ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ

By Mahesh
|
Google Oneindia Kannada News

ಬಹುಭಾಷಾ ನಟಿ, ಮೋಹಕ ತಾರೆ ಶೀದೇವಿ(54) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ದುಬೈನಲ್ಲಿ ಸಂಬಂಧಿಕರೊಬ್ಬರ ಮದುವೆ ಸಂಭ್ರಮದಲ್ಲಿದ್ದ ಶ್ರೀದೇವಿ ಅವರು ಸಮಾರಂಭದಲ್ಲಿ ಎದೆನೋವಿನಿಂದ ಕುಸಿದಿದ್ದು, ಕ್ಷಣಾರ್ಧದಲ್ಲೇ ತೀವ್ರ ಹೃದಯಾಘಾತಕ್ಕೊಳಗಾಗಿದ್ದಾರೆ.

ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿ ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿ

ಶ್ರೀದೇವಿ ಅವರ ಸಾವನ್ನು ಖಚಿತಪಡಿಸಿರುವ ಪತಿ ಬೋನಿ ಕಪೂರ್ ಅವರು, ಭಾರತಕ್ಕೆ ಹಿಂತಿರುಗುತ್ತಿರುವುದಾಗಿ ತಿಳಿಸಿದ್ದಾರೆ.

Legendary Actress Sridevi dies of Heart Attack

1963 ರ ಅಗಸ್ಟ್​ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿ, ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು, ಸೂಪರ್ ಸ್ಟಾರ್ ಆಗಿ ಬೆಳೆದವರು. ತೆಲುಗಿನಲ್ಲಿ 76, ಹಿಂದಿಯಲ್ಲಿ 71, ತಮಿಳಿನಲ್ಲಿ 76, ಮಲಯಾಳಂನಲ್ಲಿ 26 , ಕನ್ನಡದಲ್ಲಿ 6 ಚಿತ್ರಗಳು ಸೇರಿದಂತೆ ಸುಮಾರು 260ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ಸುಮಾರು 15 ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದ ಶ್ರೀದೇವಿ ಅವರು ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ನಟಿಸಿ ಯಶಸ್ಸು ಗಳಿಸಿದ್ದರು. 'ಮಾಮ್' ಅವರ ಅಭಿನಯದ ಕೊನೆಯ ಚಿತ್ರ. 5 ಫಿಲಂಫೇರ್ ಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ವೈವಿಧ್ಯಮಯ ನಟನೆಗೆ ಸಂದಿವೆ.

ದುಬೈನಲ್ಲಿ ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಜತೆಗಿದ್ದರು.ಮತ್ತೊಬ್ಬ ಪುತ್ರಿ ಜಾಹ್ನವಿ ಅವರು ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

English summary
Legendary Actress Sridevi dies of Heart Attack in Dubai. She was with her husband Boney Kapoor at a relative's wedding function in Dubai at the time of her death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X