ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆ. ಉಮರ್ ಫಯಾಜ್ ಕೊಲೆ ಲಷ್ಕರ್-ಹಿಜ್ಬುಲ್ಲಾ ಉಗ್ರರ ಜಂಟಿ ಕೃತ್ಯ

ಇತ್ತೀಚೆಗೆ ಯಾರೂ ಕಾಶ್ಮೀರಿ ಯುವಕರು ಸೇನೆ ಹಾಗೂ ಪೊಲೀಸ್ ಇಲಾಖೆಗೆ ಸೇರಬಾರದು ಎಂದು ಹಿಜ್ಬುಲ್ಲಾ ಮುಜಾಹಿದ್ದೀನ್ ಬಹಿರಂಗ ಎಚ್ಚರಿಕೆ ನೀಡಿತ್ತು. ಇದಾದ ಬೆನ್ನಿಗೆ ಸೇನೆ ಸೇರಿದ್ದ ಫಯಾಜ್ ರನ್ನು ಕೊಲೆ ಮಾಡಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಮೇ 12: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಕಾಶ್ಮೀರಿ ಮೂಲದ ಲೆಫ್ಟಿನೆಂಟ್ ಉಮರ್ ಫಯಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ. ಇವರೆಲ್ಲಾ ಹಿಜ್ಬುಲ್ಲಾ ಮುಜಾಹಿದ್ದೀನ್ ಹಾಗೂ ಲಷ್ಕರ್ ಇ ತಯ್ಯಬಾ ಸಂಘಟನೆಗೆ ಸೇರಿದವರಾಗಿದ್ದಾರೆ.

ಬುಧವಾರ ಕಾಶ್ಮೀರದ 22 ವಯಸ್ಸಿನ ಯುವ ಮಿಲಿಟರಿ ಅಧಿಕಾರಿ ಉಮ್ಮರ್ ಫಯಾಜ್ ಗುಂಡೇಟು ತಿಂದು ಶೋಫಿಯಾನ್ ನಲ್ಲಿ ಸಾವನ್ನಪ್ಪಿದ್ದರು. ಇವರನ್ನು ಜಂಟಿ ಕಾರ್ಯಾಚರಣೆಯಲ್ಲಿ ಹಿಜ್ಬುಲ್ಲಾ ಮತ್ತು ಲಷ್ಕರ್ ಸಂಘಟನೆಗಳು ಹೊಡೆದುರುಳಿಸಿವೆ ಎಂಬುದು ಬಹಿರಂಗವಾಗಿವೆ.

Lashkar-Hizbul combine killed Lt. Ummer Fayaz

ವರದಿಗಳ ಪ್ರಕಾರ ಲೆ. ಫಯಾಜ್ ರನ್ನು ತೀರಾ ಹತ್ತಿರದಿಂದ ಗುಂಡಿಟ್ಟು ಕೊಂದಿದ್ದಾರೆ ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ಗುಂಡೇಟು ತಿಂದ ಫಯಾಜ್ ಮೃತ ದೇಹ ಶೋಪಿಯಾನ್ ನ ಹರ್ಮಿನ್ ಗ್ರಾಮದಲ್ಲಿ ಪತ್ತೆಯಾಗಿತ್ತು.

ಇತ್ತೀಚೆಗೆ ಯಾರೂ ಕಾಶ್ಮೀರಿ ಯುವಕರು ಸೇನೆ ಹಾಗೂ ಪೊಲೀಸ್ ಇಲಾಖೆಗೆ ಸೇರಬಾರದು ಎಂದು ಹಿಜ್ಬುಲ್ಲಾ ಮುಜಾಹಿದ್ದೀನ್ ಬಹಿರಂಗ ಎಚ್ಚರಿಕೆ ನೀಡಿತ್ತು. ಇದಾದ ಬೆನ್ನಿಗೆ ಸೇನೆ ಸೇರಿದ್ದ ಫಯಾಜ್ ರನ್ನು ಕೊಲೆ ಮಾಡಿದೆ.

English summary
A manhunt has been launched to nab six persons part of the Hizbul Mujahideen and Lashkar-e-Tayiba which in a joint operation killed 22 year old Lt Ummer Fayaz. The young soldier of the Indian Army was martyred after he was abducted by terrorists at Shopian district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X