ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿಗೆ ಅತ್ಯಾಚಾರದ ಬೆದರಿಕೆ!
ನವದೆಹಲಿ, ಫೆಬ್ರವರಿ 27: 'ಎಬಿವಿಪಿಗೆ ತಾನು ಹೆದರುವುದಿಲ್ಲ' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಕಾರ್ಗಿಲ್ ಯುದ್ಧದ ಹುತಾತ್ಮ ಕ್ಯಾ.ಮನದೀಪ್ ಸಿಂಗ್ ಅವರ ಪುತ್ರಿ ಗುರ್ಮೆಹರ್ ಕೌರ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನವದೆಹಲಿ, ಫೆಬ್ರವರಿ 27: 'ಎಬಿವಿಪಿಗೆ ತಾನು ಹೆದರುವುದಿಲ್ಲ' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಕಾರ್ಗಿಲ್ ಯುದ್ಧದ ಹುತಾತ್ಮ ಕ್ಯಾ.ಮನದೀಪ್ ಸಿಂಗ್ ಅವರ ಪುತ್ರಿ ಗುರ್ಮೆಹರ್ ಕೌರ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಗೆ ಈಗ ಅತ್ಯಾಚಾರ ಬೆದರಿಕೆ ಸೇರಿದಂತೆ ಸರಣಿ ಬೆದರಿಕೆಗಳು ಬರತೊಡಗಿವೆಯಂತೆ. ಈ ಬಗ್ಗೆ ಖುದ್ದು ಕೌರ್ ಅವರು ಎನ್ ಡಿಟಿವಿಗೆ ಹೇಳಿಕೊಂಡಿದ್ದಾರೆ.

ಎನ್‌ಡಿಟಿವಿಯ 'ವಿ ದಿ ಪೀಪಲ್ ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೌರ್, "ಸಾಮಾಜಿಕ ಮಾಧ್ಯಮದಲ್ಲಿ ನನಗೆ ಬಹಳಷ್ಟು ಬೆದರಿಕೆಗಳು ಬರತೊಡಗಿವೆ. ನನ್ನನ್ನು ರಾಷ್ಟ್ರವಿರೋಧಿಯೆಂದು ನಿಂದಿಸುತ್ತಿದ್ದಾರೆ. ರಾಹುಲ್ ಎಂಬಾತನಂತೂ ನನ್ನ ಮೇಲೆ ಹೇಗೆ ಅತ್ಯಾಚಾರ ನಡೆಸುತ್ತೇನೆ ಎಂದಿದ್ದಾನೆ. ನಾನು ಆತಂಕದಲ್ಲಿದ್ದೇನೆ" ಎಂದಿದ್ದಾರೆ

Click it and Unblock the Notifications