ಅಸೆಂಬ್ಲಿ ಚುನಾವಣೆ: ತಮಿಳುನಾಡು, ಕೇರಳ ಚುನಾವಣಾಪೂರ್ವ ಸಮೀಕ್ಷೆ

ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ಮತ್ತು ಕೇರಳದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೇ, ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆ ಹೊರಬಿದ್ದಿದೆ.

ಕೇರಳ ರಾಜ್ಯದ ಸಮೀಕ್ಷೆಯನ್ನು ತಿರುವನಂತಪುರ ಮೂಲದ ಐಎಂಇಜಿ (Institute for Monitoring Economic Growth) ಸಂಸ್ಥೆ ನಡೆಸಿದೆ. ಏಪ್ರಿಲ್ 20 ರಿಂದ ಮೇ 6ರ ವರೆಗಿನ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. (ಸಿವೋಟರ್ ಸರ್ವೇ)

ಕೇರಳದ ದಕ್ಷಿಣ, ಉತ್ತರ ಮತ್ತು ಕೇಂದ್ರ ಭಾಗದ ಸುಮಾರು ಅರವತ್ತು ಸಾವಿರ ಜನರ ಅಭಿಪ್ರಾಯವನ್ನು ಆಧರಿಸಿ, ಐಎಂಇಜಿ ಸಂಸ್ಥೆ ಕೇರಳದ ಅಸೆಂಬ್ಲಿ ಚುನಾವಣೆಯ ಸಮೀಕ್ಷೆಯನ್ನು ಪ್ರಕಟಿಸಿದೆ.

ಇನ್ನು ಪುತಿಯ ತಲೈಮುರೈ ಟಿವಿ ಮತ್ತು ಎಪಿಟಿ ಜಂಟಿಯಾಗಿ ತಮಿಳುನಾಡಿನ ಅಸೆಂಬ್ಲಿ ಚುನಾವಣೆಯ ಸಮೀಕ್ಷೆಯನ್ನು ನಡೆಸಿದೆ. ತಮಿಳುನಾಡಿನ ಇನ್ನೂರು ವಿವಿಧ ಸ್ಥಳಗಳಲ್ಲಿ ಹದಿನಾರು ಪ್ರಶ್ನೆಗಳ ಮೂಲಕ, 5016 ಮತದಾರರ ಅಭಿಪ್ರಾಯ ಕ್ರೋಢೀಕರಿಸಿ ಸಮೀಕ್ಷೆಯನ್ನು ಸಿದ್ದಪಡಿಸಿದೆ.

ಎರಡೂ ಸಮೀಕ್ಷೆಗಳ ಪ್ರಕಾರ, ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಯಾವುದೇ ಲಾಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಸಮೀಕ್ಷೆ ಪ್ರಕಾರ, ಯಾರಿಗೆ ಎಷ್ಟು ಸ್ಥಾನ, ಸಿಎಂ ಸ್ಥಾನಕ್ಕೆ ಉತ್ತಮ ಆಯ್ಕೆಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. (5 ರಾಜ್ಯಗಳ ಚುನಾವಣಾಪೂರ್ವ ಸಮೀಕ್ಷೆ)

ಕೇರಳ ಮತ್ತು ತಮಿಳುನಾಡು ಅಸೆಂಬ್ಲಿಗೆ ಚುನಾವಣೆ ಮೇ 16ರಂದು ನಡೆಯಲಿದ್ದು, ಇವೆರಡು ರಾಜ್ಯಗಳ ಸಹಿತ ಒಟ್ಟು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮೇ 19ರಂದು ಪ್ರಕಟವಾಗಲಿದೆ.

 ಕೇರಳ ಸಮೀಕ್ಷೆ

ಕೇರಳ ಸಮೀಕ್ಷೆ

(ಆವರಣದಲ್ಲಿ ಹಾಲೀ ಶಾಸಕರ ಸಂಖ್ಯೆ)
ಒಟ್ಟು ಸ್ಥಾನ: 140
ಕಾಂಗ್ರೆಸ್ ನೇತೃತ್ವದ ಯುಡಿಎಫ್ : 50-57 (72)
ಎಡಪಕ್ಷಗಳ ಎಲ್ಡಿಎಫ್ : 83-90 (68)
ಬಿಜೆಪಿ ನೇತೃತ್ವದ ಎನ್ಡಿಎ : 0

ಕೇರಳ ಇನ್ನೊಂದು ಸಮೀಕ್ಷೆ

ಕೇರಳ ಇನ್ನೊಂದು ಸಮೀಕ್ಷೆ

ಮಾರ್ಸ್ ಏಜನ್ಸೀಸ್ ಇದೇ ತಿಂಗಳಲ್ಲಿ ಪ್ರಕಟಿಸಿದ ಸಮೀಕ್ಷೆ ಈ ರೀತಿಯಿದೆ
(ಆವರಣದಲ್ಲಿ ಹಾಲೀ ಶಾಸಕರ ಸಂಖ್ಯೆ)
ಒಟ್ಟು ಸ್ಥಾನ: 140
ಕಾಂಗ್ರೆಸ್ ನೇತೃತ್ವದ ಯುಡಿಎಫ್ : 70-75 (72)
ಎಡಪಕ್ಷಗಳ ಎಲ್ಡಿಎಫ್ : 63-67 (68)
ಬಿಜೆಪಿ ನೇತೃತ್ವದ ಎನ್ಡಿಎ : 0

ತಮಿಳುನಾಡು ಸಿಎಂಗೆ ಉತ್ತಮ ಆಯ್ಕೆ

ತಮಿಳುನಾಡು ಸಿಎಂಗೆ ಉತ್ತಮ ಆಯ್ಕೆ

ಜಯಲಲಿತಾ - ಶೇ. 32.63%
ಎಂ ಕೆ ಸ್ಟಾಲಿನ್ - ಶೇ.18.88%
ಎಂ ಕರುಣಾನಿಧಿ - ಶೇ.15.21%
ವಿಜಯಕಾಂತ್ - ಶೇ. 6.54%
ರಾಮದಾಸ್ - ಶೇ. 4.30%
ವೈಕೋ - ಶೇ. 4.04%
ಪಿ. ಚಿದಂಬರಂ - ಶೇ. 1.28%

ಮುಂದಿನ ಚುನಾವಣೆಗೆ ವಿಶ್ವಾಸಾರ್ಹ ಸಿಎಂ ವ್ಯಕ್ತಿ

ಮುಂದಿನ ಚುನಾವಣೆಗೆ ವಿಶ್ವಾಸಾರ್ಹ ಸಿಎಂ ವ್ಯಕ್ತಿ

ಎಂ ಕೆ ಸ್ಟಾಲಿನ್ - ಶೇ. 27.09%
ವಿಜಯಕಾಂತ್ - ಶೇ. 9.71%
ರಾಮದಾಸ್ - ಶೇ. 5.61%

ತಮಿಳುನಾಡು ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸ್ಥಾನ

ತಮಿಳುನಾಡು ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸ್ಥಾನ

(ಆವರಣದಲ್ಲಿ ಹಾಲೀ ಶಾಸಕರ ಸಂಖ್ಯೆ)
ಒಟ್ಟು ಸ್ಥಾನ: 234
ಡಿಎಂಕೆ ಮೈತ್ರಿಕೂಟ - 66 (31)
ಎಐಡಿಎಂಕೆ ಮೈತ್ರಿಕೂಟ - 164 (203)
ಇತರರು - 04

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+