ಕೊಲ್ಕತ್ತಾ ಹೈಕೋರ್ಟ್ ನ್ಯಾ. ಸಿ ಎಸ್ ಕರ್ಣನ್ ಬಂಧನ

Posted By:
Subscribe to Oneindia Kannada

ಕೋಯಮತ್ತೂರು, ಜೂನ್ 20 : ನ್ಯಾಯಾಂಗ ನಿಂದನೆ ಆರೋಪದಡಿ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿ ನಾಪತ್ತೆಯಾಗಿದ್ದ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರನ್ನು ಮಂಗಳವಾರ ತಮಿಳುನಾಡಿನ ಕೋಯಮತ್ತೂರಿನಲ್ಲಿ ಬಂಧಿಸಲಾಗಿದೆ.

ಜೈಲು ಶಿಕ್ಷೆಗೆ ಗುರಿಯಾಗಿ ಮೇ 9ರಿಂದ ನಾಪತ್ತೆಯಾಗಿದ್ದ ನ್ಯಾ, ಕರ್ಣನ್ ಅವರನ್ನು ಪಶ್ಚಿಮ ಬಂಗಾದ ಸಿಐಡಿ ಅಧಿಕಾರಿಗಳು ಕೋಯಮತ್ತೂರಿನಲ್ಲಿ ಬಂಧಿಸಿದ್ದಾರೆ.

ನ್ಯಾ. ಕರ್ಣನ್ ಗಾಗಿ ಶೋಧ ನಡೆಸಿ ಸುಸ್ತಾದ ಪೊಲೀಸರು

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರಿಗೆ ಸುಪ್ರೀಂ  ಕೋರ್ಟ್‌ 6 ತಿಂಗಳ ಸಜೆ ವಿಧಿಸಿತ್ತು. ಬಳಿಕ ಕರ್ಣನ್ ನಾಪತ್ತೆಯಾಗಿದ್ದರು.

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ವಿವಾದ ಎಬ್ಬಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ನ್ಯಾಯಾಂಗ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.

ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ಬಂಡೆದಿದ್ದಿ ಕರ್ಣನ್

ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ಬಂಡೆದಿದ್ದಿ ಕರ್ಣನ್

ತಮ್ಮ ವಿರುದ್ಧ ಜಾತಿ ಆಧಾರಿತ ತಾರತಮ್ಯ ಎಸಗಲಾಗುತ್ತಿದೆ ಎಂದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ಬಂಡೆದಿದ್ದಿದ್ದರು.

ಹೈಕೋರ್ಟ್ ನ್ಯಾಯಮೂರ್ತಿಯ ವಿರುದ್ಧ ನ್ಯಾಯಾಂಗ ನಿಂದನೆ

ಹೈಕೋರ್ಟ್ ನ್ಯಾಯಮೂರ್ತಿಯ ವಿರುದ್ಧ ನ್ಯಾಯಾಂಗ ನಿಂದನೆ

ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿಯ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆಯ ನೋಟೀಸ್ ಜಾರಿ ಮಾಡಿತ್ತು.

ನ್ಯಾ. ಕರ್ಣನ್ ಗೆ 6 ತಿಂಗಳ ಸಜೆ

ನ್ಯಾ. ಕರ್ಣನ್ ಗೆ 6 ತಿಂಗಳ ಸಜೆ

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ (59)ಅವರಿಗೆ ಸುಪ್ರೀಂ ಕೋರ್ಟ್‌ 6 ತಿಂಗಳ ಸಜೆ ವಿಧಿಸಿತ್ತು.ಇದೇ ಮೊದಲ ಬಾರಿಗೆ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನದಲ್ಲಿರುವವರಿಗೆ ಜೈಲು ಶಿಕ್ಷೆಯಾಗಿದೆ. ತಕ್ಷಣವೇ ನ್ಯಾ.ಸಿ.ಎಸ್‌.ಕರ್ಣನ್‌ ಅವರನ್ನು ಬಂಧಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್‌ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ಮೇ 9ರಿಂದ ನಾಪತ್ತೆಯಾಗಿದ್ದ ನ್ಯಾ. ಕರ್ಣನ್

ಮೇ 9ರಿಂದ ನಾಪತ್ತೆಯಾಗಿದ್ದ ನ್ಯಾ. ಕರ್ಣನ್

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರಿಗೆ ಸುಪ್ರೀಂ ಕೋರ್ಟ್‌ 6 ತಿಂಗಳ ಶಿಕ್ಷೆ ವಿಧಿಸುತ್ತಿದ್ದಂತಯೇ ಮೇ 9ರಿಂದ ಪೊಲೀಸರಿಗೆ ಸಿಗದೆ ನಾಪತ್ತೆಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Calcutta high court judge CS Karnan was on Tuesday arrested from Tamil Nadu's Coimbatore and was taken to Chennai.Sixty-two-year-old Justice Karnan had been evading arrest since May 9 after being sentenced to six months imprisonment for contempt of court by the Supreme Court.
Please Wait while comments are loading...