ಕುಲಭೂಷಣ್ ಜಾಧವ್ ಪತ್ನಿ ಮತ್ತು ತಾಯಿಗೆ ಪಾಕಿಸ್ತಾನ ಕ್ರಿಸ್ಮಸ್ ಗಿಫ್ಟ್

ಇಸ್ಲಾಮಾಬಾದ್, ಡಿಸೆಂಬರ್ 8: ಭಾರತದ ಗೂಢಚರ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕುಲಭೂಷಣ್ ಜಾಧವ್ ರನ್ನು ಅವರ ಪತ್ನಿ ಮತ್ತು ತಾಯಿ ಇದೇ ಡಿಸೆಂಬರ್ 25ರಂದು ಪಾಕಿಸ್ತಾನದ ಜೈಲಿನಲ್ಲಿ ಭೇಟಿಯಾಗಲಿದ್ದಾರೆ.

ಈ ಹಿಂದೆ ಭಾರತ ಸರಕಾರ ಕುಲಭೂಷಣ್ ಜಾಧವ್ ರನ್ನು ಭೇಟಿಯಾಗಲು ಅವರ ತಾಯಿ ಮತ್ತು ಹೆಂಡತಿಗೆ ಅವಕಾಶ ನೀಡಬೇಕು ಎಂದು ಕೋರಿ ಪಾಕಿಸ್ತಾನ ಸರಕಾರಕ್ಕೆ ಪತ್ರ ಬರೆದಿತ್ತು.

Kulbhushan Jadhav’s mother, wife to meet him on Dec 25 in Pakistan

ಇದಕ್ಕೆ ನವೆಂಬರ್ 10ರಂದು ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಹೆಂಡತಿಯ ಭೇಟಿಗೆ ಅವಕಾಶ ನೀಡಿತ್ತು. ಆದರೆ ಭಾರತ ಕುಲಭೂಷಣ್ ರ ತಾಯಿಯ ಭೇಟಿಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿತ್ತು. ನಂತರ ಮನವಿ ಪುರಸ್ಕರಿಸಿದ ಪಾಕಿಸ್ತಾನ ಭೇಟಿಗೆ ಅವಕಾಶ ನೀಡಿತ್ತು.

ಜಾಧವ್ ಅವರನ್ನು ಬೇಹುಗಾರಿಕೆಯ ಆರೋಪದ ಮೇಲೆ ಪಾಕಿಸ್ತಾನ ಬಂಧಿಸಿದ್ದು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.ಶಿಕ್ಷೆಯಿಂದ ವಿನಾಯಿತಿ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಮಿಲಿಟರಿ ಮೇಲ್ಮನವಿ ನ್ಯಾಯಾಲಯ ತಿರಸ್ಕರಿಸಿತ್ತು. ಸದ್ಯ ಅವರ ಕ್ಷಮಾದಾನ ಅರ್ಜಿ ಸೇನಾ ಮುಖ್ಯಸ್ಥರ ಮುಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+