Ladakh: ಲಡಾಖ್ ಹಿಂಸಾಚಾರ: ಶಾಂತಿಯ ನೆಲದಲ್ಲಿ ಬೆಂಕಿ, ಸೋನಂ ವಾಂಗ್ಚುಕ್ ಇದಕ್ಕೆಲ್ಲ ಕೇಂದ್ರಬಿಂದು
ಭಾರತದ ಕಿರೀಟದಂತಿರುವ ಲಡಾಖ್ ನಲ್ಲಿ ಅಶಾಂತಿ ಉಮಟಾಗಿದೆ. ಇಲ್ಲಿನ ಜನರು, ಹಿಮನದಿಗಳು, ಪ್ರಮುಖ ಸ್ಥಳಗಳ ಸಹಿತ ಮಹತ್ವ ಪಡೆದುಕೊಂಡಿದೆ. ಇಂತಹ ನೆಲದಲ್ಲಿ ನಡೆದ ಹಿಂಸಾಚಾರದಿಂದ ಶಾಂತಿಯ ಚಿತ್ರಣ ಸಂಪೂರ್ಣ ಹಾಳಾಗಿದೆ. ಪ್ರಾರ್ಥನೆ ಧ್ವಜಗಳಿಂದ ತುಂಬಿದ್ದ ಬೀದಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜನರ ಹಿಂಸಾಚಾರದಲ್ಲಿ ತೊಡಗಿದ್ದು, ಅಪಾರ ನಷ್ಟ ಉಂಟಾಗಿದೆ. ಪರಿಸ್ಥಿತಿ ಹದಗೆಟ್ಟಿದೆ.
ಈ ಅಶಾಂತಿಯ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಹೋರಾಟಗಾರ ಎನ್ನಲಾದ ನವೋದ್ಯಮಿ ಸೋನಂ ವಾಂಗ್ಚುಕ್ ಸಹ ಇಲ್ಲಿದ್ದಾರೆ. ಅವರೇ ಇಲ್ಲಿನ ಅಶಾಂತಿ ಕೇಂದ್ರ ಬಿಂದುವಾಗಿದ್ದು, ಅಹಿತಕರ ಘಟನೆಗಳಿಗೆ ಉತ್ತೇಜನ ನೀಡದ್ದಾರೆಂದು ಬಂಧಿಸಲಾಗಿದೆ. ಸೆಪ್ಟೆಂಬರ್ 24ರಂದು ಲೇಹ್‌ನಲ್ಲಿ ಹಿಂಸಾಚಾರ ಶುರುವಾಯಿತು. ರಾಜ್ಯದ ಸ್ಥಾನ ಮಾನ ಬೇಕು ಮತ್ತು ಆರನೆಯ ಅನುಸೂಚನೆ (Sixth Schedule) ರಕ್ಷಣೆಗೆ ಬೇಡಿಕೆ ಹೆಸರಿನಲ್ಲಿ ಸಣ್ಣದಾಗಿ ಪ್ರತಿಭಟನೆ ಆರಂಭವಾಗಿತ್ತು. ಅದು ನಂತರದ ದಿನಗಳಲ್ಲಿ ನೋಡು ನೋಡುತ್ತಿದ್ದಂತೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರ ಸರ್ಕಾರ ಮತ್ತು ಬಿಜೆಪಿಯ ಕಚೇರಿಗಳ ಮೇಲೆ ದಾಳಿ ನಡೆಸಿದರು. ವಾಹನಗಳಿಗೆ ಬೆಂಕಿ ಹಚ್ಚಿದರು. ಘಟನೆ ನಿಯಂತ್ರಣಕ್ಕೆ ಮುಂದಾದ ಪೊಲೀಸರ ಮೇಲೂ ಕಲ್ಲೂ ತೂರಾಟ ನಡೆಸಿದರು.

