• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜನಾಥ್ ಸಿಂಗ್ ಹೇಳಿಕೆ ಬಾಲಿಶ, ಹಾಸ್ಯಾಸ್ಪದ: ಓವೈಸಿ

|

ಹೈದರಾಬಾದ್, ಸೆ. 15: ಲೋಕಸಭೆಯಲ್ಲಿಂದು ಮುಂಗಾರು ಅಧಿವೇಶನದ ಎರಡನೆಯ ದಿನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ ಹಾಗೂ ಚೀನಾ ಸಂಘರ್ಷದ ಕುರಿತು ಸುದೀರ್ಘ ಭಾಷಣ ಮಾಡಿದರು. ಉಭಯ ದೇಶಗಳ ನಡುವೆ ನಡೆದ ಶಾಂತಿ ಸ್ಥಾಪನೆ ಪ್ರಯತ್ನಗಳ ಬಗ್ಗೆ ಹಾಗೂ ಉದ್ವಿಗ್ನತೆಯ ಕುರಿತು ಮಾಹಿತಿ ನೀಡಿದರು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರತಿಕ್ರಿಯಿಸಿ, ರಾಜನಾಥ್ ಸಿಂಗ್ ಹೇಳಿಕೆ ಬಾಲಿಶ, ಹಾಸ್ಯಾಸ್ಪದ ಎಂದಿದ್ದಾರೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ವಾಸ್ತವ ಗಡಿ ನಿಯಂತ್ರಣ ರೇಖೆ ಬಗ್ಗೆ ರಾಜನಾಥ್ ಅವರು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಎಂದು ನೀಡಿದ ಹೇಳಿಕೆ ಎಲ್ಲವೂ ಸರ್ಕಾರದ ಹುಳುಕನ್ನು ಎತ್ತಿ ತೋರಿಸುತ್ತಿದೆ. ಚೀನಾ ವಶದಲ್ಲಿರುವ ಭಾರತದ ಭೂಮಿಯನ್ನು ಬಿಟ್ಟುಕೊಡಲು ತಯಾರಾಗಿದ್ದಂತೆ ಕಂಡು ಬರುತ್ತಿದೆ.

ಚೀನಾದಿಂದ ಲಡಾಖ್‌ನ 38,000 ಚದರ ಕಿ.ಮೀ ಅತಿಕ್ರಮಣ: ರಾಜನಾಥ್ ಸಿಂಗ್

ಸಶಸ್ತ್ರ ಪಡೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಮಾರ್ಗದರ್ಶನವಾದರೂ ಏನು? ಗಡಿಯಲ್ಲಿ ರಾಜತಾಂತ್ರಿಕ ಮಾತುಕತೆ ನಡೆಸುವುದು ಯೋಧರ ಜವಾಬ್ದಾರಿಯಲ್ಲ. ರಷ್ಯಾ ಮಧ್ಯಸ್ಥಿಕೆಯಲ್ಲಿ ಚೀನಾ ಜೊತೆ ಮಾತುಕತೆ ನಡೆಸುವ ಅವಕಾಶವನ್ನು ಕೇಂದ್ರ ಸರ್ಕಾರ ಹಾಳುಗೆಡವಿದೆ. ರಾಜತಾಂತ್ರಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಹೊಣೆಯಾಗಿದೆ. ಗಡಿ ಸಂಘರ್ಷ ಕುರಿತಂತೆ ಪ್ರತಿ ದಿನ ಸರ್ಕಾರದ ವಕ್ತಾರರು ಏಕೆ ದೇಶಕ್ಕೆ ಮಾಹಿತಿ ನೀಡಬಾರದು. ಇವರು ಮುಚ್ಚಿಡುತ್ತಿರುವುದಾದರೂ ಯಾವ ವಿಷಯ? ಎಂದು ಓವೈಸಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಜೂನ್ 15ರಂದು ಭಾರತ ಹಾಗೂ ಚೀನಾ ಯೋಧರ ನಡುವೆ ಸಂಘರ್ಷ ನಡೆದ ಬಳಿಕ ಹಲವು ಭಾರಿ ಉಭಯ ದೇಶಗಳ ನಡುವಿನ ಮಾತುಕತೆ ಮುರಿದು ಬಿದ್ದಿವೆ. ಪೂರ್ವ ಲಡಾಕ್, ಗೊಗ್ರಾ, ಕೊಂಗ್ರಾ ಲಾ, ಪ್ಯಾಂಗಾಂಗ್ ಉತ್ತರ ಹಾಗೂ ದಕ್ಷಿಣ ಪ್ರದೇಶದಲ್ಲಿ ಇಂದಿಗೂ ಉದ್ವಿಗ್ನ ಪರಿಸ್ಥಿತಿ ಇದೆ.

   RCB ಯಲ್ಲಿ ಜೋರಾಯ್ತು ಕನ್ನಡಿಗನ ಹವಾ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ರಾಜನಾಥ್ ಸಿಂಗ್ ಭಾಷಣ:

   ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ನಿಖರವಾಗಿ ಗುರುತಿಸಿಲ್ಲ ಎಂದೇ ಚೀನಾ ನಂಬಿದೆ. ಎಲ್‌ಎಸಿ ವಿವಾದಕ್ಕೆ ಸಂಬಂಧಿಸಿದಂತೆ ನಾವು ಶಾಂತಿಯುತ ಪರಿಹಾರವನ್ನು ಬಯಸಿದ್ದೇವೆ. ಭಾರತ ಮತ್ತು ಚೀನಾ ಎರಡೂ ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಕೊಂಡಿವೆ.

   1960ರಿಂದಲೂ ಗಡಿ ವಿಚಾರವಾಗಿ ಯಾವುದೇ ಒಪ್ಪಂದವಿಲ್ಲ. ಈ ವಿಚಾರವನ್ನು ಬಗೆಹರಿಸಲು ನಮಗೆ ತಾಳ್ಮೆ ಬೇಕು. ಶಾಂತಿ ಹಾಗೂ ನೆಮ್ಮದಿ ಮುಖ್ಯವಾಗಿದ್ದು, ಅದಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಲಡಾಖ್‌ನಲ್ಲಿ ಚೀನಾ ಸುಮಾರು 38,000 ಚದರ ಕಿ.ಮೀ. ಭೂಮಿಯನ್ನು ಅತಿಕ್ರಮಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ 5,000 ಚದರ ಕಿಮೀಗೂ ಹೆಚ್ಚು ಪ್ರದೇಶ ಬಿಟ್ಟುಕೊಟ್ಟಿದೆ. ಅರುಣಾಚಲ ಪ್ರದೇಶವೂ ತನ್ನದೆಂದು ಹೇಳುತ್ತಿದೆ. ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾದರೆ ದ್ವಿಪಕ್ಷೀಯ ಸಂಬಂಧ ಹದಗಡೆಲಿದೆ ಎಂದು ರಾಜನಾಥ್ ತಿಳಿಸಿದರು.

   English summary
   AIMIM chief Owaisi termed Defence Minister Rajnath Singh's statement on the LAC situation as an "abominable joke" in the "name of national security".
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X