ಕತುವಾ ರೇಪ್ ಸಂತ್ರಸ್ತೆ ಪರ ನಿಂತ ಕೇರಳ ಲೆಕ್ಚರರ್ ಗೆ ಬಿಜೆಪಿಯಿಂದ ಬೆದರಿಕೆ

ತಿರುವನಂತಪುರಂ, ಮೇ 01: ಕತುವಾ ಅತ್ಯಾಚಾರ ಸಂತ್ರಸ್ತೆ ಪರ ಫೇಸ್ ಬುಕ್ ನಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಪೋಸ್ಟ್ ಮಾಡಿದ ತ್ರಿಸ್ಸೂರು ಮೂಲದ ಉಪನ್ಯಾಸಕಿ ದೀಪಾ ನಿಶಾಂತ್ ಗೆ ಬೆದರಿಕೆ ಕರೆಗಳು ಬಂದಿವೆ. ಬಿಜೆಪಿ ಕಾರ್ಯಕರ್ತರಿಂದ ಬೆದರಿಕೆ ಕರೆಗಳು ಬಂದಿದೆ ಎಂದು ರಕ್ಷಣೆ ಕೋರಿ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಶ್ರೀಕೇರಳ ವರ್ಮಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ದೀಪಾ ಅವರು, ತಮಗೆ ಬಂದಿರುವ ಬೆದರಿಕೆ ಕರೆ, ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದುಕೊಂಡು, ಪೊಲೀಸರಿಗೆ ಸಲ್ಲಿಸಿದ್ದಾರೆ.

ದೂರಿನಲ್ಲಿ ಏನಿದೆ?: ಬಿಜೆಪಿ ಮುಖಂಡ ಟಿಜಿ ಮೋಹನ್ ದಾಸ್ ಹಾಗೂ ಅವರ ಬೆಂಬಲಿಗರು ನನ್ನ ವಿರುದ್ಧ ಅಭಿಯಾನ ನಡೆಸುತ್ತಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಫೋನ್ ನಂಬರ್ ಹಂಚಿಕೊಂಡು, ನನ್ನನ್ನು ಹೀಯಾಳಿಸಿ, ಅವಮಾನಿಸುವಂತೆ ಕರೆ ನೀಡಿದ್ದಾರೆ. ನನ್ನ ವಿಳಾಸವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈಯಕ್ತಿಕವಾಗಿ ಗುರಿಯನ್ನಾಗಿಸಿಕೊಂಡು ನನಗೆ ಬೆದರಿಕೆ ಹಾಕಲಾಗುತ್ತಿದೆ ಎಂದಿದ್ದಾರೆ.

Kerala lecturer files police complaint after receiving death threats from BJP workers

'ಈಕೆ ತನ್ನ ಮಿತಿ ಮೀರಿದ್ದಾಳೆ. ಇವಳ ರಕ್ತ ಬೇಕಿದೆ' ಬಹರೇನ್ ನಿಂದ ಬಿಜೆಪಿ ಬೆಂಬಲಿಗ ರಮೇಶ್ ನಾಯರ್ ಎಂಬುವರು ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.

ಬೆಂಗಳೂರು ಮೂಲದ ದೀಪಕ್ ಶಂಕರನಾರಾಯಣನ್ ಎಂಬ ಐಟಿ ಉದ್ಯೋಗಿ ಅವರು ಕತುವಾ ಅತ್ಯಾಚಾರ ಹಾಗೂ ಸರಣಿ ರೇಪ್ ಪ್ರಕರಣಗಳನ್ನು ಖಂಡಿಸಿ . ಕಾಶ್ಮೀರದ ಬಾಲಕಿಗೆ ನ್ಯಾಯ ಸಿಗಬೇಕಿದೆ ಎಂದು ಹಾಕಿದ್ದ ಪೋಸ್ಟ್ ಪರ ದೀಪಾ ಅವರು ನಿಂತಿದ್ದರು.

ಶೇ 31ರಷ್ಟು ಮತ ಪಡೆದವರಿಗೆ ಈ ಹೀನಕೃತ್ಯದ ಬಗ್ಗೆ ಗೊತ್ತಿರಬೇಕು ಎಂದು ದೀಪಕ್ ಹಾಕಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಶೇಕಡಾವಾರು ಮತ ಗಳಿಕೆ ಶೇ31ರಷ್ಟಿತ್ತು. ಹೀಗಾಗಿ, ದೀಪಕ್ ವಿರುದ್ಧ ತಿರುವನಂತಪುರಂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+