Bihar Election: ಚುನಾವಣೆ ಮುನ್ನ 4 ವಿಶೇಷ ರೈಲಲ್ಲಿ ಬಿಹಾರಕ್ಕೆ ಬಂದಿಳಿದ 6000 ಜನ: ರೈಲ್ವೆ ಇಲಾಖೆ ಹೇಳಿದ್ದೇನು?
ನವದೆಹಲಿ, ನವೆಂಬರ್ 10: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತದ ಚುನಾವಣೆ (ನವೆಂಬರ್ 11) ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಸಾವಿರಾರು ಜನರನ್ನು ಹರಿಯಾಣದಿಂದ ವಿಶೇಷ ರೈಲುಗಳ ಮೂಲಕ ಬಿಹಾರಕ್ಕೆ ಕರೆತರಲಾಗಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅರೋಪಿಸಿದ್ದರೆ. ಈ ಬಗ್ಗೆ ರೈಲ್ವೆ ಸಚಿವಾಲಯದಿಂದ ಉತ್ತರಕ್ಕೆ ಆಗ್ರಹಿಸಿದ್ದಾರೆ. ರೈಲ್ವೆ ಸಚಿವಾಲಯ ಏನೆಂದು ಪ್ರತಿಕ್ರಿಯಿಸಿದೆ.
ನೆನ್ನೆ ಭಾನುವಾರ ನವೆಂಬರ್ 3 ರಂದು ಹರಿಯಾಣದಿಂದ ಬಿಹಾರಕ್ಕೆ "ನಾಲ್ಕು ವಿಶೇಷ ರೈಲುಗಳನ್ನು" ಕಾರ್ಯಾಚರಣೆ ಮಾಡಲಾಗಿದೆ. ಅದರಲ್ಲಿ 6,000 ಜನರ ಬಿಹಾರಕ್ಕೆ ಬಂದಿಳಿದಿದ್ದಾರೆ ಎಂದು ಸಂಸದ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಈ ವಿಶೇಷ ರೈಲುಗಳನ್ನು ಓಡಿಸುವ ಉದ್ದೇಶ ಏನಿತ್ತು? ಮತ್ತು ಅವರಿಗೆ ಹಣ ನೀಡಿದ್ದ್ಯಾರು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದರು ಪ್ರಶ್ನಿಸಿದ್ದಾರೆ.

ಸಂಸದರ ಆರೋಪಕ್ಕೆ ರೈಲ್ವೆ ಸಚಿವಾಲಯ ಪ್ರತಿಕ್ರಿಯಿಸಿದೆ. ಹಬ್ಬದ ಋತುವಿನ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು 12,000 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಅದರಲ್ಲಿ 10,700 ವಿಶೇಷ ರೈಲುಗಳನ್ನು ನಿಗದಿಪಡಿಸಲಾಗಿದೆ. ಸುಮಾರು 2000 ರೈಲುಗಳ ನಿಗದಿಪಡಿಸಿಲ್ಲ (Unschuduled). ರೈಲ್ವೆ ವಿಭಾಗೀಯ, ವಲಯ ಮತ್ತು ರೈಲ್ವೆ ಮಂಡಳಿ ಮಟ್ಟದಲ್ಲಿ ಮೂರು ಹಂತಗಳಲ್ಲಿ ಕಾರ್ಯಾಚರಣೆಗೆ ಪ್ಲಾನ್ ಮಾಡಿಕೊಂಡಿದ್ದವು. ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರ ಹಠಾತ್ ದಟ್ಟಣೆ ಉಂಟಾದರೆ, ತಕ್ಞಣವೇ ನಿಗದಿತ ವಿಶೇಷ ರೈಲು ಸೇವೆ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದೆ.
ತಮ್ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಕಪಿಲ್ ಸಿಬಲ್ ಮತ್ತು ಆರ್‌ಜೆಡಿಯ ರಾಜ್ಯಸಭಾ ಸಂಸದ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ರೈಲ್ವೆ ಅಧಿಕಾರಿಗಳಿಗೆ ಕೆಲವು ರೈಲುಗಳನ್ನು ವ್ಯವಸ್ಥೆ ಮಾಡಲು ಮತ್ತು ಅಲ್ಲಿ ಹರಿಯಾಣ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರ್ಚನಾ ಗುಪ್ತಾ ಅವರನ್ನು ಸಂಪರ್ಕಿಸಲಾಗಿತ್ತು ಎಂದು ದೂರಿದ್ದಾರೆ. ಈ ರೈಲುಗಳಿಗೆ ಬಿಜೆಪಿಯೇ ಹಣ ಪಾವತಿಸಿದೆ ಎಂದು ಸಿಂಗ್ ಆರೋಪಿಸಿದ್ದಾರೆ.
This festival season Railways is running 12,000 special trains. 10,700 special trains are scheduled. And about 2000 trains are unscheduled. We are operating war rooms at three levels, divisional, zonal, and Railway board level. Whenever there is a sudden rush of passengers at… https://t.co/98VYO63k9C
— Ministry of Railways (@RailMinIndia) November 9, 2025
ಇಂತಹ ಸಂದರ್ಭಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಏನನ್ನೂ ಮಾಡುವುದಿಲ್ಲ. ಚುನಾವಣೆ ಆಯೋಗ ನಡೆಸುವ ಚುನಾವಣೆ ವಿಧಾನವು ಅನುಮಾನಾಸ್ಪದವಾಗಿದೆ ಎಂದು ಕಿಡಿ ಕಾರಿದರು. ನವೆಂಬರ್ 3 ರಂದು ಕರ್ನಾಲ್‌ನಿಂದ ಹೊರಟ ವಿಶೇಷ ರೈಲು ಬರೌನಿಗೆ ಬಂದಿದ್ದು, ಅದರಿಂದ 1,500 ಜನ ಇಳಿದರು. ನಂತರ ಬೆಳಗ್ಗೆ 11 ಗಂಟೆಗೆ ಕರ್ನೊಲ್‌ನಿಂದ ರೈಲು ಸಂಚಾರ ಆರಂಭಿಸಿ ಬಾಗಲಪುರ ತಲುಪಿತು. ಅದರಲ್ಲಿ 1,500 ಜನರಿದ್ದರು. ಇದೇ ರೀತಿ ಒಟ್ಟು ನಾಲ್ಕು ರೈಲುಗಳಿಂದ 6000 ಜನರು ಪ್ರಯಾಣಿಸಿದ್ದಾರೆ ಎಂದರು. ಜೊತೆಗೆ ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಕ್ರಿಯಿಸುವಂಥೆ ಅವರು ಕೋರಿದ್ದಾರೆ.
ಬಿಹಾರ ಚುನಾವಣೆಗಳು ನವೆಂಬರ್ 6 ರಂದು ಮೊದಲ ಹಂತ ಮುಕ್ತಾಯವಾಗಿದೆ. ಎರಡನೇ ಹಂತ ಮತದಾನ ನಾಳೆ ನವೆಂಬರ್11 ರಂದು ನಡೆಯಲಿದೆ. ಈ ಚುನಾವಣೆ ಫಲಿತಾಂಶ ನವೆಂಬರ್ 14 ರಂದು ಪ್ರಕಟವಾಗಲಿದೆ. ಪ್ರತಿ ಬೆಳವಣಿಗೆ ಮೇಲೂ ಎಲ್ಲ ನಾಯಕರ ಕಣ್ಣಿದೆ. ಹೀಗಾಗಿ ರೈಲು ಸೇವೆ, ಪ್ರಯಾಣಿಕ ಓಡಾಟವನ್ನು ಪ್ರಶ್ನಿಸಲಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications