ಕೇರಳ ಆಘಾತ : 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ

ತಿರುವನಂತಪುರ, ಸೆ. 21: 90ವರ್ಷ ವೃದ್ಧೆ ಮೇಲೆ ನೆರೆ ಮನೆಯಾತ ಆತ್ಯಾಚಾರ ಎಸಗಿರುವ ಘಟನೆ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ಕ್ಯಾನ್ಸರ್ ಪೀಡಿತ 90 ವರ್ಷದ ವೃದ್ಧೆ ಪರಿಪರಿಯಾಗಿ ಬೇಡಿಕೊಂಡರೂ ದುಷ್ಕರ್ಮಿ ಕೇಳಲಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ನಡೆದು ಐದು ದಿನಗಳಾಗಿದ್ದರೂ ಬುಧವಾರ ಬೆಳಕಿಗೆ ಬಂದಿದೆ.

ಮನೆಗೆ ನುಗ್ಗಿದವನಿಗೆ ನಮ್ಮ ಮನೆಯ ಎಲ್ಲಾ ಮೂಲೆಗಳು ತಿಳಿದಿತ್ತು. ಹಿಂಬಾಗಿಲಿನಿಂದ ಬಂದ ಈತ ನನ್ನ ಬಳಿ ಬಂದಾಗ ನಾನು ಬೇಡಿಕೊಂಡೆ. ಅತ್ಯಾಚಾರ ಎಸಗಬೇಡ ಎಂದೆ ಆದರೆ, ಆತ ನನ್ನ ಮೇಲೆ ಹಲ್ಲೆ ಮಾಡಿ ಬಲಾತ್ಕಾರಮಾಡಿದ ಎಂದು ವೃದ್ಧೆ ನೋವಿನಿಂದ ಪೊಲೀಸರಿಗೆ ದೂರು ನೀಡಿದ್ದಾರೆ.

Kerala shocker: 90-year-old cancer patient raped in Kollam

ದೂರು ದಾಖಲಿಸಿಕೊಂಡಿರುವ ಕೊಲ್ಲಂ ಜಿಲ್ಲೆ ಕಡಕ್ಕಳ್ ನ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 377 ಡಿ ಹಾಗೂ 354 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಲ್ಲಂ ಗ್ರಾಮೀಣ ವಿಭಾಗದ ಎಸ್ಪಿ ಅಜಿತಾ ಬೇಗಂ, ಸಂತ್ರಸ್ತೆಯ ಹೇಳಿಕೆ ಪಡೆದುಕೊಳ್ಳಲಾಗಿದೆ. ಆರೋಪಿಯ ಮೇಲೆ ಪ್ರಕರಣ ದಾಖಲಾಗಿದ್ದು, ಎಫ್ ಐಆರ್ ಹಾಕಲಾಗಿದೆ. ವೃದ್ಧೆಯ ಮನೆಯವರು, ಸಂಬಂಧಿಕರು, ನೆರಮನೆಯವರ ಹೇಳಿಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+