ಈ ಹಿಂಸಾಚಾರ ಭುಗಿಲೆದ್ದಿತು. ಈ ನಾಲ್ವರು ಮೃತಪಟ್ಟಿದ್ದಾರೆ. ಹಲವಾರು ಜನ ಗಾಯಗೊಂಡಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ವಾಹನವೊಂದು ಸುಟ್ಟು ಹೋಗಿದೆ. ಘಟನೆ ಕೈ ಮೀರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ತಕ್ಷಣವೇ ಕರ್ಫ್ಯೂ ಘೋಷಿಸಲಾಯಿತು. ಪೊಲೀಸರು ಹಾಗೂ ಸಾರ್ವಜನಿಕ ಆಸ್ತಿಗಳನ್ನು ಗುರಿಯಾಗಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಆಧ್ಯಾತ್ಮ ಮತ್ತು ಶಾಂತಿಯ ಪ್ರತೀಕವೆಂದು ಕರೆಯಲ್ಪಡುವ ಲಡಾಖ್ ಸದ್ಯ ಬೆಂಕಿಯಲ್ಲಿ ಬೇಯುತ್ತಿದೆ. ಕಲ್ಲೆಸೆತದ ದೃಶ್ಯಗಳು ದೇಶದ ಜನರನ್ನು ಬೆಚ್ಚಿಬೀಳಿಸುತ್ತಿವೆ. ಅಧಿಕಾರಿಗಳು ಹೇಳುವಂತೆ, ಇದು ಅಚಾನಕ್ಕಾಗಿ ನಡೆದ ಪ್ರತಿಭಟನೆ ಅಲ್ಲ, ಬದಲಿಗೆ ರಾಜಕೀಯ ಹಿತಾಸಕ್ತಿಯಿಂದ ಹೆಚ್ಚಾದ ಹೋರಾಟದ ಪ್ರತಿಫಲ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.
ಸೋನಂ ವಾಂಗ್ಚುಕ್ ನಿಜ ಮುಖ ಬಯಲು
ಹೋರಾಟಗಾರ ಸೋನಂ ವಾಂಗ್‌ಚುಕ್ ಲದಾಖ್‌ನಲ್ಲಿ ಖ್ಯಾತಿ ಗಳಿಸಿದ್ದ. 3 ಈಡಿಯಟ್ಸ್ ಸಿನಿಮಾ ಪಾತ್ರವೊಂದಕ್ಕೆ ಸ್ಫೂರ್ತಿ ನೀಡುವುದರಿಂದ ಹಿಡಿದು ಜಾಗತಿಕ ಪರಿಸರ ಪ್ರಶಸ್ತಿ ಪಡೆಯುವವರೆಗೆ, ಅವರು ನಾವೀನ್ಯಕಾರ ಮತ್ತು ಸುಧಾರಕರಾಗಿ ಜನಪ್ರಿಯತೆ ಹೊಂದಿದ್ದರು.ಅವರು ಯಾವಾಗಲೂ ವಿಮರ್ಶಕರು ತತ್ವಕ್ಕಿಂತ ಹೆಚ್ಚಿನ ಅವಕಾಶವಾದವನ್ನು ಬಹಿರಂಗಪಡಿಸಿದ್ದಾರೆ. ಅವರು ಅಸಮಂಜಸ ನಿಲುವು ಹೊಂದಿದ್ದನ್ನು ಇಲ್ಲಿ ಗಮನಿಸಬಹುದು.
2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ನೇ ವಿಧಿಯನ್ನು ರದ್ದುಗೊಳಿಸಲಾಯಿತು. ಆಗ ಸದರಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿಸಲಾಯಿತು. ಅಂದು ಇದೇ ವಾಂಗ್‌ಚುಕ್ ಈ ನಿರ್ಧಾರವನ್ನು ಸ್ವಾಗತಿಸಿದ್ದರು. ಆ ಸಮಯದಲ್ಲಿ ಅವರ ಮಾತುಗಳು ಸ್ಪಷ್ಟವಾಗಿದ್ದವು. ಅಲ್ಲದೇ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದರು. ಲಡಾಖ್ ಲಡಾಖ್‌ನ ದೀರ್ಘಕಾಲದ ಕನಸನ್ನು ಈಡೇರಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದ್ದರು. 30 ವರ್ಷಗಳ ಹಿಂದೆ 1989 ರಲ್ಲಿ ಲಡಾಖ್ ನಾಯಕರು ಯುಟಿ ಸ್ಥಾನಮಾನಕ್ಕಾಗಿ ಚಳುವಳಿ ಆರಂಭಿಸಿದ್ದರು. ಅವರ ಸಹಾಯ ನೆನೆದು ವಾಂಗ್‌ಚುಕ್ ಧನ್ಯವಾದ ತಿಳಿಸಿದ್ದರು. ಅಂದಿನ ಕೃತಜ್ಞತೆಯು ಇದೀಗ ರಾಜ್ಯತ್ವಕ್ಕಾಗಿ ನಕಾರಾತ್ಮಕ ಆರೋಪಗಳಾಗಿ ಬದಲಾಗಿವೆ. ಇದು ಅವರ ಎರಡು ಬದಿಯ ಆಲೋಚನೆ, ನಿಲುವುಗಳನ್ನು ಸೂಚಿಸುತ್ತದೆ.

