ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಜಾವಾಲಾ ಅಪಘಾತ: ಘಟನೆ ಬಗ್ಗೆ ವರದಿ ಕೇಳಿದ ಅಮಿತ್ ಶಾ

|
Google Oneindia Kannada News

ದೆಹಲಿ ಜನವರಿ 2: ಕಾಂಜಾವಾಲಾ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೊಡ್ಡ ಕ್ರಮ ಕೈಗೊಂಡಿದ್ದಾರೆ. ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯ ಕಾಂಜಾವಾಲಾ ಘಟನೆಯ ಕುರಿತು ದೆಹಲಿ ಪೊಲೀಸ್ ಆಯುಕ್ತರಿಂದ ವಿವರವಾದ ವರದಿಯನ್ನು ಕೇಳಿದೆ. ಗೃಹ ಸಚಿವಾಲಯಕ್ಕೆ ವಿವರವಾದ ವರದಿಯನ್ನು ಸಲ್ಲಿಸುವಂತೆ ದೆಹಲಿ ಪೊಲೀಸ್ ವಿಶೇಷ ಆಯುಕ್ತ ಶಾಲಿನಿ ಸಿಂಗ್ ಅವರನ್ನು ಕೇಳಲಾಗಿದೆ.

ಇದೇ ವೇಳೆ ಈ ಪ್ರಕರಣದ ಮತ್ತೊಂದು ಸಿಸಿಟಿವಿ ವಿಡಿಯೋ ಬಹಿರಂಗಗೊಂಡಿದೆ. ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಕಾರು ಯು-ಟರ್ನ್ ತೆಗೆದುಕೊಂಡಿರುವುದು ಈ ಹೊಸ ಸಿಸಿಟಿವಿ ವಿಡಿಯೋದಲ್ಲಿ ಕಂಡುಬರುತ್ತದೆ. ಪ್ರತ್ಯಕ್ಷದರ್ಶಿ ನೀಡಿರುವ ಸಾಕ್ಷಿ ಸತ್ಯ ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಸ್ಪಷ್ಟವಾಗಿದೆ. ವಾಸ್ತವವಾಗಿ, ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಕಾರು ಯು-ಟರ್ನ್ ತೆಗೆದುಕೊಂಡಿದೆ ಎಂದು ಕಾಂಜಾವಾಲಾ ಅಪಘಾತದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರು ಮತ್ತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಂಜಾನೆ 3.34ರ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲೆಯಾಗಿದೆ. ಶವ ಪತ್ತೆಯಾದ ಸ್ಥಳಕ್ಕೆ ಕಾರು ಹಿಂತಿರುಗುವುದನ್ನು ದೃಶ್ಯಾವಳಿಗಳು ತೋರಿಸುತ್ತವೆ.

ಬಿಜೆಪಿಯವರಿಂದ ಕನ್ನಡಿಗರ ಎಟಿಎಂ ಲೂಟಿ, ಅಮಿತ್ ಶಾ ಆಟ ನನ್ನ ಬಳಿ ನಡೆಯಲ್ಲ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶಬಿಜೆಪಿಯವರಿಂದ ಕನ್ನಡಿಗರ ಎಟಿಎಂ ಲೂಟಿ, ಅಮಿತ್ ಶಾ ಆಟ ನನ್ನ ಬಳಿ ನಡೆಯಲ್ಲ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

20 ವರ್ಷದ ಮಹಿಳೆ ಅಂಜಲಿ ಜನವರಿ 1 ರಂದು ಮುಂಜಾನೆ 3 ಗಂಟೆಯ ಸುಮಾರಿಗೆ ತನ್ನ ಸ್ಕೂಟಿಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರು ಆಕೆಗೆ ಡಿಕ್ಕಿ ಹೊಡೆದು ನಂತರ ಸುಲ್ತಾನ್‌ಪುರಿಯಿಂದ ದೆಹಲಿಯ ಕಾಂಝಾವಾಲಾಗೆ 7-12 ಕಿಮೀ ಎಳೆದೊಯ್ದಿದೆ. ಅದು ಅವಳ ಸಾವಿಗೆ ಕಾರಣವಾಯಿತು.

Kanjawala accident: Amit Shah heard the report about the incident

ಹೊಸ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಾರುತಿ ಬಲೆನೊ ಕಾರು ಪಶ್ಚಿಮ ದೆಹಲಿಯ ಕಂಜಾವಾಲಾದ ರಸ್ತೆಯಲ್ಲಿ ಯು-ಟರ್ನ್ ತೆಗೆದುಕೊಳ್ಳುತ್ತದೆ. ಅಲ್ಲಿ ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ಮಿಠಾಯಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಕಾರು ಯು-ಟರ್ನ್ ತೆಗೆದುಕೊಳ್ಳುವುದನ್ನು ತಾನು ನೋಡಿದ್ದೇನೆ ಎಂದು ದೀಪಕ್ ದಹಿಯಾ ಹೇಳಿದ್ದರು. ಮುಂಜಾನೆ 3.34 ಕ್ಕೆ ದಾಖಲಾಗಿರುವ ದೃಶ್ಯಾವಳಿಗಳು, ಶವ ಪತ್ತೆಯಾದ ಸ್ಥಳಕ್ಕೆ ಕಾರು ಹಿಂತಿರುಗುತ್ತಿರುವುದನ್ನು ತೋರಿಸುತ್ತದೆ. ಕಾರಿನ ಕೆಳಗೆ ಮೃತ ದೇಹವು ಸ್ಪಷ್ಟವಾಗಿ ಗೋಚರಿಸುತ್ತದೆ.

Kanjawala accident: Amit Shah heard the report about the incident

ಕಾರಿನಲ್ಲಿ ಸಿಲುಕಿದ್ದ ಯುವತಿಯ ಶವವನ್ನು ಕಾರು ಚಾಲಕ 18 ರಿಂದ 20 ಕಿಲೋಮೀಟರ್ ವರೆಗೆ ಎಳೆದೊಯ್ದು ಸುಮಾರು ಒಂದೂವರೆ ಗಂಟೆಗಳ ಕಾಲ ತಿರುಗಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ಹೇಳಿದ್ದಾರೆ. ಘಟನೆ ನಡೆದಾಗ ಬೆಳಗಿನ ಜಾವ 3:20 ಆಗಿತ್ತು ಎಂದು ದೀಪಿಕ್ ದಹಿಯಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ನಾನು ಅಂಗಡಿಯ ಹೊರಗೆ ನಿಂತಿದ್ದಾಗ 100 ಮೀಟರ್ ದೂರದಲ್ಲಿ ವಾಹನದಿಂದ ದೊಡ್ಡ ಶಬ್ದ ಕೇಳಿಸಿತು. ಮೊದಮೊದಲು ಟೈರ್ ಒಡೆದಿದೆ ಎಂದುಕೊಂಡಿದ್ದೆ. ಕಾರು ಮುಂದೆ ಹೋಗುತ್ತಿದ್ದಂತೆ, ದೇಹವನ್ನು ಎಳೆದುಕೊಂಡು ಹೋಗುವುದನ್ನು ನಾನು ನೋಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದಿದ್ದಾರೆ.

English summary
Union Home Minister Amit Shah has taken a big step regarding Kanjawala incident. On the direction of Amit Shah, the Home Ministry has sought a detailed report from the Delhi Police Commissioner on the Kanjawala incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X