ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಶಿಮಠದಂತೆ ಜಮ್ಮು ಕಾಶ್ಮೀರಾದ ದೋಡಾದಲ್ಲೂ ಏಳು ಮನೆಗಳಲ್ಲಿ ಬಿರುಕು!

ಉತ್ತರಖಂಡದ ಜೋಶಿಮಠದಂತೆ ಜಮ್ಮು ಮತ್ತು ಕಾಶ್ಮೀರದಲ್ಲೂ ಕಟ್ಟಡ ಕುಸಿದಿರುವುದು ಬೆಳಕಿಗೆ ಬಂದಿದೆ.

|
Google Oneindia Kannada News

ಉತ್ತರಾಖಂಡದ ಜೋಶಿಮಠದಲ್ಲಿರುವ ಕಟ್ಟಡಗಳು ಭೂಮಿ ಕುಸಿತದಿಂದ ಬಿರುಕು ಬಿಟ್ಟಿರುವುದು ದೇಶವ್ಯಾಪಿ ಚರ್ಚೆಯಲ್ಲಿರುವಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲೂ ಕಟ್ಟಡಗಳು ಬಿರುಕುಬಿಟ್ಟಿರುವುದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಏಳು ಮನೆಗಳು ಬಿರುಕು ಬಿಟ್ಟಿವೆ ಎಂದು ಶುಕ್ರವಾರ ಇಂಡಿಯಾ ಟುಡೇ ವರದಿ ಮಾಡಿದೆ.

ದೋಡಾ ಜಿಲ್ಲೆಯ ಥಾತ್ರಿ ಪಟ್ಟಣದ ಬಸ್ತಿ ಪ್ರದೇಶದ ಬಿರುಕು ಬಿಟ್ಟ ಮನೆಗಳ ಸದಸ್ಯರು ಆತಂಕಗೊಂಡಿದ್ದಾರೆ. ಜೊತೆಗೆ ಪ್ರಾಣ ಭೀತಿಯಿಂದ ಕುಟುಂಬ ಸಮೇತ ತಮ್ಮ ನೆರೆಹೊರೆಯವರು ಅಥವಾ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೂವಿಜ್ಞಾನಿಗಳು ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಬಿರುಕು ಬಿಟ್ಟಿರುವ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ.

Joshimath : 5.4 ಸೆಂ.ಮೀ. ವರೆಗೂ ಮುಳುಗಿದ ಜೋಶಿಮಠ: ಇಸ್ರೋ ಮಾಹಿತಿJoshimath : 5.4 ಸೆಂ.ಮೀ. ವರೆಗೂ ಮುಳುಗಿದ ಜೋಶಿಮಠ: ಇಸ್ರೋ ಮಾಹಿತಿ

ಕಳೆದ ದಿನ ಜಮ್ಮುವಿನ ನರ್ವಾಲ್ ಪ್ರದೇಶದ ಟ್ರಾನ್ಸ್‌ಪೋರ್ಟ್ ನಗರದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದಿದೆ. ಕಟ್ಟಡವು ಆಟೋ ಸ್ಟೋರ್ ಆಗಿತ್ತು ಮತ್ತು ಇದು ಟ್ರಾನ್ಸ್‌ಪೋರ್ಟ್ ನಗರದ ಯಾರ್ಡ್ ಸಂಖ್ಯೆ 6 ರಲ್ಲಿದೆ. ಕಟ್ಟಡ ಕುಸಿತದಿಂದ ಇಲ್ಲಿಯವರೆಗೆ, ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಈ ಬಗ್ಗೆ ಜಮ್ಮು ಅಭಿವೃದ್ಧಿ ಪ್ರಾಧಿಕಾರ ತನಿಖೆ ಆರಂಭಿಸಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹವಮಾನ ಬದಲಾವಣೆಯಿಂದಾಗಿ ಅಧಿಕ ಮಳೆಯಾಗುತ್ತಿದೆ. ಇದೇ ಪ್ರದೇಶದಲ್ಲಿ ಕೆಲ ಕಟ್ಟಡಗಳು ಬಿರುಕುಗೊಂಡಿರುವ ವರದಿಗಳಾಗಿದೆ.

Like Joshimath, Doda in Jammu and Kashmir also has cracks in seven houses!

ಮುಳುಗುತ್ತಿರುವ ಜೋಶಿಮಠ

ಇನ್ನೂ ಜೋಶಿಮಠದ ಉಪಗ್ರಹ ಚಿತ್ರಗಳು ಭೂಮಿ ಕುಸಿತದಿಂದ ಪಟ್ಟಣವು ಹೇಗೆ ಕ್ರಮೇಣ ಕುಸಿಯುತ್ತಿದೆ ಎಂಬುದನ್ನು ತೋರಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಬಿಡುಗಡೆ ಮಾಡಿದ ಚಿತ್ರಗಳು, ಡಿಸೆಂಬರ್ 27, 2022 ಮತ್ತು ಜನವರಿ 8, 2023 ರ ನಡುವೆ 12 ದಿನಗಳಲ್ಲಿ 5.4 ಸೆಂ.ಮೀ ಕುಸಿತ ಜೋಶಿಮಠದಲ್ಲಿ ದಾಖಲಿಸಲಾಗಿದೆ ಎಂದು ಬಹಿರಂಗಪಡಿಸಿದೆ.

ಜೋಶಿಮಠದಲ್ಲಿ ಭೂಕುಸಿತಕ್ಕೆ ಕಾರಣವನ್ನು ಕಂಡು ಹಿಡಿಯಲು ತಜ್ಞರ ತಂಡವನ್ನು ರಚಿಸಲಾಗಿದೆ. ಈ ತಂಡ ಭೂಗತ ಅಭಿವೃದ್ಧಿ ಚಟುವಟಿಕೆಗಳು, ಭೂಕುಸಿತ ಮತ್ತು ಇತರ ಸಂಬಂಧಿತ ಅಂಶಗಳು ಜೋಶಿಮಠದ ಹಲವಾರು ಮನೆಗಳ ಗೋಡೆಗಳಲ್ಲಿ ದೊಡ್ಡ ಬಿರುಕುಗಳಿಗೆ ಕಾರಣ ಎಂದು ಹೇಳಿದೆ. ಹೀಗಾಗಿ ಜೋಶಿಮಠದಲ್ಲಿ ವಾಸಿಸುತ್ತಿದ್ದ ಒಟ್ಟು 169 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವು ಕಟ್ಟಡಗಳು ಈಗಾಗಲೇ ಕುಸಿದಿದ್ದು, ಇನ್ನು ಕೆಲವು ಕಟ್ಟಡಗಳನ್ನು ಅಧಿಕಾರಿಗಳು ಕೆಡವಲು ಮುಂದಾಗಿದ್ದಾರೆ.

English summary
Cracked buildings in Uttarakhand's Joshimath due to landslides While there is talk across the country, there are reports of cracked buildings in Jammu and Kashmir as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X