ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.1ರಂದು ಬಯಲು ಶೌಚ ಮುಕ್ತ ರಾಜ್ಯಕ್ಕೆ ಮೋದಿ

By Mahesh
|
Google Oneindia Kannada News

ತಿರುವನಂತಪುರಂ, ಆಗಸ್ಟ್ 26: ನವೆಂಬರ್ 1 ರಿಂದ ಕೇರಳ ಸಂಪೂರ್ಣ ಬಯಲು ಮುಕ್ತ ರಾಜ್ಯವಾಗಲಿದೆ ಎಂದು ಸಿಪಿಐಎಂ ನೇತೃತ್ವದ ಎಲ್ ಡಿಎಫ್ ಸರ್ಕಾರ ಘೋಷಿಸಿದೆ. ಈ ಶುಭ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಸ್ವಚ್ಛ ಭಾರತ ಯೋಜನೆ ಸಾಕಾರಗೊಂಡಿರುವುದನ್ನು ಪ್ರಧಾನಿ ಮೋದಿ ಅವರು ಕಣ್ಣಾರೆ ಕಾಣಲಿ ಎಂಬುದು ಎಂಬ ಆಶಯ ಎಂದು ವಿಜಯನ್ ಹೇಳಿದ್ದಾರೆ.

Kerala to be declared open defecation-free state on November 1

ಕೇರಳದಲ್ಲಿರುವ 941ಗ್ರಾಮ ಪಂಚಾಯಿತಿಗಳಲ್ಲಿ 1.90 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ರಾಜ್ಯದ ನೋಡಲ್ ಸಂಸ್ಥೆಯಾದ ಶುಚಿತ್ವ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.

ಕೇರಳವನ್ನು ಸಂಪೂರ್ಣ ಪರಿಸರ ಮಾಲಿನ್ಯ ಮುಕ್ತ, ಕಸಮುಕ್ತ ರಾಜ್ಯ ಮಾಡಲು ಮುಂದಾಗಿದ್ದು, ಶೇ 35ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ವಿವರಿಸಿದರು.

English summary
Kerala will be declared as open defecation-free state on its formation day on November 1 with the CPIM-led LDF government planning to invite Prime Minister Narendra Modi to attend a function in Thiruvananthapuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X