ಸೋಲಾರ್ ಹಗರಣ: ಶಾಕ್ ನಿಂದ ಕೇರಳ ಸಿಎಂಗೆ ರಿಲೀಫ್

Posted By:
Subscribe to Oneindia Kannada

ಕೊಚ್ಚಿ, ಜ. 29: ಸೋಲಾರ್ ಹಗರಣದ ಶಾಕಿಗೆ ಒಳಗಾಗಿದ್ದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಬಹುಕೋಟಿ ಸೌರಶಕ್ತಿ ಯೋಜನೆಯ ಲಂಚ ಪ್ರಕರಣದಲ್ಲಿ ಚಾಂಡಿ ವಿರುದ್ಧ ಎಫ್ ಐಆರ್ ದಾಖಲಿಸದಂತೆ ಕೇರಳ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಇದರಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಎಲ್ ಡಿಎಫ್ ಸೇರಿದಂತೆ ಅನೇಕ ಪಕ್ಷಗಳು ಚಾಂಡಿ ಸರ್ಕಾರದ ನಂತರ ಪ್ರತಿಭಟನೆ ಮುಂದುವರೆಸಿವೆ.['ಸೋಲಾರ್' ಸರಿತಾ ಆಡಿಯೋದಲ್ಲಿ ಏನಿದೆ?]

ಸರಿತಾ ನಾಯರ್ ಅವರು ನ್ಯಾಯಾಂಗ ಸಮಿತಿ ಮುಂದೆ ಹಾಜರಾಗುವುದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜತೆ ಮಾತನಾಡಿದ್ದ ಆಡಿಯೋ ಸೋರಿಕೆಯಾಗಿತ್ತು. ಇದಕ್ಕೂ ಮುನ್ನ ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು. [ಸೋಲಾರ್ ಹಗರಣ: ಸೆಕ್ಸ್ ಆಫರ್ ಬದಲಿಗೆ ಕೋಟಿ ರು ಲಂಚ?]

Kerala HC puts on hold FIR against Oommen Chandy

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ತ್ರಿಶೂರಿನ ವಿಜಿಲೆನ್ಸ್ ಕೋರ್ಟ್, ಉಮ್ಮನ್ ಚಾಂಡಿ ಹಾಗೂ ಇಂಧನ ಸಚಿವ ಮೊಹಮ್ಮದ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಈ ಆದೇಶಕ್ಕೆ ಹೈಕೋರ್ಟ್ ಎರಡು ತಿಂಗಳ ಕಾಲ ತಡೆ ನೀಡಿದೆ.

ಕೇರಳ ಸಿಎಂ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯ ಆರ್ಯದಾನ್ ಮೊಹಮ್ಮದ್ ಅವರು 1.90 ಕೋಟಿ ರು ಲಂಚ ಕೇಳಿದ್ದರು. ಲಂಚದ ಮೊತ್ತ ಪಾವತಿಸಿದ ಮೇಲೆ ಬಹುಕೋಟಿ ಸೋಲಾರ್ ಯೋಜನೆಯನ್ನು ವಹಿಸಲಾಯಿತು. ಇದಲ್ಲದೆ ಇಂಧನ ಸಚಿವ ಅರ್ಯದಾನ್ ಮೊಹಮ್ಮದ್ ಅವರ ಪಿಎಗೂ 40 ಲಕ್ಷ ರು ಲಂಚ ನೀಡಲಾಗಿದೆ ಎಂದು ಸರಿತಾ ಹೇಳಿದ್ದಾರೆ. [ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು]

ಚಾಂಡಿ ಅವರ ಮಾಜಿ ಪಿಎ ಜಿಕುಮೊನ್ ಅವರಿಂದ 7 ಕೋಟಿ ರು ಲಂಚ ಬೇಡಿಕೆ ಬಂದಿತ್ತು. ಈ ಮೊತ್ತವನ್ನು ಚಾಂಡಿ ಅವರ ಅನಧಿಕೃತ ಸಾಥಿ ದೆಹಲಿ ನಿವಾಸಿ ಕುರುವಿಲ್ಲ ಎಂಬುವವರಿಗೆ ನೀಡಬೇಕಿತ್ತು ಎಂದಿದ್ದರು.

ಈ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಪಿಡಿ ಥಾಮಸ್ ಎಂಬುವರು ತ್ರಿಶೂರಿನ ಕೋರ್ಟಿನಲ್ಲಿ ಕೇರಳ ಸಿಎಂ ಚಾಂಡಿ ಹಾಗೂ ಅವರ ಸಹದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala's ruling Congress-led UDF government and Chief Minister Oommen Chandy on Friday(Jan.29) got a reprieve when the Kerala High Court put on hold a lower court order for registering an FIR against him and his cabinet colleague in solar panel scam case.
Please Wait while comments are loading...