ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ನರಬಲಿ: ಹತ್ಯೆಯಾದ ಮಹಿಳೆಯರ ಬಗ್ಗೆ ಮಕ್ಕಳು ನೀಡಿದ ಮಾಹಿತಿ ಇಲ್ಲಿದೆ

|
Google Oneindia Kannada News

ಎರ್ನಾಕುಲಂ: ಕೇರಳದಲ್ಲಿ ನಡೆದ ಅಮಾನವೀಯ ನರಬಲಿ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ರೋಸಲಿನ್‌ ಹಾಗೂ ಪದ್ಮಾ ಎಂಬ ಮಹಿಳೆಯರು ನರಬಲಿಗೆ ಒಳಾಗಿರುವುದು ಬೆಳಕಿಗೆ ಬಂದಿದೆ. ದಿಢೀರನೆ ಶ್ರೀಮಂತರಾಗುವ ಆಸೆ ಹೊಂದಿದ್ದ ದಂಪತಿ(ಭಗವಲ್‌ ಸಿಂಗ್‌ ಮತ್ತು ಲೈಲಾ) ಮನೆಯಲ್ಲಿ ಈ ನರಬಲಿಗಳು ನಡೆದಿವೆ. ಇಬ್ಬರು ಮಹಿಳೆಯರನ್ನು ಮನೆಗೆ ಕರೆತಂದಿದ್ದ ಮೊಹಮ್ಮದ್‌ ಶಫಿ ಎಂಬಾತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.

ನರಬಲಿ ಹತರಾದ ಇಬ್ಬರು ಮಹಿಳೆಯರು ಲಾಟರಿ ಟಿಕೆಟ್‌ ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆಂದು ವರದಿಯಾಗಿದೆ. ಅವರಿಗೆ ಅಶ್ಲೀಲ ಚಿತ್ರದಲ್ಲಿ ನಟಿಸುವ ಮತ್ತು ಲಕ್ಷಾಂತರ ಹಣ ನೀಡುವ ಭರವಸೆಯನ್ನು ಶಫಿ ನೀಡಿದ್ದ. ಆ ಹಿನ್ನೆಲೆಯಲ್ಲಿ ಭಗವಲ್‌ ಸಿಂಗ್‌ ದಂಪತಿ ಮನೆಗೆ ಇಬ್ಬರನ್ನು ಕರೆತಂದಿದ್ದ. ಅಲ್ಲಿ ಅವರಿಗೆ ಚಿತ್ರಹಿಂಸೆ ನೀಡಿ ಹತ್ಯೆಮಾಡಲಾಗಿತ್ತು. ಅವರ ದೇಹದ ಮಾಂಸವನ್ನು ಬೇಯಿಸಿ ತಿನ್ನಲಾಗಿದೆ ಎಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದರು.

ನರಬಲಿ ಘಟನೆ ಕುರಿತು ವರದಿ ನೀಡಿ: ಕೇರಳ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನರಬಲಿ ಘಟನೆ ಕುರಿತು ವರದಿ ನೀಡಿ: ಕೇರಳ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ

ನರಬಲಿಗೆ ಒಳಗಾದ ರೋಸಲಿನ್‌ ಹಾಗೂ ಪದ್ಮಾರ ನಿಜವಾದ ಹಿನ್ನೆಲೆಯ ಬಗ್ಗೆ ಸುದ್ದಿಸಂಸ್ಥೆ 'ಪಿಟಿಐ' ವರದಿ ಮಾಡಿದೆ.

