ನಂಗೆ ಸ್ಟ್ರೆಸ್, ರಿಸೈನ್ ಮಾಡೋಲ್ಲ, ಕಂಪನೀಯೇ ತೆಗೀಲಿ:ಉದ್ಯೋಗಿಯದ್ದು ಇದ್ಯಾವ ಸೀಮೆ ಬೇಡಿಕೆ?
ಹಿಂದೆ ಒಂದು ಕೆಲಸಕ್ಕೆ ಸೇರಿದರೆ ಮತ್ತೆ ಅಲ್ಲಿಂದಲೇ ನಿವೃತ್ತಿ. ಈಗ ಹಾಗಲ್ಲ, ವರ್ಷಕ್ಕೆ ಮೂರು ಕಂಪನಿ ಬದಲಾಯಿಸವವರೂ ಇದ್ದಾರೆ. ಇಲ್ಲಿ ಕೆಲಸ ಬಿಡುವುದು, ಬೇರೆ ಕೆಲಸಕ್ಕೆ ಸೇರುವುದರ ಹಿಂದೆ ಇರುವುದು ಕೇವಲ ಸಂಬಳ ಅಲ್ಲ. ಮನಸ್ಸಿನ ನೆಮ್ಮದಿ ಕೂಡಾ ಇದಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಸಂಬಳಕ್ಕಿಂತ ಮಾನಸಿಕ ನೆಮ್ಮದಿ ಅನ್ನುವುದು ಬಹಳ ಮುಖ್ಯವಾಗಿದೆ.
ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಯಾಗುತ್ತಿರುವ ಕೇಸ್ :
ಕೆಲಸದ ಒತ್ತಡ, ಟಾರ್ಗೆಟ್, ಡೆಡ್ಲೈನ್, ಹೆಚ್ಚುತ್ತಿರುವ ಜವಾಬ್ದಾರಿ ತಲೆ ಕೆಡಿಸಿ ಬಿಡುತ್ತದೆ. ಕೆಲವೊಮ್ಮೆ ಯಾರೂ ಊಹಿಸಲಾಗದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ಅಂತಹ ಒಂದು ಕೇಸ್ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಉದ್ಯೋಗಿಯೊಬ್ಬರಿಗೆ ಕೆಲಸ ಬಿಡಬೇಕು. ಆದರೆ, ತಾನಾಗಿಯೇ ರಾಜೀನಾಮೆ ಕೊಡುವುದು ಅವರಿಗೆ ಬೇಕಿಲ್ಲ. ಇದರ ಬದಲು ಕಂಪನಿಯೇ ತಮ್ಮನ್ನು ವಜಾ ಮಾಡಿದರೆ ಒಳ್ಳೆಯದು ಎನ್ನುವುದು ಅವರ ಯೋಚನೆ. ಈ ಆಲೋಚನೆಯ ಹಿಂದೆ ಇರುವುದು ಕೆಲಸದ ಒತ್ತಡ, ಭವಿಷ್ಯದ ಬಗೆಗಿನ ಚಿಂತೆ ಮತ್ತು ಆರ್ಥಿಕ ಭದ್ರತೆ. ಇವರು ಈ ಬಗ್ಗೆ ತಮ್ಮ ರೆಡ್ಡಿಟ್ ಅಕೌಂಟ್ ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ತಮ್ಮ ಸಮಸ್ಯೆಯ ಬಗ್ಗೆ ಸಲಹೆ ಕೇಳಿದ್ದಾರೆ.
ಸಂತೋಷ ನೆಮ್ಮದಿ ಇಲ್ಲವೇ ಇಲ್ಲ
Reddit ನ r/QuitCorporate ಪ್ಲಾಟ್ ಫಾರಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ವ್ಯಕ್ತಿ ತಾವು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಅವರಿಗೆ ಈ ಕೆಲಸದಲ್ಲಿ ಸಂತೋಷವೂ ಇಲ್ಲ ನೆಮ್ಮದಿಯೂ ಇಲ್ಲ.ಅವರಿಗೆ ಇತ್ತೀಚೆಗಷ್ಟೇ ಹೊಸ ಜವಾಬ್ದಾರಿ ಸಿಕ್ಕಿತ್ತು. ಆದರೆ, ಈ ಜವಾಬ್ದಾರಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಷ್ಟಕರವಾಗಿತ್ತು. ಅವರಿಗೆ ಇಲ್ಲಿ ತನ್ನ ಕೆಲಸದ ವ್ಯಾಪ್ತಿಯನ್ನು ನಿರ್ಧರಿಸುವುದು ಮತ್ತು ಮ್ಯಾನೇಜರ್ ನ ನಿರೀಕ್ಷೆಗೆ ತಕ್ಕಂತೆ ಇರುವುದು ದೊಡ್ಡ ಚ್ಯಾಲೆಂಜ್ ಅನ್ನಿಸಿತ್ತು. ಬಾಸ್ ನಿರೀಕ್ಷಿಸುವ ರಿಸಲ್ಟ್ ನೀಡುವುದು ಅಷ್ಟು ಸುಲಭವಾಗಿರಲಿಲ್ಲ.

