ಅಪ್ರಾಪ್ತೆ ಮೇಲೆ ದೌರ್ಜನ್ಯ: ಸ್ಪೀಕರ್ ವಿರುದ್ಧ ಭಾರೀ ಪ್ರತಿಭಟನೆಗೆ ಸಾಕ್ಷಿಯಾದ ಕೇರಳ ವಿಧಾನಸಭೆ
ಯುಡಿಎಫ್ ಶಾಸಕರಾದ ಎಂ ವಿನ್ಸೆಂಟ್, ಸಾಜಿ ಜೋಸೆಫ್, ಎ ಕೆ ಎಂ ಅಶ್ರಫ್ ಅವರನ್ನು ಬಲವಂತವಾಗಿ ಇಬ್ಬರು ಅಥವಾ ಮೂವರು ಭದ್ರತಾ ಸಿಬ್ಬಂದಿ ಸೇರಿ ಹೊತ್ತುಕೊಂಡು ಹೋಗಿದ್ದಾರೆ.
ತಿರುವನಂತಪುರಂ, ಮಾರ್ಚ್ 15: ಯುಡಿಎಫ್ ಮಂಡಿಸಿದ ಮತ್ತೊಂದು ಮುಂದೂಡಿಕೆ ನಿರ್ಣಯವನ್ನು ಸಂಪೂರ್ಣವಾಗಿ ನಿರಾಕರಿಸಿದ ಕೇರಳ ವಿಧಾನಸಭೆ ಸ್ಪೀಕರ್ ಎ ಎನ್ ಷಂಷೀರ್ ಅವರ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗಿದೆ. ಬುಧವಾರ ವಿಧಾನಸಭೆ ಸಭಾಂಗಣದ ಹೊರಗೆ ಮತ್ತು ಸ್ಪೀಕರ್ ಕಚೇರಿಯ ಮುಂದೆ ಹಿಂದೆಂದೂ ನಡೆಯದ ಹಿಂಸಾಚಾರದ ದೃಶ್ಯಗಳಿಗೆ ಕಂಡು ಬಂದಿವೆ.
16 വയസ്സുള്ള ഒരു പെൺകുട്ടി പൊതുസ്ഥലത്ത് ക്രൂരമായി അക്രമിക്കപ്പെട്ട വിഷയം ചർച്ച ചെയ്യാൻ പറ്റില്ലെങ്കിൽ പിന്നെന്തിനാണ് ഈ സഭ? ഇന്ന് സിപിഎം അംഗങ്ങളും സുരക്ഷാ ജീവനക്കാരും പ്രതിപക്ഷത്തെ വനിതാ അംഗങ്ങളോട് പെരുമാറിയ രീതി കണ്ട് ചോദിച്ചുപോകുന്നതാണ്:
— Congress Kerala (@INCKerala) March 15, 2023
ഷംസീർ നിയന്ത്രിക്കുന്ന ഈ സഭ കൗരവ സഭയാണോ? pic.twitter.com/CyZcQlehA0
ತಿರುವನಂತಪುರಂನ ಚೆಂಕೋಟ್ಟುಕೋಣಂನಲ್ಲಿ 16 ವರ್ಷದ ಶಾಲಾ ಬಾಲಕಿಯ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ವಿಷಯವನ್ನು ಮುಂದೂಡಿ, ಸದನಸಲದಲಿ ಅಂಗೀಕಾರಕ್ಕೆ ನಿರಾಕರಿಸಿದ್ದಕ್ಕೆ ಶಾಸಕರು ಸದನದಲ್ಲಿಯೂ ಧರಣಿ ನಡೆಸಿದ್ದು, ಬಳಿಕ ಸ್ಪೀಕರ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಸ್ಪೀಕರ್ ಕಚೇರಿ ಎದುರು ಜಮಾಯಿಸಿದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಶಾಸಕರನ್ನು ಭದ್ರತಾ ಸಿಬ್ಬಂದಿ ಹೊರಹಾಕಿಲು ಯತ್ನಿಸಿದ್ದಾರೆ. ಸ್ಪೀಕರ್ ಎ ಎನ್ ಷಂಷೀರ್ ತಮ್ಮ ಕಚೇರಿಗೆ ಹೋಗುವುದನ್ನು ತಡೆಯಲು ಯುಡಿಎಫ್ ಸದಸ್ಯರು ಯೋಜಿಸಿದ್ದರು. ದಿನದ ಕಲಾಪವನ್ನು ತ್ವರಿತವಾಗಿ ಮುಗಿಸಿ ಸ್ಪೀಕರ್ ಹೊರಗೆ ಬಂದಾಗ ಅವರ ಮಾರ್ಗವನ್ನು ತಡೆಯುವ ಕೆಲಸ ಮಾಡಿದ್ದಾರೆ. ಇದು ಭಾರೀ ಜಟಾಪಟಿಗೆ ಕಾರಣವಾಗಿದೆ.
