• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ ವೇಳೆಗೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಖಚಿತ: ವೇಣುಗೋಪಾಲ್

|

ನವದೆಹಲಿ, ಜನವರಿ 22: ಏನೇ ಆದರೂ ಜೂನ್ ವೇಳೆಗೆ ಕಾಂಗ್ರೆಸ್ ಪಕ್ಷ ತನ್ನ ಚುನಾಯಿತ ಅಧ್ಯಕ್ಷರನ್ನು ಹೊಂದಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ. 2021ರ ಜೂನ್ ವೇಳೆಗೆ ಪಕ್ಷದ ಚುನಾಯಿತ ಅಧ್ಯಕ್ಷರನ್ನು ಹೊಂದಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ನಿರ್ಧರಿಸಿದೆ ಎಂದು ಅವರು ಶುಕ್ರವಾರ ತಿಳಿಸಿದ್ದಾರೆ.

ಪಕ್ಷದ ಅಧ್ಯಕ್ಷರ ಆಯ್ಕೆ ಹಾಗೂ ಎಐಸಿಸಿ ಪದಾಧಿಕಾರಿಗಳ ಪುನಾರಚನೆಗೆ ಮೇ 29ರಂದು ಚುನಾವಣೆ ನಡೆಸುವಂತೆ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರ ಪ್ರಸ್ತಾಪ ಇರಿಸಿದೆ ಎಂದು ವರದಿಯಾಗಿದೆ.

ಅರ್ನಬ್ ವಾಟ್ಸಾಪ್ ಚಾಟ್ ಸೋರಿಕೆ: ಸರ್ಕಾರದ ಮೌನದ ಕುರಿತು ಸೋನಿಯಾ ಗಾಂಧಿ ತರಾಟೆ

ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಆನ್‌ಲೈನ್ ಸಭೆ ನಡೆಯಿತು. ಪಕ್ಷದ ಪುನಾರಚನೆಗೆ ಚುನಾವಣೆ ನಡೆಸಲು ಈ ಮಹತ್ವದ ಕಾರ್ಯಕಾರಿ ಸಭೆ ನಡೆಸಲಾಯಿತು. ಸೋನಿಯಾ ಗಾಂಧಿ ಅವರ ಭಾಷಣದ ಬಳಿಕ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷರು ಕಳುಹಿಸಿದ ಸಾಂಸ್ಥಿಕ ಚುನಾವಣಾ ವೇಳಾಪಟ್ಟಿಯನ್ನು ಓದುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಅವರಿಗೆ ಸೂಚಿಸಿದರು.

ಮಧುಸೂದನ್ ಮಿಸ್ತ್ರಿ ನೇತೃತ್ವದ ಸಿಇಸಿ, ಎಐಸಿಸಿ ಅಧಿವೇಶನ ಹಾಗೂ ಮೇ 29ರಂದು ಪಕ್ಷದ ಅಧ್ಯಕ್ಷರ ಚುನಾವಣೆಗೆ ಪ್ರಸ್ತಾಪಿಸಿದ್ದಾರೆ.

2019ರ ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿನ ಪಕ್ಷದ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆದಿದ್ದರು. 2019ರ ಆಗಸ್ಟ್‌ನಲ್ಲಿ ಸೋನಿಯಾ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ಸೋನಿಯಾ ಗಾಂಧಿ ಅಚ್ಚರಿ ನಿರ್ಧಾರದ ಹಿಂದಿದೆ ಈ ಮೂರು ಕಾರಣಗಳು

ಆದರೆ ಪಕ್ಷಕ್ಕೆ ಪೂರ್ಣಾವಧಿ ಮತ್ತು ಸಕ್ರಿಯ ಅಧ್ಯಕ್ಷರ ಅಗತ್ಯವಿದ್ದು, ಇಡೀ ಪಕ್ಷವನ್ನು ಸಂಘಟನಾತ್ಮಕವಾಗಿ ಪುನರ್ ರಚಿಸಬೇಕೆಂದು ಪಕ್ಷದ ಒಂದು ವರ್ಗದ ನಾಯಕರು ಬೇಡಿಕೆ ಇರಿಸಿದ್ದಾರೆ.

English summary
Congress general secretary KC Venugopal said the party will have an elected president by June 2021 at any cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X