ಮೊದಲ ಹೆರಿಟೇಜ್ ರೈಲಿಗೆ ಚಾಲನೆ, ಮಾರ್ಗ ಪ್ರಯಾಣ ದರ, ವೇಳಾಪಟ್ಟಿ ತಿಳಿಯಿರಿ
ಜೈಪುರ, ಅಕ್ಟೋಬರ್ 06: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜೋಧ್‌ಪುರದಿಂದ ರಾಜಸ್ಥಾನದ ಮೊದಲ ಹೆರಿಟೇಜ್ ರೈಲಿಗೆ ಚಾಲನೆ ನೀಡಿದರು. ವ್ಯಾಲಿ ಕ್ವೀನ್ ಹೆರಿಟೇಜ್ ರೈಲು ಎಂದು ಕರೆಯಲ್ಪಡುವ ಈ ರೈಲು ಮಾರ್ವಾರ್ ಜಂಕ್ಷನ್‌ನಿಂದ ಪಾಲಿ ಜಿಲ್ಲೆಯ ಖಮ್ಲಿಘಾಟ್‌ಗೆ ತನ್ನ ಪ್ರಯಾಣ ಮಾಡುತ್ತದೆ.
ಹೊಸ ಹೆರಿಟೇಜ್ ರೈಲು ಸೇವೆಯು ಪ್ರಯಾಣಿಕರಿಗೆ ವಿಶಿಷ್ಟವಾದ ಅನುಭವವನ್ನು ಮತ್ತು ರಾಜಸ್ಥಾನದ ರೈಲ್ವೆಯ ಶ್ರೀಮಂತ ಪರಂಪರೆ ಮತ್ತು ಇತಿಹಾಸದ ಒಂದು ನೋಟವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ರೈಲಿನ ವೈಶಿಷ್ಟ್ಯಗಳು:
ಈ ಹೆರಿಟೇಜ್ ರೈಲಿನಲ್ಲಿ ಒಂದು ಬಾರಿಗೆ 60 ಪ್ರಯಾಣಿಕರು ಪ್ರಯಾಣಿಸಬಹುದು. ಈ ರೈಲಿನ ಕೋಚ್‌ಗಳು ಹೊರಗಿನ ಸ್ವಚ್ಛಂಧ ದೃಶ್ಯವನ್ನು ನೋಡಲು ಪ್ರತಿ ಬದಿಯಲ್ಲಿ ದೊಡ್ಡ ಕಿಟಕಿಗಳೊಂದಿಗೆ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿರುತ್ತವೆ. ಪ್ರಯಾಣದ ಸಮಯದಲ್ಲಿ, ಪ್ರಯಾಣಿಕರು ರಾಜಸ್ಥಾನದ ಮಿನಿ ಕಾಶ್ಮೀರ ಮತ್ತು ಭಿಲ್ ಬೆರಿ ಜಲಪಾತದ ಅತ್ಯುನ್ನತ ಸ್ಥಳವೆಂದು ಕರೆಯಲ್ಪಡುವ ಗೋರಂ ಘಾಟ್‌ನ ರಮಣೀಯ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.
ಹೆರಿಟೇಜ್ ರೈಲಿನ ವಿನ್ಯಾಸವು 150 ವರ್ಷಗಳಷ್ಟು ಹಳೆಯದಾದ ಉಗಿ ಎಂಜಿನ್ ಆಗಿದೆ. ಈ ರೈಲು ಹಚ್ಚ ಹಸಿರಿನ ಕಣಿವೆಗಳು, ಸಸ್ಯ ಮತ್ತು ಪ್ರಾಣಿಗಳನ್ನು ಪ್ರದರ್ಶಿಸುವ ಬೆಟ್ಟಗಳ ಮೂಲಕ ಹಾದುಹೋಗುವಾಗ ಸುಂದರವಾದ ಪ್ರಯಾಣ ಅನುಭವನ್ನು ನೀಡುತ್ತದೆ.