ಸ್ಪೀಕರ್ ಅವರ ಕಚೇರಿಯತ್ತ ತೆರಳಿ ಘೋಷಣೆಗಳನ್ನು ಕೂಗಿದ ಯುಡಿಎಫ್ ಶಾಸಕರು, ಸ್ಪೀಕರ್ ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎನ್ನುವ ಬ್ಯಾನರ್‌ಗಳನ್ನೂ ಪ್ರದರ್ಶಿಸಿದ್ದಾರೆ. ಸ್ಪೀಕರ್ ಕಚೇರಿಯ ಮುಂದೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಮತ್ತುಭದ್ರತಾ ಸಿಬ್ಬಂದಿ ನಡುವೆ ಭಾರೀ ಗದ್ದಲ ನಡೆದಿದೆ. ಸುದೀರ್ಘ ಹೋರಾಟದ ನಂತರ, ಭದ್ರತಾ ಸಿಬ್ಬಂದಿ ಮತ್ತು ಯುವ ಎಲ್‌ಡಿಎಫ್ ಶಾಸಕರ ಸಹಾಯದಿಂದ ಸ್ಪೀಕರ್ ತಮ್ಮ ಕಚೇರಿಗೆ ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ಯುಡಿಎಫ್ ಶಾಸಕರಾದ ಎಂ ವಿನ್ಸೆಂಟ್, ಸಾಜಿ ಜೋಸೆಫ್, ಎ ಕೆ ಎಂ ಅಶ್ರಫ್ ಅವರನ್ನು ಬಲವಂತವಾಗಿ ಇಬ್ಬರು ಅಥವಾ ಮೂವರು ಭದ್ರತಾ ಸಿಬ್ಬಂದಿ ಸೇರಿ ಹೊತ್ತುಕೊಂಡು ಹೋಗಿದ್ದಾರೆ. ಸಣ್ಣ ಇಕ್ಕಟ್ಟಾದ ಜಾಗದಲ್ಲಿ ಘರ್ಣಣೆ ನಡೆದಿದ್ದು, ಕಾಂಗ್ರೆಸ್ ಶಾಸಕ ಸನೀಶ್ ಕುಮಾರ್ ಜೋಸೆಫ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಮಹಡಿಯಲ್ಲಿರುವ ವೈದ್ಯರ ಕ್ಯಾಬಿನ್‌ಗೆ ತ್ವರಿತವಾಗಿ ಸಾಗಿಸಲಾಗಿದೆ. ಆದರೆ, ವೈದ್ಯರು ಅಲ್ಲಿ ಇಲ್ಲದ ಕಾರಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿರುವನಂತಪುರಂನ ಚೆಂಕೋಟ್ಟುಕೋಣಂನಲ್ಲಿ 16 ವರ್ಷದ ಶಾಲಾ ಬಾಲಕಿಯ ಮೇಲೆ ನಡೆದ ದೌರ್ಜನ್ಯದ ವಿಷಯದಲ್ಲಿ ಉಮಾ ಥಾಮಸ್ ಅವರು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದ್ದಾರೆ. ಆದರೆ, ಈ ವಿಷಯವು ತಕ್ಷಣ ಪ್ರಸ್ತುತತೆಯನ್ನು ಹೊಂದಿಲ್ಲ ಎಂದು ಸ್ಪೀಕರ್ ಹೇಳಿ, ಉಮಾ ಅವರಿಗೆ ಪ್ರಸ್ತಾವನೆಯನ್ನು ಮಂಡಿಸಲು ಅನುಮತಿ ನಿರಾಕರಿಸಿದರು ಇಲ್ಲಿಮದ ಘರ್ಷಣೆ ಆರಂಭವಾಗಿದೆ.
ಈ ವೇಳೆ ಸಭಾಧ್ಯಕ್ಷರು ವಿರೋಧ ಪಕ್ಷದವರ ವಿರುದ್ಧ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಪ್ರತಿಪಕ್ಷ ನಾಯಕ ವಿ ಡಿ ಸತೀಶನ್ ಸಭಾತ್ಯಾಗ ಮಾಡಿದ್ದಾರೆ. ವಿರೋಧ ಪಕ್ಷದ ಸದಸ್ಯರು ಘೋಷಣೆ ಕೂಗುತ್ತಾ ಹೊರನಡೆದರು. ಈ ವೇಳೆ ಕಾಂಗ್ರೆಸ್ ಶಾಸಕ ರೋಜಿ ಎಂ ಜಾನ್ ಅವರು ಸಭಾಧ್ಯಕ್ಷರ ವೇದಿಕೆ ಏರಿದ್ದು, ಅವರ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಬೆನ್ನುಮೂಳೆ ತೋರಿಸಿ ಪಿಣರಾಯಿ (ಮುಖ್ಯಮಂತ್ರಿ ಪಿಣರಾಯಿ ವಿಜಯನ್) ಗುಲಾಮರಾಗಬೇಡಿ ಎಂದು ಸಭಾಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.
ಯುಡಿಎಫ್ ಶಾಸಕರು ಸಾಭಾತ್ಯಾಗ ಮಾಡಿದ ನಂತರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬ್ರಹ್ಮಪುರಂ ಬೆಂಕಿಯ ಕುರಿತು ತಮ್ಮ ನಿರ್ಣಯವನ್ನು ಪ್ರಸ್ತುತಪಡಿಸಿದ್ದಾರೆ. ಕೊಚ್ಚಿ ತ್ಯಾಜ್ಯ ಡಂಪ್ ಯಾರ್ಡ್‌ಗೆ ಬೆಂಕಿ ತಗುಲಿರುವ ಬಗ್ಗೆ ತನಿಖೆ ನಡೆಸಲು ವೈಜ್ಞಾನಿಕ ತಜ್ಞರನ್ನು ಒಳಗೊಂಡ ವಿಶೇಷ ಮೂರು ಹಂತದ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಕೊಚ್ಚಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ತಗುಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ಕುರಿತು ರಾಜ್ಯ ಪೊಲೀಸ್ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದೆ. ಬೆಂಕಿಯ ಕಾರಣ ಮತ್ತು ಸ್ಥಾವರ ಪ್ರಾರಂಭವಾದ ಸಮಯದಿಂದ ಅದರ ಕಾರ್ಯವೈಖರಿಯ ಬಗ್ಗೆ ವಿಜಿಲೆನ್ಸ್ ವಿಚಾರಣೆಯನ್ನು ಸಹ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications