"ನಿಜವಾಗಿ ಪೌರುಷವಿದ್ದರೆ ಮಹಿಳೆಯರನ್ನ ಅವಮಾನಿಸದೆ ರಾಜಕಾರಣ ಮಾಡಿ": ಉದಯನಿಧಿ ಸ್ಟಾಲಿನ್‌ಗೆ ಖುಷ್ಬೂ ಸುಂದರ್ ನೇರ ಸವಾಲು

ಇದೀಗ ತಮಿಳುನಾಡು ರಾಜಕಾರಣದಲ್ಲಿ ಸಂಚಲನ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ನೀಡಿರುವ ಹೇಳಿಕೆಗೆ ವಿರುದ್ಧ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ತ್ರಿಶಾ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಉದಯನಿಧಿ ಆಡಿರುವ ಮಾತುಗಳು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು, ಇಂತಹ ಕೀಳುಮಟ್ಟದ ಹೇಳಿಕೆ ನೀಡಿದ ವ್ಯಕ್ತಿ ತಮ್ಮನ್ನು ತಾವು 'ನಾಯಕ' ಎಂದು ಕರೆದುಕೊಳ್ಳಲು ನಾಚಿಕೆಯಾಗಬೇಕು ಎಂದು ಖುಷ್ಬೂ ಸುಂದರ್ ವಾಗ್ದಾಳಿ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆಯೇನು?

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ತಂಜಾವೂರಿನಲ್ಲಿ ಡಿಎಂಕೆ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಆಡಳಿತಾರೂಢ ಟಿವಿಕೆ ಸರ್ಕಾರದ ವಿರುದ್ಧ ಕಟು ಟೀಕೆಗಳನ್ನ ಮಾಡಿದ್ದರು. ಭಾಷಣದ ವೇಳೆ ಮುಖ್ಯಮಂತ್ರಿ ಹಾಗೂ ನಟಿ ತ್ರಿಶಾ ಕುರಿತು ಪರೋಕ್ಷವಾಗಿ ಹೇಳಿಕೆ ನೀಡಿದ್ದು, ಅವಹೇಳನಕಾರಿ ಹೇಳಿಕೆಗಳನ್ನ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

Kushboo Sundar

ಈ ಹೇಳಿಕೆಯ ವಿರುದ್ಧ ಟಿವಿಕೆ ಪಕ್ಷದ ಮಹಿಳಾ ನಾಯಕಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಚೆನ್ನೈನಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನ ಬಂಧಿಸಿದ್ದರು. ಬಳಿಕ ರಸ್ತೆ ಮಾರ್ಗವಾಗಿ ತಂಜಾವೂರಿಗೆ ಕರೆದೊಯ್ಯಲಾಗಿತ್ತು. ತಂಜಾವೂರಿನಲ್ಲಿ ಡಿಎಂಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ, ಸೆಂಗಿಪಟ್ಟಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.

