ಪತ್ರಕರ್ತ ಚಂದಿರನ್ ಕೊಲೆ ಯತ್ನ ಮತ್ತು ಒಂದು ಮನುಷ್ಯತ್ವದ ಪಾಠ

ಮದುರೈನಲ್ಲಿ ಟಿವಿ ವರದಿಗಾರ ಚಂದಿರನ್ ಎಂಬುವರ ಮೇಲೆ ಮಾದಕವಸ್ತು ಜಾಲದ ಮೂವರು ಚಾಕುವಿನಿಂದ ದಾಳಿ ನಡೆಸಿ, ಕೊಲ್ಲಲು ಯತ್ನಿಸಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಜನರು ನೆರವಾದ ಬಗೆಯನ್ನು ತಿಳಿಯಿರಿ

ಮದುರೈ, ಮಾರ್ಚ್ 2: ಆ ಪತ್ರಕರ್ತರ ಹೆಸರು ಚಂದಿರನ್. ಮದುರೈನಲ್ಲಿ ಟಿವಿ ವರದಿಗಾರರು. ಮಾದಕವಸ್ತು ಜಾಲದಲ್ಲಿ ತೊಡಗಿಕೊಂಡ ಮೂವರು ಮುಲ್ಲೈ ನಗರದ ಮಾರುಕಟ್ಟೆ ಬಳಿ ಚಂದಿರನ್ ಅವರನ್ನು ಚಾಕುವಿನಿಂದ ತಿವಿದರು. ಆರೋಪಿಗಳಿಗೆ ಯಾಕಿಷ್ಟು ಕೋಪ ಅಂತ ನೋಡಿದರೆ, ಪತ್ರಕರ್ತ ಚಂದಿರನ್ ಮಾದಕವಸ್ತು ಜಾಲದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಗುಮಾನಿ ಅವರದು.

ಬೆಳಗ್ಗೆ 7 ಗಂಟೆ ಸುಮಾರಿಗೆ ಹಾಲು ತರಲು ತೆರಳಿದ್ದವರ ಮೇಲೆ ಮೂವರು ಸೇರಿ ದಾಳಿ ನಡೆಸಿ, ಹಲವು ಬಾರಿ ಚಾಕುವಿನಿಂದ ತಿವಿದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚಂದಿರನ್ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯಕ್ಕೆ ಅವರಿಗೆ ಮೀನಾಕ್ಷಿ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.[ಆತ ಸುಟ್ಟು ಕರಕಲಾಗುತ್ತಿದ್ದರೆ ಜನ ವಿಡಿಯೋ ತೆಗೆಯುತ್ತಿದ್ದರು!]

Journalist Chandiran

ಇದು ಅವರ ಮೇಲೆ ನಡೆದ ಮೊದಲ ದಾಳಿಯೇನಲ್ಲ. ನೆರೆಮನೆಯವರೊಬ್ಬರು ದೂರು ನೀಡಿದರೆ, ಆಗಲೂ ಚಂದಿರನ್ ಮೇಲೆ ಅನುಮಾನಗೊಂಡು ಈ ಪತ್ರಕರ್ತ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಲಾಗಿತ್ತು. ಚಂದಿರನ್ ಮನೆಯ ಏಸಿಗೆ ಬೆಂಕಿ ಹೊತ್ತಿಸಿ, ಅವರ ಮಗನ ಮೇಲೆ ಹಲ್ಲೆ ನಡೆಸಿದ್ದರು.

ಆ ನಂತರ ಚಂದಿರನ್ ಪೊಲೀಸರಿಗೆ ದೂರು ನೀಡಿದ್ದರು. ದಾಳಿಕೋರರನ್ನು ಬಂಧಿಸಿದರೂ ಎರಡೇ ದಿನದಲ್ಲಿ ಅವರು ಆಚೆ ಬಂದಿದ್ದರು. ಅದು ಹೇಗೆ ಬಂದರು ಎಂದು ಚಂದಿರನ್ ಅವರ ಮಗ ರತೀಶ್ ಅಚ್ಚರಿಪಡುತ್ತಾನೆ. ಆದರೆ ಸದ್ಯದ ಪರಿಸ್ಥಿತಿ ಬಗ್ಗೆ ಹೇಳಬೇಕು. ಗಾಯಾಳು ವರದಿಗಾರರ ಚಿಕಿತ್ಸೆಗೆ ನೆರವು ಬೇಕಾಗಿದೆ ಎಂದು ದ ನ್ಯೂಸ್ ಮಿನಟ್ ನ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದರು.

ಚಂದಿರನ್ ಚಿಕಿತ್ಸೆಗೆ ಎಪ್ಪತ್ತು ಸಾವಿರ ರುಪಾಯಿ ನೆರವು ಜನರಿಂದಲೇ ದೊರೆತಿದೆ. ಚಿಕಿತ್ಸೆಗೆ ಅಗತ್ಯ ಇದ್ದಷ್ಟು ಹಣದ ನೆರವು ಸಿಕ್ಕಿದೆ ಎಂದು ಧನ್ಯಾ ಮತ್ತೆ ಟ್ವೀಟ್ ಮಾಡಿದ್ದಾರೆ. ಇಷ್ಟೆಲ್ಲ ಏಕೆ ತಿಳಿಸಬೇಕಾಯಿತು ಅಂದರೆ, ಇಲ್ಲಿ ಕೋಪಗೊಂಡು ಚಾಕುವಿನಿಂದ ಕೊಲ್ಲುವ ಜನರು ಇರುವಂತೆಯೇ, ನೆರವು ಬೇಕು ಎಂದು ಕೈ ಚಾಚಿದಾಗ ತಮ್ಮಿಂದಾದ ಅನುಕೂಲ ಮಾಡುವವರೂ ಇದ್ದಾರೆ. ಇಂಥವರ ಸಂತತಿ ಸಾವಿರವಾಗಲಿ.[ಮೋರಿಯೇ ಅರಮನೆ, ಎಂಜಲೆಲೆಯೇ ಮೃಷ್ಟಾನ್ನ ಭೋಜನ!]

ಚಂದಿರನ್ ಹಾಗೂ ಇಂಥ ಪತ್ರಕರ್ತರ ಸ್ಥೈರ್ಯ ಉಳಿಯುವುದೇ ಸಂದಿಗ್ಧ ಸಂದರ್ಭದಲ್ಲಿ ಸಮಾಜವು ಹೇಗೆ ಸ್ಪಂದಿಸಿತು ಎಂಬುದರ ಮೇಲೆ. ಸಮಾಜ ತನ್ನ ಜವಾಬ್ದಾರಿ ನಿರ್ವಹಿಸಿದೆ. ಚಂದಿರನ್ ಅವರನ್ನು ಕೊಲ್ಲಲು ಯತ್ನಿಸಿದ ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ಬಂಧಿಸಲಿ, ಸರಿಯಾದ ಶಿಕ್ಷೆಯಾಗುವಂತೆ ಮಾಡಲಿ ಎಂಬುದಷ್ಟೇ ಸದ್ಯದ ಒತ್ತಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+