ಹೊಗೆ ಬದಲು ನೀರನ್ನು ಹೊರಸೂಸುವ ಭಾರತದ ಮೊದಲ ಹಸಿರು ಹೈಡ್ರೋಜನ್ ಚಾಲಿತ ಬಸ್‌ಗೆ ಚಾಲನೆ
ನವದೆಹಲಿ, ಸೆಪ್ಟೆಂಬರ್ 26: ಹೊಗೆಯ ಬದಲು ಕೇವಲ ನೀರನ್ನು ಹೊರಸೂಸುವ ಭಾರತದ ಮೊದಲ ಹಸಿರು ಜಲಜನಕ ಚಾಲಿತ ಬಸ್‌ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಚಾಲನೆ ನೀಡಿದ್ದಾರೆ.
ಪಳೆಯುಳಿಕೆ ಇಂಧನಗಳಾದ ಡಿಸೇಲ್, ಪೆಟ್ರೋಲ್‌ಗಳಿಂದ ಬಳಕೆಯಿಂದ ಮುಕ್ತವಾಗಲು ಹೈಡ್ರೋಜನ್ ಭಾರತದ ಪರಿವರ್ತನಾ ಇಂಧನವಾಗಲಿದೆ. 2023 ರ ಅಂತ್ಯದ ವೇಳೆಗೆ IOC ಬಸ್‌ಗಳ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಲಿದೆ ಎಂದು ಪುರಿ ಹೇಳಿದ್ದಾರೆ. ಭಾರತದ ಅಗ್ರ ತೈಲ ಸಂಸ್ಥೆ IOC ಬಸ್ ಅನ್ನು ಅನಾವರಣಗೊಳಿಸಿತು. ನವೀಕರಿಸಬಹುದಾದ ಮೂಲಗಳಿಂದ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ನೀರನ್ನು ವಿಭಜಿಸುವ ಮೂಲಕ IOC 75 ಕೆಜಿಯಷ್ಟು ಹೈಡ್ರೋಜನ್ ಅನ್ನು ಉತ್ಪಾದಿಸುತ್ತದೆ. ಈ ಹೈಡ್ರೋಜನ್ ಅನ್ನು ಎರಡು ಬಸ್‌ಗಳಿಗೆ ಶಕ್ತಿ ನೀಡಲು ಬಳಸಲಾಗುತ್ತದೆ. ಇದು ಪ್ರಾಯೋಗಿಕ ಚಾಲನೆಗಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ ಸಂಚರಿಸುತ್ತದೆ.

ಫರಿದಾಬಾದ್‌ನಲ್ಲಿರುವ IOC ಯ R&D ಕೇಂದ್ರವು ಪ್ರಾಯೋಗಿಕ ಚಾಲನೆಗಾಗಿ ಹಸಿರು ಜಲಜನಕವನ್ನು ಉತ್ಪಾದಿಸುತ್ತಿದೆ. 30 ಕೆಜಿ ಸಾಮರ್ಥ್ಯದ ನಾಲ್ಕು ಸಿಲಿಂಡರ್‌ಗಳ ಮೂಲಕ 350 ಕಿಮೀ ಬಸ್‌ಗಳನ್ನು ಓಡಿಸಬಹುದು. ನಾಲ್ಕು ಟ್ಯಾಂಕ್‌ಗಳು ತುಂಬಲು 10-12 ನಿಮಿಷಗಳು ಬೇಕಾಗುತ್ತದೆ. ಹೈಡ್ರೋಜನ್ ಸುಟ್ಟಾಗ ಕೇವಲ ನೀರಿನ ಆವಿಯನ್ನು ಉಪ-ಉತ್ಪನ್ನವಾಗಿ ಹೊರಸೂಸುತ್ತದೆ.
ಮೂರು ಪಟ್ಟು ಶಕ್ತಿಯ ಸಾಂದ್ರತೆ ಮತ್ತು ಹಾನಿಕಾರಕ ಹೊರಸೂಸುವಿಕೆಯ ಬದಲಾಗಿ ಹೈಡ್ರೋಜನ್ ಶಕ್ತಿಯ ಅಗತ್ಯವನ್ನು ಪೂರೈಸಲು ಶುದ್ಧವಾದ, ಹೆಚ್ಚು ಪರಿಣಾಮಕಾರಿ ಆಯ್ಕೆಯಾಗಿ ಬಳಕೆಯಾಗುತ್ತದೆ. ಒಂದು ಕಿಲೋ ಹಸಿರು ಹೈಡ್ರೋಜನ್ ಉತ್ಪಾದನೆಗೆ 50 ಯುನಿಟ್ ನವೀಕರಿಸಬಹುದಾದ ವಿದ್ಯುತ್ ಮತ್ತು 9 ಕೆಜಿ ಡಿಯೋನೈಸ್ಡ್ ನೀರು ಬೇಕಾಗುತ್ತದೆ. ಹೈಡ್ರೋಜನ್ ಅನ್ನು ಇಂಧನ ಕೋಶಗಳಿಗೆ ಇಂಧನವಾಗಿ ಬಳಸಬಹುದಾಗಿದೆ.
ದೆಹಲಿ, ಹರಿಯಾಣ ಮತ್ತು ಯುಪಿಯಲ್ಲಿ ಗುರುತಿಸಲಾದ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್‌ನಿಂದ ಚಾಲಿತವಾಗಿರುವ 15 ಇಂಧನ ಸೆಲ್ ಬಸ್‌ಗಳ ಕಾರ್ಯಾಚರಣೆಯ ಪ್ರಯೋಗಗಳನ್ನು IOC ಕೈಗೊಳ್ಳಲಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, 2 ಇಂಧನ ಸೆಲ್ ಬಸ್‌ಗಳ ಮೊದಲ ಸೆಟ್ ಅನ್ನು ಸೋಮವಾರ ಪ್ರಾರಂಭಿಸಲಾಯಿತು.