ರೈಲು ವೇಳಾಪಟ್ಟಿ:
ಈ ರೈಲು ಮಾರ್ವಾರ್ ಜಂಕ್ಷನ್‌ನಿಂದ ಬೆಳಗ್ಗೆ 8:30ಕ್ಕೆ ಹೊರಡಲಿದ್ದು, 11:00 ಗಂಟೆಗೆ ಕಾಮ್‌ಘಾಟ್ ತಲುಪಲಿದೆ. ಮಾರ್ವಾರ್‌ನಿಂದ ಹೊರಟ ನಂತರ, ರೈಲು ಫುಲಾಡ್‌ನಲ್ಲಿ ನಿಲ್ಲುತ್ತದೆ. ಅಲ್ಲಿ 25 ನಿಮಿಷಗಳ ನಿಲುಗಡೆ ಇರುತ್ತದೆ. ಇದು ವಾರದಲ್ಲಿ ನಾಲ್ಕು ದಿನ ನಡೆಯುತ್ತದೆ. ಹೆರಿಟೇಜ್ ರೈಲು ಮಧ್ಯಾಹ್ನ 3 ಗಂಟೆಗೆ ಕಮ್‌ಘಾಟ್‌ನಿಂದ ಹಿಂದಿರುಗಲು ಪ್ರಾರಂಭಿಸಿ ಸಂಜೆ 5:30 ಕ್ಕೆ ಮಾರ್ವಾರ್ ಜಂಕ್ಷನ್‌ಗೆ ತಲುಪುತ್ತದೆ.
ಟಿಕೆಟ್ ಬೆಲೆ:
ಹೊಸ ಹೆರಿಟೇಜ್ ರೈಲಿನ ಪ್ರತಿ ಟಿಕೆಟ್‌ನ ಬೆಲೆ 2,000 ರೂಪಾಯಿ. "ಇಂದು ರಾಜಸ್ಥಾನದ ಮೊದಲ ಪಾರಂಪರಿಕ ರೈಲು ವ್ಯಾಲಿ ಕ್ವೀನ್ ನ ವರ್ಚುವಲ್ ಆಗಿ ಉದ್ಘಾಟನೆಯಾಗಿದೆ. ಮಾರ್ವಾರ್ ಜಂಕ್ಷನ್‌ನಿಂದ ಕಮ್ಲಿಘಾಟ್ ಸ್ಟೇಷನ್‌ಗೆ ಮತ್ತು ಮಾರ್ವಾರ್ ಜಂಕ್ಷನ್‌ನಿಂದ ಕಮ್‌ಘಾಟ್‌ಗೆ ರೈಲು ಪ್ರಯಾಣವನ್ನು ಆನಂದಿಸಿದೆವು. ಈ ಸಮಯದಲ್ಲಿ ನಾವು ಮಕ್ಕಳು, ಮಹಿಳೆಯರು ಮತ್ತು ಇತರ ಪ್ರಯಾಣಿಕರೊಂದಿಗೆ ಕುಳಿತು ಗೋರಂ ಘಾಟ್‌ನ ಸುಂದರವಾದ ಮತ್ತು ಮೋಡಿಮಾಡುವ ಕಣಿವೆಗಳ ಸುಂದರವಾದ ನೋಟಗಳನ್ನು ನೋಡಿದೆವು ಎಂದು ಬಿಜೆಪಿ ಸಂಸದೆ ದಿವ್ಯಾ ಕುಮಾರಿ ಉದ್ಘಾಟನೆಯ ಸಂದರ್ಭದಲ್ಲಿ ಪ್ರಯಾಣದ ವೇಳೆ ಹೇಳಿದ್ದಾರೆ.
ಭಾರತದಲ್ಲಿ ಹೆರಿಟೇಜ್ ರೈಲುಗಳು:
ಯುನೆಸ್ಕೋ ನಾಲ್ಕು ರೈಲು ಮಾರ್ಗಗಳಿಗೆ ವಿಶ್ವ ಪರಂಪರೆಯ ತಾಣಗಳನ್ನು ನೀಡಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ (1999), ನೀಲಗಿರಿ ಮೌಂಟೇನ್ ರೈಲ್ವೆ (2005), ಕಲ್ಕಾ ಶಿಮ್ಲಾ ರೈಲ್ವೆ (2008) ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್, ಮುಂಬೈ (2004). ಮಾಥೆರಾನ್ ಲೈಟ್ ರೈಲ್ವೇ ಮತ್ತು ಕಾಂಗ್ರಾ ವ್ಯಾಲಿ ರೈಲ್ವೇ ತಾತ್ಕಾಲಿಕ ಪಟ್ಟಿಯಲ್ಲಿರುವ ಇನ್ನೆರಡು ಮಾರ್ಗಗಳಾಗಿವೆ.












Click it and Unblock the Notifications