ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಎರಡು ರಾಜ್ಯಗಳಲ್ಲಿ ಅತಿ ಹೆಚ್ಚು ವ್ಯರ್ಥವಾಗುತ್ತಿದೆ ಕೊರೊನಾ ಲಸಿಕೆ

|
Google Oneindia Kannada News

ನವದೆಹಲಿ, ಮೇ 26: ದೇಶಾದ್ಯಂತ ಈಗ ಕೊರೊನಾ ವೈರಸ್ ಲಸಿಕೆಯ ಕೊರತೆ ಹೆಚ್ಚಾಗುತ್ತಿದೆ. ಇಂತಾ ಸಂದರ್ಭದಲ್ಲಿ ಕೆಲ ರಾಜ್ಯಗಳಲ್ಲಿ ಕೊರೊನಾ ಲಸಿಕೆ ವ್ಯರ್ಥವಾಗುತ್ತಿರುವ ಪ್ರಮಾಣ ಆಘಾತಕಾರಿಯಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಇಂದು ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.

ಈ ಅಂಕಿಅಂಶಗಳ ಪ್ರಕಾರ ಜಾರ್ಖಂಡ್ ಮತ್ತು ಛತ್ತೀಸ್‌ಘರ್ ರಾಜ್ಯಗಳು ಅತಿ ಹೆಚ್ಚು ಲಸಿಕೆಯನ್ನು ವ್ಯರ್ಥಗೊಳಿಸುತ್ತಿರುವ ಎರಡು ರಾಜ್ಯಗಳಾಗಿದೆ. ಈ ಎರಡು ರಾಜ್ಯಗಳಲ್ಲಿ ಪ್ರತಿ ಮೂರು ಲಸಿಕೆಯಲ್ಲಿ ಒಂದು ಲಸಿಕೆ ವ್ಯರ್ಥವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಲ್ಲಿ ಬಹಿರಂಗವಾಗಿದೆ. ರಾಷ್ಟ್ರಮಟ್ಟದಲ್ಲಿ ಶೇಕಡಾ 6.3ರಷ್ಟು ಲಸಿಕೆ ವ್ಯರ್ಥವಾಗಿದೆ.

ಶೇಕಡಾ ಒಂದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ವ್ಯರ್ಥವಾಗುವಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಪದೇ ಪದೇ ಒತ್ತಾಯಿಸಲಾಗಿದೆ. ಆದರೆ ಜಾರ್ಖಂಡ್ (37.3%), ಛತ್ತೀಸ್‌ಘರ್ (30.2%), ತಮಿಳುನಾಡು (15.5%), ಜಮ್ಮು ಮತ್ತು ಕಾಶ್ಮೀರ (10.8%) ಮತ್ತು ಮಧ್ಯಪ್ರದೇಶ (10.7) %) ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಲಸಿಕೆ ವ್ಯರ್ಥವಾಗುತ್ತಿದೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Jharkhand, Chhattisgarh states are wasting 1 In 3 Doses: Centre

ಆದರೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಈ ಅಂಕಿಅಂಶಗಳನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಳ್ಳಿ ಹಾಕಿದ್ದಾರೆ. ರಾಜ್ಯದಲ್ಲಿ ಈಗ ಇರುವ ಲಸಿಕೆಯ ಡೋಸ್‌ಗಳ ಲಭ್ಯತೆಯ ಪ್ರಕಾರ ರಾಜ್ಯದಲ್ಲಿ ಲಸಿಕೆ ವ್ಯರ್ಥವಾಗುತ್ತಿರುವ ಪ್ರಮಾಣ ಕೇವಲ 4.65%. ಕೇಂದ್ರ ಸರ್ಕಾರದ Co-Win ಸರ್ವರ್‌ನಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಸಂಪೂರ್ಣ ವಿವರಗಳು ಅಪ್‌ಡೇಟ್ ಆಗಿಲ್ಲ. ಆ ಕಾರ್ಯಗಳು ನಡೆಯುತ್ತಿದೆ" ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಲಸಿಕೆಗಳು ವ್ಯರ್ಥವಾಗಲು ಕಾರಣ ಏನೆಂಬುದನ್ನು ಕೂಡ ಆರೋಗ್ಯ ಇಲಾಖೆ ಹೇಳಿದೆ. ಲಸಿಕೆಯ ಅವಧಿ ಮುಗಿದಿರುವುದು, ವಿಪರೀತ ಉಷ್ಣಾಂಶ ಅಥವಾ ಅತಿಯಾದ ಚಳಿ, ಕಳ್ಳತನ, ಬಾಟಲ್‌ನಲ್ಲಿ ಲಸಿಕೆ ಹಾಳಾದಾಗ, ಸಂಪೂರ್ಣವಾಗಿ ಡೋಸ್‌ಗೆ ಚುಚ್ಚದ ಕಾರಣದಿಂದಾಗಿ, ಲಸಿಕಾ ಕೇಂದ್ರಗಳಿಗೆ ಜನರು ತಡವಾಗಿ ತಲುಪುವ ಕಾರಣ ಮತ್ತು ನೀರಿಗೆ ಬಿದ್ದು ಲಸಿಕೆಗಳು ವ್ಯರ್ಥವಾಗುತ್ತಿವೆ ಎಂದು ತಿಳಿಸಿದೆ.

English summary
Jharkhand, Chhattisgarh states are wasting one in every three vaccine Doses said health ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X