೀವ ವಿಮಾ ಕಂಪೆನಿಗಳು ಮತ್ತು 33 ಜನರಲ್ ಇನ್ಷುರೆನ್ಸ್ ಕಂಪೆನಿಗಳು ಈ ನಿಯಮವನ್ನು ಪಾಲಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+