ಬ್ರೇಕ್ ಬೇಕೇ ಬೇಕು ಎನ್ನುವ ಸ್ಥಿತಿ :
ಕೆಲಸ ಬಿಡಬೇಕು ಆದರೆ ಬೇರೆ ಕೆಲಸದ ಆಫರ್ ಕೂಡಾ ಇಲ್ಲ. ಇವರು ಬರೆ ಕಂಪನಿಗಳಲ್ಲಿ ಕೆಲಸ ಹುಡುಕುತ್ತಿದ್ದಾರೆ. ಕೆಲಸಕ್ಕೆ ಅಪ್ಲಿಕೇಶನ್ ಹಾಕಿದ ಕೂಡಲೇ ಹೊಸ ಕೆಲಸ ಸಿಗುವುದಿಲ್ಲ. ಟೈಂ ಹಿಡಿಯುತ್ತದೆ. ಅಲ್ಲಿವರೆಗೆ ಒಂದು ಸಣ್ಣ ಬ್ರೇಕ ಸಿಗುತ್ತದೆ ಎನ್ನುವ ಯೋಚನೆ ಒಂದೆಡೆ. ಆದರೆ ಮಾರ್ಕೆಟ್ ನಾವಂದುಕೊಂಡ ಹಾಗೆ ಖಂಡಿತಾ ಇಲ್ಲ. ಎಲ್ಲಿ ನೋಡಿದರೂ ಲೇ ಆಫ್ ನಡೀತಾ ಇದೆ. ಆ ಭಯವೂ ಮತ್ತೊಂದು ಕಡೆ. ಅವರು ಸುಮಾರು ಏಳು ವರ್ಷ ಮೊದಲೇ ನಿವೃತ್ತಿ ತೆಗೆದುಕೊಳ್ಳೋ ಯೋಚನೆಯಲ್ಲಿದ್ದಾರೆ. ಅಲ್ಲಿಯವರೆಗೆ, ಕಡಿಮೆ ಸಂಬಳ ಸಿಕ್ಕಿದರೂ ಪರವಾಗಿಲ್ಲ, ಕಡಿಮೆ ಜವಾಬ್ದಾರಿ, ಕಡಿಮೆ ಒತ್ತಡ ಹೆಚ್ಚು ನೆಮ್ಮದಿಯ ಕೆಲಸ ಮಾಡಿಕೊಂಡು ಹೋಗುತ್ತೇವೆ ಎನ್ನುವ ಯೋಚನೆ ಅವರದ್ದು.
Lay off ಆದ್ರೆ ಒಳ್ಳೆಯದು :
ಈ ಕೇಸಿನ ಬಹಳ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಇಲ್ಲಿ ಉದ್ಯೋಗಿಗೆ (employees) ತಾನಾಗಿಯೇ ರಾಜೀನಾಮೆ ಕೊಟ್ಟು ಹೊರ ಬರುವುದು ಬೇಕಾಗಿಲ್ಲ. ಕಂಪನಿಯೇ ತನ್ನ ಕೆಲಸದಿಂದ ತೆಗೆದು ಹಾಕಿ ಎನ್ನುವುದು ಅವರ ಉದ್ದೇಶ. ಒಂದು ವೇಳೆ ಕಂಪನಿ ಕೆಲಸದಿಂದ ತೆಗೆದು ಹಾಕಿದರೆ ಸೆವರೆನ್ಸ್ ಪ್ಯಾಕೇಜ್ ಸಿಗುತ್ತದೆ. ಇದರಲ್ಲಿ ಒಂದಷ್ಟು ಹಣ ಸಿಗುತ್ತದೆ. ಹಾಗಾಗಿ ಹೊಸ ಕೆಲಸ ಹುಡುಕಲು ಮತ್ತು ಮಾನಸಿಕ ಒತ್ತಡದಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಸಿಕ್ಕ ಹಾಗೆ ಆಗುತ್ತದೆ.