"ಮಹಿಳೆಯರನ್ನು ಅವಮಾನಿಸಲು ಹಕ್ಕು ಕೊಟ್ಟವರಾರು?" - ಖುಷ್ಬೂ ಸುಂದರ್ ಆಕ್ರೋಶ

ಈ ಬೆಳವಣಿಗೆಯ ಕುರಿತು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ಡಿಎಂಕೆ ನಾಯಕರ ಸಂಸ್ಕೃತಿರನ್ನ ಕಟುವಾಗಿ ಟೀಕಿಸಿದ್ದಾರೆ. "ಉದಯನಿಧಿ ಸ್ಟಾಲಿನ್ ಅವರ ಮಾತುಗಳು ನನಗೆ ಆಶ್ಚರ್ಯ ತಂದಿಲ್ಲ. ಡಿಎಂಕೆ ಪಕ್ಷದಲ್ಲಿ ಮಹಿಳೆಯರನ್ನ ಕೀಳಾಗಿ ಕಾಣುವ, ಲಿಂಗ ತಾರತಮ್ಯದ ಹಾಗೂ ಅವಹೇಳನಕಾರಿ ಮಾತುಗಳನ್ನ ನಾನು ಹಿಂದೆಯೂ ಬಹಳಷ್ಟು ನೋಡಿದ್ದೇನೆ; ಈಗಲೂ ಅದೇ ಮುಂದುವರಿದಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಉದಯನಿಧಿ ಒಬ್ಬ ಯುವ ನಾಯಕ, ಮಾಜಿ ಉಪಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ. ಅವರು ಇತರರಿಗಿಂತ ಭಿನ್ನವಾಗಿ, ಜವಾಬ್ದಾರಿಯುತವಾಗಿ ಇರುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ಅತ್ಯಂತ ಅಸಹ್ಯಕರ, ಕೀಳುಮಟ್ಟದ ಭಾಷೆಯನ್ನು ಬಳಸಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯೊಬ್ಬರನ್ನು ಹೀಗೆ ಅವಮಾನಿಸಲು ನಿಮಗೆ ಹಕ್ಕು ಕೊಟ್ಟವರಾರು? ಮಹಿಳೆಯರನ್ನು ನಿಂದಿಸಿದರಷ್ಟೇ ತಾವು ಬಲಶಾಲಿ ನಾಯಕ ಎಂದು ಸಾಬೀತುಪಡಿಸಬೇಕೇ?" ಎಂದು ಖುಷ್ಬೂ ಪ್ರಶ್ನಿಸಿದ್ದಾರೆ.

"ಪೌರುಷವಿದ್ದರೆ ಮಹಿಳೆಯರನ್ನ ಎಳೆಯದೆ ರಾಜಕಾರಣ ಮಾಡಿ"ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಖುಷ್ಬೂ ಸುಂದರ್, "ಡಿಎಂಕೆ ನಾಯಕರು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಇದೇ ಮೊದಲಲ್ಲ. ಮಹಿಳೆಯರನ್ನ ನಿಂದಿಸುವ ಮುಖಂಡರನ್ನು ಕೇವಲ ಕಣ್ಣೊರೆಸುವ ತಂತ್ರವಾಗಿ ಪಕ್ಷದಿಂದ ಅಮಾನತು ಮಾಡಿ, ಕೆಲವೇ ದಿನಗಳಲ್ಲಿ ಮತ್ತೆ ಸೇರಿಸಿಕೊಳ್ಳಲಾಗುತ್ತದೆ. ನಿಮಗೆ ನಿಜವಾಗಿಯೂ ಪೌರುಷವಿದ್ದರೆ, ಮಹಿಳೆಯರನ್ನು ಅವಮಾನಿಸದೆ, ಅವರ ಬಗ್ಗೆ ಹಗುರವಾಗಿ ಮಾತನಾಡದೆ ರಾಜಕಾರಣ ಮಾಡಿ ತೋರಿಸಿ," ಎಂದು ನೇರ ಸವಾಲು ಹಾಕಿದ್ದಾರೆ.

ಡಿಎಂಕೆ ಪಕ್ಷದ ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಬಗ್ಗೆಯೂ ಟೀಕಿಸಿದ ಅವರು, "ಡಿಎಂಕೆ ನಾಯಕರು ಇಷ್ಟು ದಿನ ಯಾರೂ ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾಯಾ ಲೋಕದಲ್ಲಿ ಬದುಕುತ್ತಿದ್ದರು. ಆದರೆ ಇತ್ತೀಚಿನ ಚುನಾವಣೆಯು ಆ ಮಾಯೆಯನ್ನಾ ಒಡೆದುಹಾಕಿದೆ. ಸ್ವತಃ ಡಿಎಂಕೆ ಪಕ್ಷದ ಕಾರ್ಯಕರ್ತರು ಹಾಗೂ ಅವರ ಕುಟುಂಬಸ್ಥರೇ ಈ ಬಾರಿ ಪಕ್ಷಕ್ಕೆ ಮತ ಹಾಕಿಲ್ಲ. ಉದಯನಿಧಿ ಸ್ಟಾಲಿನ್ ಅವರ ಇಂತಹ ಹೇಳಿಕೆಗಳು ಮಹಿಳೆಯರ ಬಗ್ಗೆ ಅವರಿಗಿರುವ ಅತ್ಯಂತ ಕೀಳು ಮನಸ್ಥಿತಿಯನ್ನ ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ," ಎಂದು ಖುಷ್ಬೂ ಸುಂದರ್ ಗುಡುಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+