ನ್ಯಾಯಾಧೀಶರ ವರ್ಗಾವಣೆ: ಸಲ್ಮಾನ್ ಖಾನ್ ಜಾಮೀನು ಕಗ್ಗಂಟು?
ಬೆಂಗಳೂರು, ಏಪ್ರಿಲ್ 07: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಈ ವರ್ಗಾವಣೆ ಆದೇಶ ತಕ್ಷಣದಿಂದಲೇ ಜಾರಿಯಾಗುತ್ತದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ. ಇದರಿಂದ ಸಲ್ಮಾನ್ ಖಾನ್‌ಗೆ ಇಂದು ಜಾಮೀನು ಸಿಗುತ್ತದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ.
ಜೋಧಪುರ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರನ್ನು ಜೋಧಪುರದಿಂದ ಸಿರೋಹ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಸಲ್ಮಾನ್ ಖಾನ್‌ಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ದೇವ್ ಕುಮಾರ್ ಖತ್ರಿ ಅವರೂ ಕೂಡ ವರ್ಗಾವಣೆಯಾಗಿದ್ದಾರೆ.

ರವೀಂದ್ರ ಕುಮಾರ್ ಜೋಶಿ ಅವರ ಸ್ಥಾನಕ್ಕೆ ನ್ಯಾಯಾಧೀಶ ಚಂದ್ರ ಕುಮಾರ್ ಸೊಂಗಾರಾ ಅವರನ್ನು ನೇಮಿಸಲಾಗಿದೆ.
ಒಟ್ಟು 87 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ರಾಜಸ್ಥಾನದಲ್ಲಿ ಪ್ರತಿ ಏಪ್ರಿಲ್‌ನ ಆರಂಭದಲ್ಲಿ ಈ ರೀತಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ.
ನಟ ಸಲ್ಮಾನ್ ಖಾನ್ ಎರಡು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ತಮ್ಮ ತಾಯಿ ಸಲ್ಮಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲು ಸಲ್ಮಾನ್ ಖಾನ್‌ಗೆ ಅವಕಾಶ ನೀಡಲಾಗುವುದು ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.
ಶುಕ್ರವಾರ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ, ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದ್ದರು.












Click it and Unblock the Notifications