ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ ನೌಕರರ ವೇತನ ಯೋಜನೆ ರೂಪಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ

|
Google Oneindia Kannada News

ತಿರುವನಂತಪುರಂ, ನವೆಂಬರ್‌ 11: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಉದ್ಯೋಗಿಗಳ ಭವಿಷ್ಯದ ವೇತನ ಪಾವತಿಗೆ ಯೋಜನೆಯನ್ನು ರೂಪಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೆಎಸ್‌ಆರ್‌ಟಿಸಿ ನೌಕರರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಗೆ ಯೋಜನೆ ರೂಪಿಸುವಂತೆ ಕೆಎಸ್‌ಆರ್‌ಟಿಸಿ ಮತ್ತು ಅದರ ಎಂಡಿಗೆ ನಿರ್ದೇಶನ ನೀಡುವಂತೆ ಕೋರಿ ಕೆಎಸ್‌ಆರ್‌ಟಿಸಿ ನೌಕರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯದಿಂದ ಈ ನಿರ್ದೇಶನ ಬಂದಿದೆ. ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಏಕ ಪೀಠವು ತಮ್ಮ ಆದೇಶದಲ್ಲಿ "ಕೆಎಸ್ಆಆರ್‌ಟಿಸಿಯು ತನ್ನ ಸಾಲದ ಪೂರ್ವ ಬದ್ಧತೆಗಳನ್ನು ಸರಿಯಾಗಿ ಇತ್ಯರ್ಥಪಡಿಸುವವರೆಗೆ ಅವರು ಸ್ವಾವಲಂಬಿಯಾಗುವ ಸಾಧ್ಯತೆಗಳು ದೂರವಿದೆ'' ಎಂದು ತಿಳಿಸಿದರು.

ಕುಲಪತಿ ಹುದ್ದೆಯಿಂದ ಗವರ್ನರ್‌ ಕೆಳಗಿಳಿಸಿದ ಕೇರಳ ಸರ್ಕಾರಕುಲಪತಿ ಹುದ್ದೆಯಿಂದ ಗವರ್ನರ್‌ ಕೆಳಗಿಳಿಸಿದ ಕೇರಳ ಸರ್ಕಾರ

ನವೆಂಬರ್ 24 ರಂದು ಮತ್ತೆ ಪ್ರಕರಣವನ್ನು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ತನ್ನ ಉದ್ಯೋಗಿಗಳಿಗೆ ಪ್ರತಿ ತಿಂಗಳ 5ನೇ ತಾರೀಖಿನಂದು ಕಡ್ಡಾಯ ವೇತನ ನೀಡುವಂತೆ ಕೇರಳ ಹೈಕೋರ್ಟ್ (ಎಚ್‌ಸಿ) ಮಧ್ಯಂತರ ಆದೇಶ ಹೊರಡಿಸಿತ್ತು. ಇದನ್ನು ಮುಂದುವರೆಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆಯೂ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶಣ ನೀಡಿತ್ತು.

Kerala High Court directed to formulate salary scheme for KSRTC employees

ಈ ತಿಂಗಳ ವೇತನವನ್ನು 5ರೊಳಗೆ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿ ಕೆಎಸ್‌ಆರ್‌ಟಿಸಿಯಲ್ಲಿ ಉನ್ನತ ಮಟ್ಟದ ಲೆಕ್ಕಪರಿಶೋಧನೆ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿತ್ತು. ಅದಕ್ಕೆ ಕೆಎಸ್‌ಆರ್‌ಟಿಸಿಯು ನ್ಯಾಯಲಕ್ಕೆ ದಿನಕ್ಕೆ ಕನಿಷ್ಠ 8 ಕೋಟಿ ಆದಾಯ ಗಳಿಸಿದರೆ ಕೆಲಸಗಳು ಸುಸೂತ್ರವಾಗಿ ನಡೆಯಲಿವೆ ಎಂದು ತಿಳಿಸಿತ್ತು. ತಮಗೆ ಕೂಡಲೇ ವೇತನ ನೀಡುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ನೌಕರರು ಸಲ್ಲಿಸಿದ ಅರ್ಜಿಯ ಮೇರೆಗೆ ಕೋರ್ಟ್‌ ಕ್ರಮಕ್ಕೆ ಸೂಚನೆ ನೀಡಿತ್ತು.

English summary
The Kerala High Court has directed the state government to formulate a plan for the future payment of salaries of the employees of the Kerala State Road Transport Corporation (KSRTC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X