ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥುವಾ ಅತ್ಯಾಚಾರ ಕೊಲೆ ಪ್ರಕರಣ: ವಯಸ್ಕನಂತೆ ಬಾಲಾಪರಾಧಿ ವಿಚಾರಣೆಗೆ ಸುಪ್ರೀಂ ಆದೇಶ

|
Google Oneindia Kannada News

ನವದೆಹಲಿ, ನ.16: ಕಥುವಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬಾಲಾಪರಾಧಿ ಎಂದು ಘೋಷಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ನಿರ್ದೇಶಿಸಿದೆ.

2018ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಶುಭಂ ಸಂಗ್ರಾನನ್ನು ವಯಸ್ಕರಂತೆ ಹೊಸದಾಗಿ ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರು ತೀರ್ಪು ಪ್ರಕಟಿಸಿದ್ದಾರೆ.

ಮನೆಗೆ ನುಗ್ಗಿದವರ ಕ್ರೌರ್ಯ: ಪತಿ ಎದುರೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ!ಮನೆಗೆ ನುಗ್ಗಿದವರ ಕ್ರೌರ್ಯ: ಪತಿ ಎದುರೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ!

ವಿಚಾರಣೆಯ ಉದ್ದೇಶಗಳಿಗಾಗಿ ಆರೋಪಿಯನ್ನು ಶುಭಂ ಸಂಗ್ರಾನನ್ನು ಬಾಲಾಪರಾಧಿ ಎಂದು ಪರಿಗಣಿಸಿ ಎಂದು ಕಥುವಾ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ಮತ್ತು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನೀಡಿದ ಆದೇಶಗಳನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ.

Kathua Rape Murder Case: SC Directs To Prosecute Juvenile As An Adult

ಸಿಜೆಎಂ ಮತ್ತು ಹೈಕೋರ್ಟ್‌ನ ಆದೇಶದ ವಿರುದ್ಧ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಅಂಗೀಕರಿಸಿತು. ಬಳಿಕ ಪೀಠವು ಆರೋಫಿಯನ್ನು ವಯಸ್ಕನಂತೆ ವಿಚಾರನೆಗೆ ಒಳಪಡಿಸಲು ಆದೇಶಿಸಿದೆ.

ಆರೋಪಿಯ ವಯಸ್ಸಿನ ಬಗ್ಗೆ ವೈದ್ಯಕೀಯ ತಜ್ಞರ ಅಂದಾಜು ಪುರಾವೆ ಸರಿಯಾಗಿಲ್ಲ. ಅದು ಕೇವಲ ಅಭಿಪ್ರಾಯವಾಗಿದೆ ಎಂದು ನ್ಯಾಯಾಲಯ ಹೇಳಿದ್ದು, "ಆರೋಪಿಯು ಅಪರಾಧದ ಸಮಯದಲ್ಲಿ ಬಾಲಾಪರಾಧಿಯಾಗಿರಲಿಲ್ಲ. ಹೀಗಾಗಿ ಇತರ ಸಹ ಆರೋಪಿಗಳನ್ನು ಕಾನೂನಿನ ಪ್ರಕಾರ ವಿಚಾರಣೆಗೊಳಪಡಿಸಿದ ರೀತಿಯಲ್ಲಿಯೇ ಈತನನ್ನು ವಿಚಾರಣೆ ನಡೆಸಬೇಕು" ಎಂದು ನ್ಯಾಯಮೂರ್ತಿ ಪರ್ದಿವಾಲಾ ಆದೇಶ ನೀಡಿದ್ದಾರೆ.

2018ರಲ್ಲಿ ಕಥುವಾ ಗ್ರಾಮದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಜೂನ್ 2019 ರಲ್ಲಿ ಪಠಾಣ್‌ಕೋಟ್‌ನ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

English summary
Kathua Rape,Murder Case: Supreme Court aside orders that diclairs accused as juvenile, directs to prosecute as an adult. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X