ಪಟಾಕಿ ಹೊಡೆಯಬೇಡಿ ಎಂಬ ಅಜ್ಜಿ ಮಾತು ಕೇಳಲಿಲ್ಲ
ತಿರುವನಂತಪುರಂ, ಏಪ್ರಿಲ್ 11 : ಜಾತ್ರೆಯಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಎಂದು ಹೋರಾಟ ಮಾಡುತ್ತಿದ್ದವರ ಮನೆ ಅಗ್ನಿ ದುರಂತದಲ್ಲಿ ಹಾನಿಗೊಳಗಾಗಿದೆ. ಇದು ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದ ಕಥೆ. [ಸುದ್ದಿದನಿ : ಅಜ್ಜಿಯ ಮಾತು ಯಾರಿಗೂ ಕೇಳಲಿಲ್ಲ]
ಭಾನುವಾರ ಮುಂಜಾನೆ ಕೊಲ್ಲಂ ಜಿಲ್ಲೆಯ ಪರವೂರ್‌ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದಲ್ಲಿ 100ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಲಾಗಿದೆ. [ಕೇರಳ ಪಟಾಕಿ ದುರಂತ, 5 ಜನರ ಬಂಧನ]

ಪಂಕಜಾಕ್ಷಿ ಹೋರಾಟ : ದೇವಾಲಯದ ಜಾತ್ರೆಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು 80 ವರ್ಷ ವಯಸ್ಸಿನ ಪಂಕಜಾಕ್ಷಿ ಅವರು ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಭಾನುವಾರ ನಡೆದ ದುರಂತದ ಸುದ್ದಿ ಕೇಳಿ ಅವರು ಬೆಚ್ಚಿಬಿದ್ದಿದ್ದಾರೆ. [ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]
ಪಂಕಜಾಕ್ಷಿ ಅವರ ಮನೆ ದೇವಾಲಯದಿಂದ ಸುಮಾರು 50 ಮೀಟರ್ ದೂರದಲ್ಲಿದೆ. 4 ವರ್ಷದಿಂದ ಪಟಾಕಿ ಹೊಡೆದರೆ ಆಗಬಹುದಾದದ ದುರಂತದ ಬಗ್ಗೆ ಪಂಕಜಾಕ್ಷಿ ಅವರು ದೂರು ನೀಡುತ್ತಲೇ ಇದ್ದಾರೆ. ಆದರೆ, ಪಟಾಕಿ ಹೊಡೆಯುವುದು ನಿಂತಿಲ್ಲ. ಏ.10ರಂದು ನಡೆದ ದುರಂತದಲ್ಲಿ ಅವರ ಮನೆಗೂ ಹಾನಿ ಉಂಟಾಗಿದೆ. [ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!]
ಪಂಕಜಾಕ್ಷಿ ಮತ್ತು ಆಕೆಯ ಮನೆಯವರು ಪ್ರತಿಬಾರಿ ಪಟಾಕಿ ನಿಷೇಧದ ಬಗ್ಗೆ ಮಾತನಾಡಿದಾಗ ದೇವಾಲಯದ ಆಡಳಿತ ಮಂಡಳಿ ಸಂಪ್ರದಾಯವನ್ನು ವಿರೋಧಿಸುತ್ತಾರೆ ಎಂದು ಹೇಳಿ, ಅದನ್ನು ಮುಚ್ಚಿಹಾಕುತ್ತಿತ್ತು. ಇಂತಹ ದುರಂತ ನಡೆಯಬಹುದು ಎಂದು ಅವರು ಎಚ್ಚರಿಕೆ ನೀಡುತ್ತಿದ್ದರು ಎಂಬುದನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. [ಪಟಾಕಿ ಸಿಡಿದು ಭಾರೀ ಅಗ್ನಿ ದುರಂತ, 105 ಸಾವು]
'ಉತ್ಸವದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಎಂದು ಕೊಲ್ಲಂ ಜಿಲ್ಲಾಡಳಿತಕ್ಕೆ ಪಂಕಜಾಕ್ಷಿ ಪ್ರತಿ ವರ್ಷವೂ ಮನವಿ ಮಾಡುತ್ತಿದ್ದರು. ಪ್ರತಿ ಬಾರಿ ಜಾತ್ರೆ ನಡೆದಾಗ ಅವರ ಮನೆಗೆ ಹಾನಿಯಾಗುತ್ತಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ' ಎಂದು ಪಂಕಜಾಕ್ಷಿ ಅಳಿಯ ಪ್ರಕಾಶ್ ಹೇಳಿದ್ದಾರೆ.
ಅಂದಹಾಗೆ ಭಾನುವಾರ ನಡೆದ ದುರಂತಕ್ಕೆ ಸಂಬಂಧಿಸಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಟಾಕಿ ಹೊಡೆಯಲು ಬಂದಿದ್ದ 5 ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ಕೇರಳ ದುರಂತದ ಚಿತ್ರಗಳು]
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications