ಐಶ್ವರ್ಯಾ ರೈ ಜತೆ ಲಾಲು ಮಗನ ನಿಶ್ಚಿತಾರ್ಥ!

ಪಟ್ನಾ, ಏಪ್ರಿಲ್ 19: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಮೊದಲ ಮಗ ಬಿಹಾರದ ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ವಿವಾಹ ನಿಶ್ಚಿತಾರ್ಥ ಐಶ್ವರ್ಯಾ ರೈ ಜತೆಗೆ ನಡೆದಿದೆ.

ಅಮಿತಾಭ್ ಬಚ್ಚನ್ ಕುಟುಂಬದ ಸೊಸೆಯಾಗಿರುವ ನಟಿ ಐಶ್ವರ್ಯಾ ರೈ ಎಂಬ ಗೊಂದಲ ಬೇಡ. ಲಾಲು ಸೊಸೆಯಾಗುತ್ತಿರುವ ಈ ಐಶ್ವರ್ಯಾ, ಮಾಜಿ ಸಚಿವ ಚಂದ್ರಿಕ ರೈ ಅವರ ಮಗಳು.

ನಿಶ್ಚಿತಾರ್ಥ ಸಮಾರಂಭ ಬುಧವಾರ ಪಟ್ನಾದ ಐಷಾರಾಮಿ ಹೋಟೆಲ್ ಒಂದರಲ್ಲಿ ನಡೆಯಿತು. ಕುಟುಂಬದವರು ಮತ್ತು ಸ್ನೇಹಿತರು ಈ ಸಂದರ್ಭದಲ್ಲಿ ಹಾಜರಿದ್ದರು.

lalus son Tej Pratap engaged to Aishwarya

ಚಂದ್ರಿಕ ರೈ ಅವರ ತಂದೆ ದರೋಗಾ ಪ್ರಸಾದ್ ರೈ 1970ರಲ್ಲಿ ಕೆಲ ಕಾಲದವರೆಗೆ ಬಿಹಾರದ ಮುಖ್ಯಮಂತ್ರಿ ಆಗಿದ್ದರು. ಆಗ ಲಾಲು ಪ್ರಸಾದ್ ವಿದ್ಯಾರ್ಥಿ ನಾಯಕರಾಗಿದ್ದರು.

ನಿಶ್ಚಿತಾರ್ಥಕ್ಕೆ ಲಾಲು ಗೈರು
ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಅನುಪಸ್ಥಿತಿಯಲ್ಲಿ ನಿಶ್ಚಿತಾರ್ಥ ನಡೆಯಿತು. ಅನಾರೋಗ್ಯಕ್ಕೆ ಒಳಗಾಗಿರುವ ಲಾಲು ಪ್ರಸ್ತುತ ನವದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ 12ರಂದು ಮದುವೆ ನಡೆಯಲಿದ್ದು, ಸೋನಿಯಾ ಗಾಂಧಿ, ನಿತೀಶ್ ಕುಮಾರ್, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮತ್ತು ಸುಶೀಲ್ ಕುಮಾರ್ ಮೋದಿ ಸೇರಿದಂತೆ ಪ್ರಮುಖ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಲಾಲು ಕುಟುಂಬದ ಆಪ್ತ, ಶಾಸಕ ಭೋಲಾ ಯಾದವ್ ತಿಳಿಸಿದ್ದಾರೆ. ಲಾಲು ಅವರು ಮದುವೆ ಸಮಾರಂಭಕ್ಕೆ ಹಾಜರಾಗಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+