ಕೇರಳ ಈಗ ಸಂಪೂರ್ಣ ಬಯಲು ಶೌಚ ಮುಕ್ತ ರಾಜ್ಯ

Posted By:
Subscribe to Oneindia Kannada

ತಿರುವನಂತಪುರಂ, ನವೆಂಬರ್ 02: ನವೆಂಬರ್ 1ರ ರಾಜ್ಯೋತ್ಸವದ ಸಂಭ್ರಮದಲ್ಲಿ ಕೇರಳ ಸಂಪೂರ್ಣವಾಗಿ ಬಯಲು ಶೌಚ ಮುಕ್ತ ರಾಜ್ಯವಾಗಿದೆ ಎಂದು ಸಿಪಿಐಎಂ ನೇತೃತ್ವದ ಎಲ್ ಡಿಎಫ್ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಈ ಕುರಿತಂತೆ ಟ್ವಿಟ್ಟರ್ ಮೂಲಕ ಜನತೆಗೆ ಶುಭಕೋರಿದ್ದಾರೆ.

ಸ್ವಚ್ಛ ಭಾರತ ಯೋಜನೆ ಸಾಕಾರಗೊಂಡಿರುವುದನ್ನು ಪ್ರಧಾನಿ ಮೋದಿ ಅವರು ಕಣ್ಣಾರೆ ಕಾಣಲಿ ಎಂಬ ಆಶಯ ಹೊಂದಿದ್ದ ವಿಜಯನ್ ಅವರಿಗೆ ನಿರಾಶೆಯಾಗಿದೆ. ಪ್ರಧಾನಿ ಅವರು ಹರ್ಯಾಣ ರಾಜ್ಯ ಸಂಸ್ಥಾಪನಾ ವಜ್ರ ಮಹೋತ್ಸವ ದಿನಾಚರಣೆಯಲ್ಲಿ ತೊಡಗಿಕೊಂಡಿದ್ದರು.

Kerala becomes open defection free state

ಕೇರಳದಲ್ಲಿರುವ 941 ಗ್ರಾಮ ಪಂಚಾಯಿತಿಗಳಲ್ಲಿ 1.90 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ರಾಜ್ಯದ ನೋಡಲ್ ಸಂಸ್ಥೆಯಾದ ಶುಚಿತ್ವ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಕೇರಳವನ್ನು ಸಂಪೂರ್ಣ ಪರಿಸರ ಮಾಲಿನ್ಯ ಮುಕ್ತ, ಕಸಮುಕ್ತ ರಾಜ್ಯ ಮಾಡಲು ಮುಂದಾಗಿದ್ದು, ಶೇ 35ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಕೇರಳ ನಂತರ ಈ ಸಾಲಿಗೆ ಗುಜರಾತ್, ಹರ್ಯಾಣ ಹಾಗೂ ಉತ್ತರಾಖಂಡ್ ರಾಜ್ಯಗಳು ಶೀಘ್ರದಲ್ಲೇ ಸೇರಲು ಮುಂದಾಗಿವೆ. ಸ್ವಚ್ಛಭಾರತ ಹಾಗೂ ಬಯಲು ಶೌಚ ಮುಕ್ತ ರಾಜ್ಯಗಳಾಗಿ ಪರಿವರ್ತನೆಗೊಂಡಿವೆ ಎಂದು ಮಾಹಿತಿ ಸಿಕ್ಕಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kerala has become the third Open Defecation Free (ODF) state in the country. The announcement was made on the state's foundation day today(November 01).
Please Wait while comments are loading...