"ನಮ್ಮ ಸರ್ಕಾರವು ಶುದ್ಧ ಮತ್ತು ಹಸಿರು ಶಕ್ತಿಯ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ಭಾರತವು ಕಡಿಮೆ ಇಂಗಾಲದ ಅಭಿವೃದ್ಧಿಯತ್ತ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಹೈಡ್ರೋಜನ್ ಮತ್ತು ಜೈವಿಕ ಇಂಧನಗಳಂತಹ ಉದಯೋನ್ಮುಖ ಇಂಧನಗಳ ಮೂಲಕ ಮತ್ತು ಮುಂದಿನ ಎರಡು ದಶಕಗಳಲ್ಲಿ ಜಾಗತಿಕ ಹೆಚ್ಚುತ್ತಿರುವ ಶಕ್ತಿಯ ಬೇಡಿಕೆಯ ಬೆಳವಣಿಗೆಯ 25 ಪ್ರತಿಶತವನ್ನು ಹೊಂದಿದೆ ಎಂದು ಪುರಿ ಹೇಳಿದರು.
ಎರಡು ಬಸ್‌ಗಳ ಪ್ರಾರಂಭದ ನಂತರ ಹೊಸ ತಂತ್ರಜ್ಞಾನದ ಕಾರ್ಯಕ್ಷಮತೆ ಮತ್ತು ಬಾಳಿಕೆಯ ದೀರ್ಘಾವಧಿಯ ಮೌಲ್ಯಮಾಪನಕ್ಕಾಗಿ 3 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ಸಂಚಿತ ಮೈಲೇಜ್ ಅನ್ನು ಆವರಿಸಲಾಗುತ್ತದೆ. ಭಾರತವು ವಿಶ್ವದ ಅತಿದೊಡ್ಡ ಸಿಂಕ್ರೊನಸ್ ಗ್ರಿಡ್‌ಗಳಲ್ಲಿ ಒಂದನ್ನು ಹೊಂದಿದೆ. ನವೀಕರಿಸಬಹುದಾದ ಶಕ್ತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 'ಒಂದು ರಾಷ್ಟ್ರ-ಒಂದು ಗ್ರಿಡ್-ಒಂದು ಆವರ್ತನ'ವನ್ನು ಸಾಧಿಸಿದೆ.
ಕಡಿಮೆ ವೆಚ್ಚದ ಸೋಲಾರ್, ಸಿಂಕ್ರೊನಸ್ ಗ್ರಿಡ್, ದೊಡ್ಡ ಬೇಡಿಕೆ ಮತ್ತು ಎಂಜಿನಿಯರಿಂಗ್‌ನೊಂದಿಗೆ, ಭಾರತವು ಹೈಡ್ರೋಜನ್ ಉತ್ಪಾದನೆ ಮತ್ತು ರಫ್ತುಗಳಲ್ಲಿ ಜಾಗತಿಕ ಚಾಂಪಿಯನ್ ಆಗಲಿದೆ. ಹಸಿರು ಹೈಡ್ರೋಜನ್‌ನ ಕೇಂದ್ರವಾಗಿ ಹೊರಹೊಮ್ಮಲಿದೆ. ಇತ್ತೀಚೆಗಷ್ಟೇ ವಿಶ್ವದ ಮೊದಲ ಬಿಎಸ್ 6 (ಹಂತ II) ಎಲೆಕ್ಟ್ರಿಫೈಡ್ ಫ್ಲೆಕ್ಸ್ ಇಂಧನ ವಾಹನದ ಮೂಲಮಾದರಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪುರಿ ಹೇಳಿದ್ದಾರೆ.
ಇದು ಫ್ಲೆಕ್ಸ್ ಇಂಧನ ಎಂಜಿನ್ ಮತ್ತು ಉತ್ತಮ ಇಂಧನ ದಕ್ಷತೆಯೊಂದಿಗೆ ಎಥೆನಾಲ್ನ ಹೆಚ್ಚಿನ ಬಳಕೆಯನ್ನು ಒದಗಿಸುವ ಎಲೆಕ್ಟ್ರಿಕ್ ಪವರ್‌ಟ್ರೇನ್ ಎರಡನ್ನೂ ಒಳಗೊಂಡಿದೆ. ಭಾರತವು ತನ್ನ ಡಿಕಾರ್ಬೊನೈಸೇಶನ್ ಗುರಿಗಳನ್ನು ಪೂರೈಸಲು ಸಹಾಯ ಮಾಡುವ ಅಪಾರ ಸಾಮರ್ಥ್ಯವನ್ನು ಹೊಂದಿರುವ ಭವಿಷ್ಯದ ಇಂಧನವಾಗಿ ಹೈಡ್ರೋಜನ್ ಅನ್ನು ಪರಿಗಣಿಸಲಾಗುತ್ತದೆ. ಹೈಡ್ರೋಜನ್‌ನ ಜಾಗತಿಕ ಬೇಡಿಕೆಯು 2050 ರ ವೇಳೆಗೆ 500-800 ಟನ್‌ಗಳಿಗೆ ನಾಲ್ಕರಿಂದ ಏಳು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.












Click it and Unblock the Notifications