ಫ್ಯಾಂಗ್ ಭೂಮಿ ವಿವಾದ
ವಾಂಗ್‌ಚುಕ್ ಅವರ ಅಮೂಲ್ಯ ಯೋಜನೆ ತಲೆಕೆಳಗೆ ಮಾಡಿ ಲಡಾಖ್ ಆಡಳಿತವು ಮಹತ್ವದ ತಿರುವು ಪಡೆದಿತ್ತು ಎಂದು ಅನೇಕರು ಹೇಳುತ್ತಾರೆ. ಲೇಹ್‌ನ ಉಪ ಆಯುಕ್ತರು ಫಿಯಾಂಗ್‌ನಲ್ಲಿರುವ 135 ಎಕರೆ ಭೂಮಿಯನ್ನು 40 ವರ್ಷಗಳ ಗುತ್ತಿಗೆ ನೀಡಿದ್ದನ್ನು ಮರಳಿ ಪಡೆದಿದ್ದರು. ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲರ್ನಿಂಗ್ (HIAL) ಗುತ್ತಿಗೆ ಪಡೆದುಕೊಂಡಿತ್ತು. ಆದೇಶನ್ವಯ ಗುತ್ತಿಗೆ ಮುಗಿದು ಆರು ವರ್ಷವಾಗಿದೆ. ಈ ಭೂಮಿಯಲ್ಲಿ ಯಾವುದೇ ಗಣನೀಯ ಅಭಿವೃದ್ಧಿ ಆಗಿಲ್ಲ. ಗುತ್ತಿಗೆ ಪಾವತಿ ಸಹ ಆಗಿಲ್ಲ, ಬಾಕಿ ಇದೆ ಎನ್ನಲಾಗಿದೆ. ಗ್ರಾಮಸ್ಥರು ಅತಿಕ್ರಮಣದ ಬಗ್ಗೆ ದೂರು ನೀಡಿದ್ದು ಪ್ರಕರಣ ಗಂಭೀರವಾಗಲು ಕಾರಣವಾಗಿದೆ. ಗುತ್ತಿಗೆ ಅವಧಿ ಮುಗಿದಿದೆ, ಬಾಕಿಗಳನ್ನು ತೆರವುಗೊಳಿಸಿ ಭೂಮಿ ಸರ್ಕಾರಕ್ಕೆ ಹಿಂತಿರುಗಿಸುವಂತೆ ತೀರ್ಪು ಸಹ ಆಗಿದೆ.
ಈ ನಿರ್ಧಾರವನ್ನು ವಾಂಗ್‌ಚುಕ್ ವಿರೋಧಿಸಿದರು. ಇದೆಲ್ಲ ರಾಜಕೀಯ ಎಂದು ತೀರ್ಪಿನ ಹೊರತಾಗಿಯು ಅವರು ಆರೋಪಿಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಗೆ ಕರೆ ನೀಡಿದರು. 35 ದಿನಗಳ ಉಪವಾಸ ಸತ್ಯಾಗ್ರಹ ಘೋಷಿಸಿದರು. ಭೂಮಿ ಗುತ್ತಿಗೆ ರದ್ದುಪಡಿಸಿದ ಬಳಿಕ ವಾಂಗ್‌ಚುಕ್ ನೇತೃತ್ವದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಲದಾಖ್‌ನಲ್ಲಿ ನಡೆದವು.

