ಕೇಂದ್ರ ಸರ್ಕಾರ ನೀಡಿದ ಅಫರ್ ತಿರಸ್ಕರಿಸಿದ ಜಸ್ಟೀಸ್ ಎಕೆ ಸಿಕ್ರಿ
ನವದೆಹಲಿ, ಜನವರಿ 14: ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿದಾ ಸಮಿತಿಯಲ್ಲಿದ್ದ ನ್ಯಾ. ಎ.ಕೆ ಸಿಕ್ರಿ ಅವರಿಗೆ ಕೇಂದ್ರ ಸರ್ಕಾರಿಂದ ಮಹತ್ವದ ಹುದ್ದೆಯ ಆಫರ್ ನೀಡಲಾಗಿತ್ತು. ಆದರೆ, ನ್ಯಾ. ಸಿಕ್ರಿ ಅವರು ಈ ಆಫರ್ ನಿರಾಕರಿಸಿದ್ದಾರೆ.
ಲಂಡನ್ನಲ್ಲಿರುವ ಕಾಮನ್ವೆಲ್ತ್ ಸೆಕ್ರೆಟರಿಯಟ್ ಆರ್ಬಿಟ್ರಲ್ ಟ್ರಿಬ್ಯುನಲ್(ಸಿಎಸ್ಎಟಿ) ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಸರ್ಕಾರ ಮುಂದಾಗಿತ್ತು. ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ನ್ಯಾ.ಎ.ಕೆ.ಸಿಕ್ರಿ ನಯವಾಗಿ ತಿರಸ್ಕರಿಸಿದ್ದು, ಈ ಕುರಿತು ಅವರು ಕಾನೂನು ಸಚಿವಾಲಯಕ್ಕೆ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದಾರೆ.

ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜತೆಗೆ ನ್ಯಾ.ಸಿಕ್ರಿ ಕೂಡಾ ಇದ್ದರು. ಸರ್ಕಾರದ ಪದಚ್ಯುತಿ ಕ್ರಮಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದ ಅಲೋಕ್ ವರ್ಮಾರನ್ನು ಹುದ್ದೆಯಿಂದ ವಜಾಗೊಳಿಸಿ ನ್ಯಾ. ಸಿಕ್ರಿ ಕೇಂದ್ರಕ್ಕೆ ನೆರವಾದರು.
ಹಾಗಾಗಿ ಅವರಿಗೆ ಸರ್ಕಾರ ಕಡೆಯಿಂದ ಸಿಎಸ್ಎಟಿಗೆ ನೇಮಿಸುವ ಆಫರ್ ಸಿಕ್ಕಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾ. ಸಿಕ್ರಿ ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.











Click it and Unblock the Notifications