ಈ ಉದ್ಯೋಗಿ ತಮ್ಮ ಮ್ಯಾನೇಜರ್ ಬಳಿ ತನ್ನನ್ನು ಲೇ ಆಫ್ ಮಾಡುವಂತೆ ಕೇಳಿದಾಗ ಈ ವರ್ಷದ ಲೇ ಆಫ್ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದ್ದಾರೆ. ಹಾಗಾಗಿ ಮುಂದೆ ಲೇ ಆಫ್ ಮಾಡುವವರೆಗೆ ಕಾಯಬೇಕಾಗುತ್ತದೆ.
ಬಾಸ್ ಜೊತೆ ಮೀಟಿಂಗ್ ಮಾಡುವುದಕ್ಕೂ ಭಯ :
ನಿರಂತರ ಒತ್ತಡ ಉದ್ಯೋಗಿಯ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ಬಾಸ್ ಜೊತೆ ಮೀಟಿಂಗ್ ಮಾಡುವುದಕ್ಕೂ ಹೆದರುವ ಸ್ಥಿತಿ. ಅವರನ್ನು ಪಿಐಪಿಗೆ ಹಾಕಬಹುದು ಎನ್ನುವ ಭಯ. ಪಿಐಪಿ ಅಂದರೆ ಉದ್ಯೋಗಿಯ ಪರ್ಫಾಮೆನ್ಸ್ ಸುಧಾರಿಸಲು ಉದ್ಯೋಗಿಗೆ ನೀಡುವ ಟಾರ್ಗೆಟ್ ಮತ್ತು ಡೆಡ್ ಲೈನ್. ಇನ್ನು ತನ್ನ ಕರಿಯರ್ ಇಮೇಜ್ ಗೆ ಎಲ್ಲಿ ಕಳಂಕ ಬರುವುದೋ ಎನ್ನುವ ಬಗ್ಗೆಯೂ ಅವರನ್ನು ಚಿಂತೆ ಕಾಡ್ಥಾ ಇದೆಯಂತೆ. ಗೌರವಯುತವಾಗಿ ಕಂಪನಿಯಿಂದ ಹೊರ ಬರಬೇಕು ಎನ್ನುವುದು ಅವರ ಉದ್ದೇಶ.
ರೆಡ್ಡಿಟ್ ಬಳಕೆದಾರರು ನೀಡುವ ಸಲಹೆ :
ಕೆಲವು ಬಳಕೆದಾರರು ಸ್ವಯಂಪ್ರೇರಣೆಯಿಂದ ಮುಂದಿನ ಲೇ ಆಫ್ ಗೆ ಸೇರುವ ಆಸೆಯ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಬಹುದು ಎಂದು ಸೂಚಿಸಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಕೆಲಸ ಬಿಡುವ ಮೊದಲಿ ಮೆಡಿಕಲ್ ಲೀವ್ ನಂಥಹ ಆಯ್ಕೆಯನ್ನು ಗಣನೆಗೆ ತೆಗದುಕೊಳ್ಳುವಂತೆ ಸೂಚಿಸಿದ್ದಾರೆ.
ಸೆವರೆನ್ಸ್ ಪ್ಯಾಕೇಜ್ ಮತ್ತು ನಿರುದ್ಯೋಗ (unemployment) ಭತ್ಯೆಗಳಿಗೆ ಅರ್ಹತೆಯು ಕಂಪನಿಯ ನೀತಿ ಮತ್ತು ಸ್ಥಳೀಯ ಕಾನೂನುಗಳನ್ನು ಅವಲಂಬಿಸಿರುತ್ತದೆ. ನಿರಂತರ ಕೆಲಸದ ಒತ್ತಡ ಕೆಲವೊಮ್ಮೆ ಉದ್ಯೋಗಿಗಳನ್ನು ರಾಜೀನಾಮೆಗಿಂತ ಕಂಪನಿಯಿಂದ ಹೊರ ಬರುವ ಆಯ್ಕೆತೇ ಬೆಸ್ಟ್ ಎಂದು ಯೋಚಿಸುವಂತೆ ಮಾಡುತ್ತದೆ ಎನ್ನುವುದನ್ನು ಸೂಚಿಸುತ್ತದೆ.


Click it and Unblock the Notifications