Kerala human sacrifice case details about victims children and police given information

ಸಜೀಶ್‌ನೊಂದಿಗೆ ಸಹಜೀವನ ನಡೆಸುತ್ತಿದ್ದ ರೋಸಲಿನ್‌

ಮೊದಲು ಹತ್ಯೆಗೀಡಾದ ರೋಸಲಿನ್‌ ಲಾಟರಿ ಟಿಕೆಟ್‌ ಮಾರುತ್ತಿದ್ದರು ಎಂದು ತಿಳಿದುಬಂದಿದೆ. ಆಕೆ 49 ವರ್ಷದವರು. ಅಶ್ಲೀಲ ಚಿತ್ರದಲ್ಲಿ ನಟಿಸುವ ನೆಪ ಒಡ್ಡಿ ಆಕೆಯನ್ನು ಮನೆ ಕರೆದುಕೊಂಡು ಬರಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.

ಆದರೆ, ರೋಸಲಿನ್‌ ಮಗಳು ಮಂಜು ಹೇಳುವ ಪ್ರಕಾರ, ಆಕೆಯ ತಾಯಿ ರೋಸಲಿನ್‌ ಜೀವನೋಪಾಯಕ್ಕಾಗಿ ಮನೆ-ಮನೆಗೆ ತೆರಳಿ ಆರೋಗ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಆರೋಪಿ ಶಫಿ ನೀಡಿರುವ ಹೇಳಿಕೆ ಪ್ರಕಾರ, ಆಕೆ ವೇಶ್ಯಾವಟಿಕೆಯಲ್ಲಿ ತೊಡಗಿದ್ದರು. ವಯಸ್ಕರ ಚಿತ್ರದಲ್ಲಿ ನಟಿಸುವಂತೆ ಆಕೆಯನ್ನು ಒಪ್ಪಿಸಲಾಗಿತ್ತು.

ಕೇರಳದ ಪತ್ತನಂತಿಟ್ಟನಲ್ಲಿ ಜೂನ್‌ 8ರಂದು ರೋಸಲಿನ್‌ ನಾಪತ್ತೆಯಾಗಿದ್ದರು. ಸಜೀಶ್‌ ಎಂಬ ವ್ಯಕ್ತಿಯೊಂದಿಗೆ ಕಳೆದ ವರ್ಷಗಳಿಂದ ಸಹಜೀವನ ನಡೆಸುತ್ತಿದ್ದ, ಆಕೆ ಪತ್ತಿನಂತಿಟ್ಟನ ಹಲವು ಜಾಗಗಳಲ್ಲಿ ನೆಲಸಿದ್ದರೆಂದು ಮಂಜು ತಿಳಿಸಿದ್ದಾರೆ.

ರೋಸಲಿನ್‌ ಮೂಲತಃ ಇಡುಕ್ಕಿ ಜಿಲ್ಲೆಯ ಕಟ್ಟಪನದವರು. ಸುಮಾರು 20 ವರ್ಷಗಳ ಹಿಂದೆ ತನ್ನ ಪತಿಯನ್ನು ತೊರೆದಿದ್ದರು. ತಮ್ಮ ಇಬ್ಬರು ಮಕ್ಕಳೊಂದಿಗೆ ಪತ್ತನಂತಿಟ್ಟಗೆ ಬಂದು ನೆಲೆಸಿದ್ದರು.

'ನನ್ನ ತಾಯಿಯ ಮೇಲೆ ಸಜೀಶ್‌ ಹಲ್ಲೆ ನಡೆಸುತ್ತಿದ್ದ. ಆಕೆಯ ಆಭರಣಗಳು ಸಜೀಶ್‌ ಬಳಿ ಇದ್ದವು. ಕೆಲ ಆಭರಣಗಳನ್ನು ಆತ ಗಿರವಿ ಇಟ್ಟಿದ್ದಾನೆ. ಇನ್ನುಳಿದ ಆಭರಣಗಳನ್ನು ಪೊಲೀಸರು ನಮಗೆ ಕೊಡಿಸಿದ್ದಾರೆ' ಎಂದು ಮಂಜು ತಿಳಿಸಿದ್ದಾರೆ. ಆದರೆ, ಪೊಲೀಸರ ಹೇಳಿಕೆ ಪ್ರಕಾರ, 'ರೋಸಲಿನ್‌ ಹಾಗೂ ಸಜೀಶ್‌ ಆರು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದಾರೆ. ಅವರು ಆ ಪ್ರದೇಶದ ಅನೇಕ ಮನೆಗಳಲ್ಲಿ ವಾಸವಾಗಿದ್ದರು. ಅವರ ಬಗ್ಗೆ ನೆರೆಹೊರೆಯವರು ಯಾವುದೇ ಕೆಟ್ಟ ಅಭಿಪ್ರಾಯವನ್ನು ಹಂಚಿಕೊಂಡಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

