ಎಲ್ಲ ಮೊಬೈಲ್ ಸಂಖ್ಯೆಯೂ ವರ್ಷದೊಳಗೆ ಆಧಾರ್ ಜತೆಗೆ ಲಿಂಕ್ ಆಗಿರ್ಬೇಕು: ಸುಪ್ರೀಂ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಫೆಬ್ರವರಿ 6: ದೇಶದಲ್ಲಿರುವ ಎಲ್ಲ ಮೊಬೈಲ್ ಫೋನ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ತಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಮಾಡಿರಬೇಕು. ಅದು ಇನ್ನು ಒಂದು ವರ್ಷದೊಳಗೆ ಮುಗಿದಿರಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪ್ರೀ ಪೇಯ್ಡ್, ಪೋಸ್ಟ್ ಪೇಯ್ಡ್ ಎಲ್ಲ ಮೊಬೈಲ್ ಬಳಕೆದಾರರು ಸಹ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದಕ್ಕೆ ಕೇಂದ್ರ ಸರಕಾರಕ್ಕೆ ಕೋರ್ಟ್ ಒಂದು ವರ್ಷದ ಗಡುವು ನೀಡಿದೆ. ನೂರು ಕೋಟಿಗೂ ಹೆಚ್ಚು ಮೊಬೈಲ್ ಗ್ರಾಹಕರಿದ್ದಾರೆ. ಎಲ್ಲರೂ ತಪ್ಪದೆ ಆಧಾರ್ ಅನ್ನು ಒಂದು ವರ್ಷದಲ್ಲಿ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು ಎಂದು ಹೇಳಿದೆ.[ಜಲ್ಲಿಕಟ್ಟು ಮಸೂದೆಗೆ ತಡೆ ನೀಡಲು ಸುಪ್ರಿಂ ನಕಾರ]

Link all mobile numbers to Aadhar within 1 year:SC

ಇನ್ನೂ ಮುಂದುವರಿದು, ಪ್ರೀ ಪೇಯ್ಡ್ ಗ್ರಾಹಕರು ಯಾವಾಗೆಲ್ಲ ಕರೆನ್ಸಿ ಹಾಕಿಸಿಕೊಳ್ಳುತ್ತಾರೋ ಆಗೆಲ್ಲ ಒಂದು ಅರ್ಜಿಯನ್ನು ತುಂಬಿ, ಸಲ್ಲಿಸುವಂತೆ ನಿಯಮ ಮಾಡಿ. ಒಂದು ವರ್ಷದೊಳಗೆ ಅಗತ್ಯ ನಿಯಮಾವಳಿಗಳನ್ನು ಕೇಂದ್ರ ಸರಕಾರ ರೂಪಿಸಬೇಕು. ಆಗಷ್ಟೇ ಸಿಮ್ ಕಾರ್ಡ್ ಗಳ ದುರುಪಯೋಗ ತಡೆಯಬಹುದು ಎಂದು ಕೋರ್ಟ್ ತಿಳಿಸಿದೆ.

ಮೊಬೈಲ್ ಫೋನ್ ಅನ್ನು ಬ್ಯಾಂಕ್ ವ್ಯವಹಾರಗಳಿಗೆ ಕೂಡ ಬಳಸುವುದರಿಂದ ಸರಿಯಾದ ಪರಿಶೀಲನೆ ಅತ್ಯವಶ್ಯ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court on Monday directed the centre to ensure that the Aadhar number of every phone subscriber should be registered within a year. The SC set an outer limit of 1 year for the centre to register details of each mobile phone subscriber including those with pre-paid connections.
Please Wait while comments are loading...