ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಪಾದ್ರಿಯಿಂದ ಮತ್ತೊಂದು ಅತ್ಯಾಚಾರ ಪ್ರಕರಣ

By Prasad
|
Google Oneindia Kannada News

ಅಲೆಪ್ಪಿ, ಜುಲೈ 09 : ಮೂವತ್ತೊಂಬತ್ತು ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನ ಮೇರೆಗೆ ಪಾದ್ರಿ ಬಿನು ಜಾರ್ಜ್ ಎಂಬುವವರ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಫಾದರ್ ಚರ್ಚಿನಿಂದ ಪರಾರಿಯಾಗಿದ್ದಾರೆ.

ದೂರಿನ ಪ್ರಕಾರ, ಕೊಯ್ಪಲ್ಲಿಕರಣ್ಮ ಎಂಬಲ್ಲಿ ಚರ್ಚ್ ಪಾದ್ರಿಯಾಗಿರುವ ಫಾದರ್ ಬಿನು ಜಾರ್ಜ್ ಅವರು 2014ರಲ್ಲಿ ತಮ್ಮ ಕಚೇರಿಯಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರು. ಯಾವುದೋ ವಿಷಯದ ಮೇಲೆ ಚರ್ಚೆ ಮಾಡಬೇಕೆಂದು ಕರೆಸಿಕೊಂಡು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆಪಾದ್ರಿಗಳಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಕರುಣಾಜನಕ ಕಥೆ

ಕೌಟುಂಬಿಕ ವಿಷಯದ ಬಗ್ಗೆ ಮಾತುಕತೆ ನಡೆಸಬೇಕು ಎಂದು, ಅಲೆಪ್ಪಿ ಜಿಲ್ಲೆಯ ಕಾಯಂಕುಳಂ ನಿವಾಸಿಯಾಗಿರುವ ಆ ಮಹಿಳೆಯನ್ನು ಪಾದ್ರಿ ಬಿನು ಜಾರ್ಜ್ ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದರು. ನಂತರ, ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದರು. ಪಾದ್ರಿಯ ವಯಸ್ಸು, ಊರು ಯಾವುದು ಎಂದು ಇನ್ನೂ ತಿಳಿದುಬಂದಿಲ್ಲ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

Kerala: Rape case filed against Orthodox Church priest Binu George

ಕೇರಳದಲ್ಲಿ, ತಮ್ಮ ಮೇಲಿರುವ ನಂಬಿಕೆಯನ್ನು ಹುಸಿಗೊಳಿಸಿ ಪಾದ್ರಿಗಳು ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇತ್ತೀಚೆಗಷ್ಟೇ, ಮಹಿಳೆಯ ಪರಿಚಯವನ್ನೇ ದುರುಪಯೋಗಪಡಿಸಿಕೊಂಡು ಐವರು ಪಾದ್ರಿಗಳು ದಶಕಗಳ ಕಾಲ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಐವರ ಮೇಲೆ ಪ್ರಕರಣ ದಾಖಲಾಗಿದೆ.

ಈ ಪ್ರಕರಣ ಕೇರಳದಾದ್ಯಂತ ಭಾರೀ ಬಿರುಗಾಳಿ ಎಬ್ಬಿಸಿದೆ. ಕೇರಳದಲ್ಲಿ ಧಾರ್ಮಿಕ ನಂಬಿಕೆಯ ತಳಹದಿಯೇ ಅಲ್ಲಾಡುವಂತೆ ಈ ಪ್ರಕರಣ ಮಾಡಿದೆ. ಕೆಲ ಪಾದ್ರಿಗಳು ಮಹಿಳೆಯರನ್ನು ಫೈವ್ ಸ್ಟಾರ್ ಹೋಟೆಲಿಗೆ ಕರೆಯಿಸಿಕೊಂಡು ಅತ್ಯಾಚಾರ ಎಸಗುತ್ತಿದ್ದಾರೆ. ಕೆಲ ಪಾದ್ರಿಗಳು ಲೈಂಗಿಕ ಸಂಬಂಧದ ಬಗ್ಗೆ ಚರ್ಚಿನಲ್ಲಿ ತಪ್ಪೊಪ್ಪಿಕೊಂಡಿದ್ದನ್ನೇ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾರೆ.

English summary
Kerala police have filed a rape case against an Orthodox Church priest Binu George based on the complaint of a 39-year-old woman from Kayamkulam in Alappuzha district, on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X