ನ್ಯಾಯಾಂಗ ವರ್ಗಾವಣೆ: ಕರ್ನಾಟಕ ಹೈಕೋರ್ಟಿನ ಇಬ್ಬರಿಗೆ ಪದೋನ್ನತಿ

Subscribe to Oneindia Kannada

ನವದೆಹಲಿ, ಫೆಬ್ರವರಿ 7: ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಕೊಲಿಜಿಯಂ ಪ್ರಮುಖ ಹೆಸರುಗಳನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರಲ್ಲಿ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಚ್. ಜಿ ರಮೇಶ್ ಮತ್ತು ಅಬ್ದುಲ್ ನಜೀರ್ ಅವರ ಹೆಸರೂ ಇದೆ.

ಮುಖ್ಯ ನ್ಯಾಯಮೂರ್ತಿ ಜೆ. ಎಸ್ ಖೇಹರ್ ನೇತೃತ್ವದ ಸುಪ್ರಿಂ ಕೋರ್ಟಿನ ಕೊಲಿಜಿಯಂ, 9 ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹೆಸರುಗಳನ್ನು ಶಿಫಾರಸ್ಸು ಮಾಡಿದೆ. ಮಾತ್ರವಲ್ಲದೆ 6 ನ್ಯಾಯಾಧೀಶರಿಗೆ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಿದೆ.[ಶಶಿಕಲಾ ಪ್ರಮಾಣ ವಚನಕ್ಕೆ ತಡೆ ಕೋರಿ ಸುಪ್ರಿಂ ಕೋರ್ಟಿಗೆ ಮೊರೆ]

Judiciary Transfer: 2 Karnataka HC judges may get promotion

ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಎಚ್.ಜಿ ರಮೇಶ್ ರನ್ನು ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿ ಶಿಫಾರಸ್ಸು ಮಾಡಲಾಗಿದೆ. ಮದ್ರಾಸ್ ಹೈಕೋರ್ಟಿನ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಕೌಲ್ ಸುಪ್ರಿಂ ಕೋರ್ಟಿನ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದುತ್ತಿರುವುದರಿಂದ ಖಾಲಿಯಾಗಲಿರುವ ಜಾಗಕ್ಕೆ ನ್ಯಾ. ರಮೇಶ್ ರನ್ನು ನೇಮಕ ಮಾಡಿ ಶಿಫಾರಸ್ಸು ಕಳುಹಿಸಲಾಗಿದೆ.[ಫೇಸ್ ಬುಕ್ ಪೋಸ್ಟ್: ಬೆಂಗಳೂರು ಪೊಲೀಸರಿಗೆ ಸುಪ್ರೀಂ ಚಾಟಿ]

ಇನ್ನು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಅಬ್ದುಲ್ ನಜೀರ್ ಸುಪ್ರಿಂ ಕೊರ್ಟ್ ನ್ಯಾಯಮೂರ್ತಿಯಾಗಿ ನೇರ ಪದೋನ್ನತಿ ಹೊಂದಲಿದ್ದಾರೆ. ಕರಾವಳಿ ಮೂಲದ ಜಸ್ಟಿಸ್ ನಜೀರ್ ರನ್ನು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಇವರ ಜತೆಗೆ ಉಳಿದ ಐವರ ಹೆಸರನ್ನೂ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court collegium headed by Chief Justice of India J S Khehar has recommended nine names and six names to the government respectively for taking over as regular High Court chief justices and Supreme Court judges. Two Karnataka High Court judges namely Justice H G Rahesh and Justice Abdul Nazeer are also in the list.
Please Wait while comments are loading...