• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳು:ವಿಜಯ ದಿವಸ: ಕಾರ್ಗಿಲ್‌ ಹುತಾತ್ಮ ಯೋಧರಿಗೆ ದೇಶದ ನಮನ

By Nayana
|

ಬೆಂಗಳೂರು, ಜು.26: ದೇಶಾದ್ಯಂತ ಇಂದು ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಗುತ್ತಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಭಾರತೀಯರು ಗೌರವ ಸಲ್ಲಿಸುತ್ತಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆರ್ಮಿ ಚೀಫ್‌ ಜನರಲ್‌ ಬಿಪಿನ್‌ ತಾವತ್‌ ಅವರೊಂದಿಗೆ ನವದೆಹಲಿಯ ಅಮರ್‌ಜವಾನ್‌ ಜ್ಯೋತಿಗೆ ತೆರಳಿ ಗೌರವ ಸಲ್ಲಿಸಿದರು. ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯ್ ದಿವಸ್' ಆಚರಣೆಮಾಡಲಾಗುತ್ತಿದೆ.

ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ. ಭಾರತ ಸರ್ಕಾರ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟ, ಧೈರ್ಯ ಮತ್ತು ಸಾಹಸಗಳಿಂದ ಆಪರೇಷನ್ ವಿಜಯ್'ಗೆ ಯಶಸ್ವಿಗೊಳಿಸಿದ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ನಯಿಬ್ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮತ್ತು ವಿಕ್ರಮ್ ಬಾತ್ರಾರವರಿಗೆ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರ ಪುರಸ್ಕಾರವನ್ನು ನೀಡಿ ಗೌರವಿಸಿತ್ತು.

ವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷ

ಪಾಕಿಸ್ತಾನದ ಕರಾಚಿಯಲ್ಲಿ ಚುನಾವಣಾ ಅಧಿಕಾರಿಗಳು ಮತ ಎಣಿಕೆಯಲ್ಲಿ ತೊಡಗಿದ್ದರು.ಇನ್ನು ನವದೆಹಲಿಯಲ್ಲಿ ಬುಧವಾರ ನಡೆದ ಇಂಡಿಯಾ ಕೋಚರ್‌ ವೀಕ್‌ನಲ್ಲಿ ಡಿಸೈನರ್‌ ತಹಿಲಿಯಾನಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆತೊಟ್ಟು ರಾಂಪ್‌ ಮೇಲೆ ಹೆಜ್ಜೆ ಹಾಕಿದರು.

ಇನ್ನು ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಮರಾಠ ಸಂಘಟನೆಗಳು ಸೋಮವಾರದಿಂದ ಪ್ರತಿಭಟನೆ ಕೈಗೊಂಡು, ಮಹಾರಾಷ್ಟ್ರ ಬಂದ್‌ ಗೆ ಕರೆ ನೀಡಿದ್ದರು. ಬಂದ್‌ ಹಿಂಸಾಚಾರಕ್ಕೆ ತೆರುಗಿದ ಹಿನ್ನೆಲೆಯಲ್ಲಿ ಬಂದ್‌ ಹಿಂಪಡೆಯಲಾಗಿದೆ ಈ ಎಲ್ಲಾ ಘಟನೆಗಳನ್ನು ಚಿತ್ರಗಳ ಮೂಲಕ ವೀಕ್ಷಿಸಬಹುದಾಗಿದೆ.

ನಿರ್ಮಲಾ ಸೀತಾರಾಮನ್‌ ಯೋಧರಿಗೆ ನಮನ

ನಿರ್ಮಲಾ ಸೀತಾರಾಮನ್‌ ಯೋಧರಿಗೆ ನಮನ

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆರ್ಮಿ ಚೀಫ್‌ ಜನರಲ್‌ ಬಿಪಿನ್‌ ರಾವತ್‌ ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ನವದೆಹಲಿಯ ಅಮರ್‌ ಜವಾನ್‌ ಜ್ಯೋತಿಯಲ್ಲಿ ಯೋಧರಿಗೆ ನಮನ ಸಲ್ಲಿಸಿದರು.

