ಯುಎಸ್ VPಯಾಗಿ ಕಮಲಾ ಹ್ಯಾರಿಸ್ ಆಯ್ಕೆ: ದೊಡ್ಡ ಕನಸು ಕಾಣುವಂತೆ ಹುಡುಗಿಯರಿಗೆ ಪಿಗ್ಗಿ ಕರೆ
ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಆಯ್ಕೆ ಖಚಿತವಾಗಿದೆ.
2020 ರ ಯುಎಸ್ ಅಧ್ಯಕ್ಷೀಯ ಚುನಾವಣೆಗಳನ್ನು ಕುತೂಹಲಕರವಾಗಿ ಗಮನಿಸುತ್ತಿದ್ದ ಗ್ಲೋಬಲ್ ಐಕಾನ್, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ನಲ್ಲಿ ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರ ದೊಡ್ಡ ಮತ್ತು ಐತಿಹಾಸಿಕ ಗೆಲುವನ್ನು ಅಭಿನಂದಿಸಿದ್ದಾರೆ.
46ನೇ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಲು ಸಿದ್ಧವಾಗಿರುವ ಜೋ ಬೈಡೆನ್, 1988 ಮತ್ತು 2008ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಫಲ ಬಿಡ್ ಗಳನ್ನು ಹಾಕಿದವರು.

ಜೋ ಬೈಡೆನ್ ಅವರ ರಾಜಕೀಯ ಬದುಕಿನ ಸಂಗಾತಿಯಾಗಿ ಇದ್ದ ಮೊದಲ ಕಪ್ಪು ಅಮೆರಿಕನ್ ಮತ್ತು ಏಷ್ಯನ್ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ, ಅದೂ ದೇಶದ ಅತ್ಯುನ್ನತ ೨ನೇ ಕಚೇರಿಯಲ್ಲಿ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಸದ್ಯದ ಅಂತರರಾಷ್ಟ್ರೀಯ ತಾರೆ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ತನ್ನ ಶುಭಾಶಯಗಳನ್ನು ನಟಿ ಪ್ರಿಯಾಂಕಾ ಚೋಪ್ರಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಗಾಜಿನ ಸೀಲಿಂಗ್ ಅನ್ನು ಮುರಿದು ಮೊದಲಿಗಳಾಗಿದ್ದನ್ನು ತೋರಿಸಿಕೊಟ್ಟು, ಎಲ್ಲಾ ಹುಡುಗಿಯರು "ದೊಡ್ಡ ಕನಸು ಕಾಣಲು' ಪ್ರೇರಕ ಸಂದೇಶವನ್ನು ನೀಡಿದ್ದಾಳೆ ಎಂದು ಪ್ರಿಯಾಂಕಾ ಚೋಪ್ರಾ ಬಣ್ಣಿಸಿದ್ದಾರೆ.












Click it and Unblock the Notifications