ಸಜೀಶ್ ದಿನಗೂಲಿ ನೌಕರನಾಗಿದ್ದು, ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದ. ರೋಸ್ಲಿನ್ ಪುತ್ರಿ ಆರೋಪಿಸಿದಂತೆ ಸಜೀಶ್ ವಿರುದ್ಧ ಯಾವುದೇ ಹಲ್ಲೆ ನಡೆಸಿದ ದೂರುಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಟರಿ ಟಿಕೆಟ್‌ ಮಾರುತ್ತಿದ್ದ ಪದ್ಮಾ ತಮಿಳುನಾಡಿನವರು

ಕೊಚ್ಚಿಯಲ್ಲಿ ಲಾಟರಿ ಟಿಕೆಟ್‌ ಮಾರುತ್ತಿದ್ದ ಪದ್ಮಾರಿಗೆ 42 ವರ್ಷವಾಗಿತ್ತು. ಆಕೆಯ ಕುಟುಂಬದವರು ತಮಿಳುನಾಡಿನ ಧರ್ಮಪುರಿಯಲ್ಲಿ ನೆಲಸಿದ್ದಾರೆ. ಪದ್ಮಾ ಕಾಣೆಯಾದ ಒಂದು ದಿನ ಬಳಿಕ ಆಕೆಯ ಕುಟುಂಬ ಕೊಚ್ಚಿಗೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ.

ಪಿಟಿಐಗೆ ಪ್ರತಿಕ್ರಿಯಿಸಿರುವ ಪದ್ಮಾರ ಕಿರಿಯ ಪುತ್ರ, 'ನಾನು ಚೆನ್ನೈನಲ್ಲಿ ನೌಕರಿ ಮಾಡುತ್ತಿದ್ದೇನೆ. ನಮ್ಮ ತಾಯಿ ಕಾಣೆಯಾದ ಮರುದಿನ ಇಲ್ಲಿಗೆ ಬಂದಿದ್ದೇನೆ. ಸೆಪ್ಟೆಂಬರ್‌ 27ರಿಂದ ಪ್ರತಿದಿನ ಪೊಲೀಸ್‌ ಠಾಣೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದೇವೆ' ಎಂದು ತಿಳಿಸಿದ್ದಾನೆ.

ಪದ್ಮಾ ಅವರ ಹಿರಿಯ ಮಗ ಸೇತು ಶಾಲಾ ಶಿಕ್ಷಕನಾಗಲು ಸಿದ್ಧತೆ ನಡೆಸುತ್ತಿದ್ದಾನೆ. ಆತ ಧರ್ಮಪುರಿಯಲ್ಲಿ ನೆಲೆಸಿದ್ದಾನೆ. ತಮ್ಮ ತಾಯಿಯ ಮೃತದೇಹವನ್ನು ತಮಗೆ ನೀಡುವಂತೆ ಕೋರಿ ಪದ್ಮಾರ ಇಬ್ಬರು ಮಕ್ಕಳು ಕೇರಳ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಅವುಗಳ ಡಿಎನ್‌ಎ ಪರೀಕ್ಷೆ ನಡೆಸಿದ ನಂತರವೇ ಸಂಬಂಧಿಗಳಿಗೆ ದೇಹವನ್ನು ಹಸ್ತಾಂತರ ಮಾಡಲಾಗುವುದು ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

English summary
Kerala human sacrifice case Children of Victims and police given details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X