ವಾಜಪೇಯಿಯವರ ದಿಟ್ಟ ನಿರ್ಧಾರ ನೆನೆದ ನರೇಂದ್ರ ಮೋದಿ

 ಕರಾಚಿಯಲ್ಲಿ ಮತ ಎಣಿಕೆ ಮಾಡುತ್ತಿರುವ ಚುನಾವಣಾ ಅಧಿಕಾರಿಗಳು

ಕರಾಚಿಯಲ್ಲಿ ಮತ ಎಣಿಕೆ ಮಾಡುತ್ತಿರುವ ಚುನಾವಣಾ ಅಧಿಕಾರಿಗಳು

ಪಾಕಿಸ್ತಾನದಲ್ಲಿ ನಡೆದ ಚುನಾವಣೆ ಬಳಿಕ ಚುನಾವಣಾ ಅಧಿಕಾರಿಗಳು ಕರಾಚಿಯಲ್ಲಿ ಮತೆಣಿಕೆ ಮಾಡುತ್ತಿರುವ ದೃಶ್ಯವನ್ನು ನೀವು ನೋಡಬಹುದಾಗಿದೆ.

ಟೈಗರ್ ಹಿಲ್ ಭಾರತಕ್ಕೆ ಮರಳಿ ಸಿಕ್ಕಿದ್ದು ಎಂಟು ಸಿಖ್ ಯೋಧರ ಸಾಹಸದಿಂದ

 ಮಹಾರಾಷ್ಟ್ರ ಬಂದ್‌: ವಾಹನಗಳಿಗೆ ಬೆಂಕಿ

ಮಹಾರಾಷ್ಟ್ರ ಬಂದ್‌: ವಾಹನಗಳಿಗೆ ಬೆಂಕಿ

ಮಹಾರಾಷ್ಟ್ರ ಸರ್ಕಾರದಲ್ಲಿ ಮರಾಠಿಗರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್‌ ಯಶಸ್ವಿಯಾಗದಿದ್ದರೂ ಬಂದ್‌ ಹಿಂಪಡೆಯಲಾಗಿದೆ. ಬಂದ್‌ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಬಂದ್‌ ವಾಪಸ್‌ ಪಡೆಯಲಾಗಿದೆ.

 ಮೂವರು ಸಹೋದರಿಯರ ನಿಗೂಢ ಸಾವು

ಮೂವರು ಸಹೋದರಿಯರ ನಿಗೂಢ ಸಾವು

ನವದೆಹಲಿಯ ಮಂಡವಾಲಿ ಪ್ರದೇಶದಲ್ಲಿ ಮೂವರು ಸಹೋದರಿಯರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ, ತನಿಖೆ ಮುಂದುವರೆದಿದ್ಉ ಸಾವಿಗೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

 ಭಾರತೀಯ ಉಡುಗೆಯಲ್ಲಿ ಮಿಂಚಿದ ರೂಪದರ್ಶಿಗಳು

ಭಾರತೀಯ ಉಡುಗೆಯಲ್ಲಿ ಮಿಂಚಿದ ರೂಪದರ್ಶಿಗಳು

ನವದೆಹಲಿಯಲ್ಲಿ ಇಂಡಿಯಾ ಕೋಚರ್‌ ವೀಕ್‌ನಲ್ಲಿ ಡಿಸೈನರ್‌ ತರುಣ್‌ ತಹಿಲಿಯಾನಿ ಅವರು ಕ್ರಿಯೇಷನ್‌ನಲ್ಲಿ ಭಾರತೀಯ ಉಡುಗೆ ತೊಟ್ಟು ಮಾಡೆಲ್‌ಗಳು ರಾಂಪ್‌ ಮೇಲೆ ಹೆಜ್ಜೆ ಹಾಕಿದರು.

English summary
Kargil Vijay Diwas: India pays tributes to its fallen heroes. Defence Minister Nirmala Sitharaman along with Army chief General Bipin Rawat pays tribute at Amar Jawan Jyoti on Kargil Vijay Diwas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X