ಮಾರ್ಚ್ 24ರ ತನಕ ಚಿದಂಬರಂ ಮಗ ನ್ಯಾಯಾಂಗ ಬಂಧನಕ್ಕೆ, ತಿಹಾರ್ ಜೈಲಿಗೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಮಗ ಕಾರ್ತಿಯನ್ನು ಮಾರ್ಚ್ ಇಪ್ಪತ್ನಾಲ್ಕರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ವಿಶೇಷ ಕೋರ್ಟ್ ಸೂಚನೆ ನೀಡಿದೆ. ಇದರರ್ಥ ಏನೆಂದರೆ ಮಾರ್ಚ್ ಇಪ್ಪತ್ನಾಲ್ಕರ ತನಕ ಕಾರ್ತಿ ಚಿದಂಬರಂ ತಿಹಾರ್ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಹಣಕಾಸು ಅವ್ಯವಹಾರದ ಆರೋಪ ಅವರ ಮೇಲಿದೆ.

ಐಎನ್ ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿ ಚಿದಂಬರಂ ಸಿಬಿಐ ಬಂಧನ

ಅಗತ್ಯ ಇರುವಷ್ಟು ಭದ್ರತೆಯನ್ನು ಕಾರ್ತಿ ಚಿದಂಬರಂಗೆ ನೀಡಿ ಎಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ. ಇನ್ನು ಮನೆಯೂಟವನ್ನು ಜೈಲಿಗೆ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೋರ್ಟ್ ನ ಕೇಳಿಕೊಂಡಿದ್ದರು ಕಾರ್ತಿ. ಅದಕ್ಕೆ ಅವಕಾಶವನ್ನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

Karti Chidambaram

ಅಂದಹಾಗೆ ಐಎನ್ ಎಕ್ಸ್ ಮೀಡಿಯಾಗೆ ಸಂಬಂಧಿಸಿದ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಿತ್ತು. ಮತ್ತಷ್ಟು ಸಮಯ ನಮ್ಮ ವಶಕ್ಕೆ ಕಾರ್ತಿ ಚಿದಂಬರಂ ಅವರನ್ನು ನೀಡಬೇಕು ಎಂದು ಸಿಬಿಐ ಯಾವುದೇ ಅರ್ಜಿಯನ್ನು ಕೋರ್ಟ್ ಗೆ ಹಾಕಿರಲಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಚಿದಂಬರಂ ಪ್ರಭಾವಿ ಸಚಿವರಾಗಿದ್ದರು. ಬಿಜೆಪಿ ಸರಕಾರದ ವಿರುದ್ಧದ ಟೀಕಾಕಾರರಲ್ಲಿ ಚಿದಂಬರಂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A special court has remanded Karti Chidambaram to judicial custody till March 24th. This means he will be lodged at the Tihar jail until March 24. The court directed the Tihar jail authorities to provide adequate security to Karti. The court was hearing the INX Media case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