ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಪ್ರವಾಸಿ ಬಸ್ ಕಂದಕಕ್ಕೆ ಬಿದ್ದು ಒಬ್ಬ ವಿದ್ಯಾರ್ಥಿ ಸಾವು, 43 ಗಾಯಾಳು

|
Google Oneindia Kannada News

ತಿರುವನಂತಪುರ, ಜ. 01: ಕೇರಳ ಜಿಲ್ಲೆಯ ಆದಿಮಾಲಿ ಪ್ರದೇಶದಲ್ಲಿ ಭಾನುವಾರ ಪ್ರವಾಸಿ ಬಸ್ಸೊಂದು ರಸ್ತೆಯಿಂದ ಸುಮಾರು 100 ಅಡಿ ಕೆಳಗಿನ ಏಲಕ್ಕಿ ತೋಟಕ್ಕೆ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, 40 ವಿದ್ಯಾರ್ಥಿಗಳು ಸೇರಿದಂತೆ 43 ಮಂದಿ ಗಾಯಗೊಂಡಿದ್ದಾರೆ.

ಡಿಸೆಂಬರ್ 29 ರಂದು ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ತಮಿಳುನಾಡಿನ ಗಿರಿಧಾಮವಾದ ಕೊಡೈಕೆನಾಲ್‌ನಿಂದ ಬಸ್ ವಾಪಸ್ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವೆಲ್ಲತೂವಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ವರ್ಷ 2023: ನಿಯಂತ್ರಣ ತಪ್ಪಿದ ಆಚರಣೆ ಬೆಂಗಳೂರಿನಲ್ಲಿ ಲಾಠಿ ಚಾರ್ಜ್ಹೊಸ ವರ್ಷ 2023: ನಿಯಂತ್ರಣ ತಪ್ಪಿದ ಆಚರಣೆ ಬೆಂಗಳೂರಿನಲ್ಲಿ ಲಾಠಿ ಚಾರ್ಜ್

ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ದಟ್ಟ ಮಂಜಿನಿಂದಾಗಿ ಬಸ್‌ ನಿಯಂತ್ರಣ ತಪ್ಪಿ 100 ಅಡಿ ಆಳದ ಕಮರಿಗೆ ಉರುಳಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಜನರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯಿಂದಾಗಿ ಅನೇಕ ಜೀವಗಳು ಉಳಿದಿವೆ ಎಂದು ಪೊಲೀಸರು ಹೇಳಿದ್ದಾರೆ.

Kerala accident: 1 student dead, 43 injured in road accident

ಗಾಯಗೊಂಡವರಲ್ಲಿ 10 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮಿಳುನಾಡಿನ ಕೊಡೈಕೆನಾಲ್ ಮತ್ತು ಇಡುಕ್ಕಿಯ ಮುನ್ನಾರ್‌ನಲ್ಲಿ ಮೂರು ದಿನಗಳ ವಿಹಾರ ಮುಗಿಸಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದಾಗ ಒಬ್ಬ ವಿದ್ಯಾರ್ಥಿ ಕಾನೆಯಾಗಿದ್ದಾರೆ ಎಮದು ತಿಳಿದು ಬಂದಿದೆ. ತಕ್ಷಣ ರಕ್ಷಣಾ ಪಡೆ ಅಪಘಾತದ ಸ್ಥಳಕ್ಕೆ ಹಿಂತಿರುಗಿ ಹುಡುಕಿದಾಗ ವಿದ್ಯಾರ್ಥಿ ಎಂ ಮಿಲ್ಹಾಜ್ ಅವರ ಮೃತದೇಹ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಭೇಟಿ ಮಾಡಿದ ನಂತರ ರಾಜ್ಯ ನೀರಾವರಿ ಸಚಿವ ರೋಶಿ ಆಗಸ್ಟಿನ್, "ಎಲ್ಲಾ ಗಾಯಗೊಂಡ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದಲೇ ಸರಿಯಾದ ಚಿಕಿತ್ಸೆ ನಿಡಲಾಗುತ್ತದೆ" ಎಂದು ಹೇಳಿದರು. ಗಂಭೀರ ಗಾಯಗೊಂಡ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಂತರ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ರಾತ್ರಿ ವಾಹನ ಚಾಲನೆಯ ಮೇಲೆ ನಿಷೇಧ ಹೇರಳಾಗಿದೆ. ಆದರೂ ಬಸ್ ನಿಯಮ ಉಲ್ಲಂಘಿಸಿ ಪ್ರಯಾಣ ಮಾಡಿದೆ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ. ಅಕ್ಟೋಬರ್‌ನಲ್ಲಿ ಪಾಲಕ್ಕಾಡ್ ಅಪಘಾತದಲ್ಲಿ ಒಂಬತ್ತು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ ನಂತರ, ಸರ್ಕಾರವು ಶಾಲಾ ಪ್ರವಾಸಿ ತಂಡಗಳ ರಾತ್ರಿ ಪ್ರಯಾಣವನ್ನು ನಿಷೇಧಿಸಿದೆ.

English summary
Kerala accident: One student died and 43 others, including 40 students, were injured when a tourist bus fell into gorge in Kerala’s Malappuram district. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X