ಈ ಭೂಮಿ ವಿಚಾರಕ್ಕೆ ಮಾತ್ರ ಸೋನಂ ವಾಂಗ್‌ಚುಕ್ ಅವರಿಗೆ ತೊಂದರೆ ಎದುರಾಗಿಲ್ಲ. ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿ ಕಾರಣಕ್ಕಾಗಿ ಅವರ ಸಂಘಟನೆಯಾದ 'ಲಡಾಖ್ ಸ್ಟುಡೆಂಟ್ಸ್ ಎಜುಕೇಶನ ಮತ್ತು ಕಲ್ಚರಲ್ ಮೂವ್ಮೆಂಟ್'ನ FCRA) ಪರವಾನಗಿ ರದ್ದಾಯಿತು. ಅಷ್ಟೇ ಅಲ್ಲದೇ ಅಸಮರ್ಪಕ ಹಣಕಾಸು ವಹೀವಾಟು, ಅನುಮತಿಸಿದ ಚಟುವಟಿಕೆಗಳಿಗೆ ಹಣ ದುರ್ಬಳಕೆ ಆರೋಪ ಹೊರಿಸಲಾಯಿತು.
ಈ ಸಂಘಟನೆಯಡಿ ಹಣಕಾಸಿನ ವಹೀವಾಟು, ಬಳಕೆ ಅನುಮಾನ ಮೊದಲಿನಿಂದ ಇದ್ದವು. 2007 ರಲ್ಲೂ ಯುಪಿಎ ಕಾಲದಲ್ಲಿ ಇದೇ ಸಂಘಟನೆಯ ವಿದೇಶಿ ಕೊಡುಗೆಗಳನ್ನು ದುರುಪಯೋಗ ಮಾಡಿಕೊಂಡಿದ್ದರ ಆರೋಪ ಇತ್ತು. 200 ಕೆನಾಲ್ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದು ಸೇರಿ ಹಲವು ಗಂಭೀರ ಆರೋಪ ಇದರ ಮೇಲಿದೆ.
ಉಪವಾಸ ಚಳವಳಿ: ಮುಷ್ಕರದಿಂದ ಬಂಧನದವರೆಗೆ
ಸೋನಂ ವಾಂಗ್‌ಚುಕ್ ಉಪವಾಸ ಚಳವಳಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಚಳಿಯಲ್ಲಿ ಕಂಬಳಿಯಲ್ಲಿ ಹೊದ್ದಿಕೊಂಡು ಕೂತಿದ್ದ ಅವರ ಚಿತ್ರಗಳು ರಾಜ್ಯದ ನಿರ್ಲಕ್ಷ್ಯದ ವಿರುದ್ಧ ಒಂಟಿ ಹೋರಾಟಗಾರರ ಪ್ರತಿರೂಪವಾಗಿ ಕಂಡು ಬಂದವು. ಸದ್ಯ ಬಂಧನವಾಗಿರುವ ವಾಂಗ್‌ಚುಕ್ ಜೈಲಿನಲ್ಲಿದ್ದಾರೆ. ಅವರು ಹೊರಗಿರುವ ವಾಂಗ್‌ಚುಕ್‌ಗಿಂತ ಜೈಲಿನಲ್ಲಿರುವುದು ಸರ್ಕಾರಕ್ಕೆ ಹೆಚ್ಚು ಅಪಾಯಕಾರಿ ಅಂತಲೂ ಕೆಲವರು ಹೇಳಿದ್ದಾರೆ. ಲೇಹ್‌ನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಬದಲಾಗುತ್ತಿದ್ದಂತೆ ತಕ್ಷಣಕ್ಕೆ ಕ್ರಮವಹಿಸಲಾಯಿತು. ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ವಾಂಗ್‌ಚುಕ್ ಬಂಧನವಾಯಿತು.

ರಾಜಕೀಯ ಪ್ರವೇಶ
ಲಡಾಖ್ ಚಳವಳಿಗೆ ಹೊಸ ರಾಜಕೀಯ ಬಣ್ಣ ಬಂತು. ಸರ್ಕಾರದ ವಿರುದ್ಧ ವಿಪಕ್ಷಗಳು ಒಟ್ಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಚುರುಕುಗೊಳಿಸಿದರು. ವಾಂಗ್‌ಚುಕ್ ರನ್ನು 'ಆಧುನಿಕ ಗಾಂಧಿ' ಎಂದೆಲ್ಲ ಬಿಂಬಿಸಿದರು. ಈ ಆನ್‌ಲೈನ್ ಹೋರಾಟಗಳು ಭಾರತದಲ್ಲಿ ನಡೆದಿದ್ದ ಹಿಂದಿನ ಅಶಾಂತಿಗಳೊಂದಿಗೆ ಹೋಲಿಕೆ ಮಾಡಲಾರಂಭಿಸಿದವು. ಚಳವಳಿ ಮಾತ್ರ ಸಹಜವಾಗಿ ಮುಂದುವರಿಯಲಿಲ್ಲ. ವಿಮರ್ಶಕರ ಪ್ರಕಾರ, ಇದೆಲ್ಲ ಬೆಳವಣಿಗೆ ನೋಡಿದರೆ ಗಡಿಯ ಪ್ರದೇಶವನ್ನು ಅಸ್ಥಿರಗೊಳಿಸುವ ಸಂಯೋಜಿತ ಪ್ರಯತ್ನ ಎಂದು ದೂರಿದ್ದಾರೆ. ಇದೆಲ್ಲ ಇಲ್ಲಿನ ವಾಸ್ತವ ಸಮಸ್ಯೆಗಳನ್ನು ಮುಚ್ಚಿಡಲು ಮಾಡುತ್ತಿರುವ ತಂತ್ರ ಎಂದು ಅವರು ಅಭಿಪ್ರಾಯ ಹೊರ ಹಾಕಿದ್ದಾರೆ.
ಲಡಾಖ್‌ನಲ್ಲಿ ಕೇವವ ಸಾಂಸ್ಕೃತಿಕ ವೈಶಿಷ್ಟ್ಯತೆ ಮಾತ್ರವಿ್ಲಲ. ಭದ್ರತೆ ದೃಷ್ಟಿಯಿಂದಲೂ ಮಹತ್ವತೆಯಿಂದ ಕೂಡಿದೆ. ಇದು ಚೀನಾದ ಗಡಿಗೆ ಹೊಂದಿಕೊಂಡಿದೆ. ಅಪರೂಪದ ಖನಿಜ ಸಂಪತ್ತು ಹೊಂದಿದೆ ಹಾಗೂ ಭಾರತೀಯ ಸೇನೆಯ ಪ್ರಮುಖ ಘಟಕಗಳಿಗೆ ನೆಲೆ ಆಗಿದೆ. ಹೀಗಾಗಿ ಇಲ್ಲಿ ಅಶಾಂತಿ ಉಂಟಾದರೆ, ತೊಂದರೆ ಆದರೆ ಅದು ರಾಷ್ಟ್ರದ ಭದ್ರತೆ ಮೇಲೆ ಪರಿಣಾಮ ಭೀರುತ್ತದೆ. ಈ ನಿಟ್ಟಿನಲ್ಲಿ ಸೂಕ್ತವಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಶ್ರೀಲಂಕಾದ ರಾಜಕೀಯ ಪತನ ಹಾಗೂ ಬಾಂಗ್ಲಾದೇಶದ ಹಿಂಸಾಚಾರಗಳನ್ನು ಭಾರತಕ್ಕೆ ಹೋಲಿಸಿ ಮಾತನಾಡಲಾಗುತ್ತದೆ. ಇವೆಲ್ಲವು ಮತ್ತಷ್ಟು ಆತಂಕ ಸೃಷ್ಟಿಸುವಂತಹುಗಳೆ. ಲಡಾಖ್ ಸ್ಕೌಟ್ಸ್‌ಗಳಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆಯ ಎಚ್ಚರಿಕೆಗಳು, ಅಗ್ನಿಪಥ್ ವಿವಾದದ ಮಾಡಿದ್ದ ವೇಳೆ ನೀಡಿದ ಹೇಳಿಕೆಗಳನ್ನು ಸ್ಥೂಲವಾಗಿ ಗಮನಿಸಲಾಗುತ್ತಿದೆ.
ಹೋರಾಟದ ಬಗ್ಗೆ ದೊಡ್ಡ ಪ್ರಶ್ನೆ
ವಾಂಗ್‌ಚುಕ್ ಹೋರಾಟ ಇದು ಕೇವಲ ಒಬ್ಬ ವ್ಯಕ್ತಿಯ ಕ್ರಿಯಾಶೀಲತೆ ಅಲ್ಲ. ಇದು ಲಡಾಖ್‌ನ ರಾಜಕೀಯ ಭವಿಷ್ಯ, ಭಿನ್ನಾಭಿಪ್ರಾಯ ಮತ್ತು ಅಸ್ಥಿರತೆಯ ಮಧ್ಯದ ಅಸಮತೋಲನ ಹಾಗೂ ಭಾರತದ ಗಡಿ ಪ್ರದೇಶಗಳ ದುರ್ಬಲತೆಗಳನ್ನು ಪ್ರತಿಬಿಂಬಿಸುತ್ತದೆ. ಈ ಕಾರಣದಿಂದ ಈ ಹೋರಾಟದ ಬಗ್ಗೆ ಒಂದಷ್ಟು ಪ್ರಶ್ನೆಗಳೂ ಮೂಡುತ್ತವೆ.
ಸದ್ಯ ಲಡಾಖ್‌ನಲ್ಲಿ ಉಂಟಾಗಿರುವ ಅಶಾಂತಿ ನಿಜವಾದ ಸ್ಥಳೀಯ ಬೇಡಿಕೆಗಳು, ವೈಯಕ್ತಿಕ ವಿವಾದಗಳು ಮತ್ತು ರಾಜಕೀಯ ಅವಕಾಶವಾದದ ತೊಂದರೆದಾಯಕ ಸೇರಿದಂತೆ ಹಲವು ವಿಷಯಗಳ ಮಿಶ್ರಣವನ್ನು ಎತ್ತಿತೋರಿಸುತ್ತಿದೆ. ವಾಂಗ್‌ಚುಕ್ ಅವರನ್ನು ಸುಧಾರಕ ಎಂದು ನೆನಪಿಸಿಕೊಳ್ಳಲಾಗುತ್ತದೆಯೋ ಅಥವಾ ಪ್ರಚೋದಕ ಎಂದು ನೆನಪಿಸಿಕೊಳ್ಳಲಾಗುತ್ತದೆಯೋ, ಅವರ ಕ್ರಮಗಳು ಈ ಪ್ರದೇಶ ದೊಡ್ಡ ಪ್ರಶ್ನೆಯಾಗಿ ಉಳಿಯುತ್ತವೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ಬೇಕೆಂಬ ಆಗ್ರಹವಿದೆ. ಆರನೇ ಸ್ಕೆಡ್ಯೂಲ್ ಅಡಿಯಲ್ಲಿ ರಾಜ್ಯ ಸ್ಥಾನ ಸೇರಿಸಲು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಜನರು ರಸ್ತೆ ತಡೆ ನಡೆಸಿದ್ದಾರೆ.. ಪಿಟಿಐ ಇದು ಇನ್ನು ಮುಂದೆ ಹಿಮನದಿಗಳು ಅಥವಾ ಹವಾಮಾನ ಅಭಿಯಾನಗಳ ಬಗ್ಗೆ ಅಲ್ಲ. ಇದು ಭಾರತದ ಅತ್ಯಂತ ಸೂಕ್ಷ್ಮ ಗಡಿ ಪ್ರದೇಶದ ಸಾರ್ವಭೌಮತ್ವ ಮತ್ತು ಭದ್ರತೆಯ ಬಗ್ಗೆ ಯೋಚಿಸಬೇಕು. ಲಡಾಖ್‌ನ ಜನರು ಮತ್ತು ಇಡೀ ರಾಷ್ಟ್ರವು ಈಗ ಸೋನಮ್ ವಾಂಗ್‌ಚುಕ್ ಅವರ ಆಯ್ಕೆ ಬಗ್ಗೆ ನಿರ್ಧಾರ ಮಾಡಬೇಕಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications