Jharkhand Assembly Polls 2024: ಬಿಜೆಪಿ ಸೇರಿದ ಮಾನಸ್ ಸಿನ್ಹಾ
Jharkhand Assembly Election 2024: ಈಗಾಗಲೇ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಲ್ಲದೆ, ಈಗಾಗಲೇ ಪಕ್ಷಾಂತರ ಆಟಗಳು ಕೂಡ ಆರಂಭವಾಗಿದೆ. ಹಾಗೆಯೇ ಇಂದು (ಅಕ್ಟೋಬರ್ 28) ಜಾರ್ಖಂಡ್ ಕಾಂಗ್ರೆಸ್‌ನ ಮಾಜಿ ಕಾರ್ಯಾಧ್ಯಕ್ಷ ಮಾನಸ್ ಸಿನ್ಹಾ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾನಸ್ ಸಿನ್ಹಾ ಅವರನ್ನು ಜಾರ್ಖಂಡ್ ಬಿಜೆಪಿ ಕಾರ್ಯಾಧ್ಯಕ್ಷ ರವೀಂದ್ರ ರೈ ಮತ್ತು ಜಾರ್ಖಂಡ್ ವಿಧಾನಸಭೆಗೆ ಬಿಜೆಪಿ ಸಹ ಉಸ್ತುವಾರಿಯಾಗಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಪಕ್ಷದ ಬಾವುಟ ನೀಡುವ ಮೂಲಕ ಸ್ವಾಗತಿಸಿದರು.

ಬಳಿಕ ಮಾತನಾಡಿದ ಮಾನಸ್ ಸಿನ್ಹಾ ಅವರು, "ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಆದರೆ, ನಮ್ಮಂತಹ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವುದೇ ಗೌರವ ಇಲ್ಲದಂತಾಗಿತ್ತು. ಆದ್ದರಿಂದ ನಾನು ಬಿಜೆಪಿಗೆ ಸೇರ್ಪಡೆ ಆಗಲು ನಿರ್ಧರಿಸಿದೆ," ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ ಅವರು, "ಪಕ್ಷಕ್ಕೆ ಹಣಕಾಸಿನ ನೆರವು ನೀಡುವವರಿಗೆ, ಪ್ರತಿಷ್ಠಿತ ಕುಟುಂಬಗಳಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದನೆ ಮಾಡುವವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ನೀಡುತ್ತದೆ," ಎಂದು ಗಮಭೀರ ಆರೋ ಮಾಡಿದರು.
ಇನ್ನು 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ.
ಬಿಜೆಪಿಗೇ ಗೆಲುವು: ಈಗಾಗಲೇ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದೀಗ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ, ರಾಜ್ಯದಲ್ಲಿ ಜೆಜೆಎಂ, ಕಾಂಗ್ರೆಸ್ ಬಿಜೆಪಿಗೆ ಪ್ರತಿಸ್ಪರ್ಧಿಯಾಗಿವೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೃಷ್ಟಿಯಿಂದ ಜಾರ್ಖಂಡ್ ಕಠಿಣ ರಾಜ್ಯವಾಗಿದೆ. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭರವಸೆಯನ್ನು ಪಕ್ಷ ಹೊಂದಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡುವ ಮೂಲಕ ಗಮನ ಸೆಳೆದರು.
ಮಾಧ್ಯಮದವರೊಂರಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಗಾಗಿ ನಾನು ಕಾರ್ಖಂಡ್‌ನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ನವೆಂಬರ್ 13ರಂದು ಅಸ್ಸಾಂನಲ್ಲಿ ನಡೆಯಲಿರುವ ಉಪಚುನಾವಣೆಗಳ ಕಡೆಗೆ ಗಮನಹರಿಸಲು ಸಾಧ್ಯ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಬಿಜೆಪಿ ದೃಷ್ಟಿಯಿಂದ ಜಾರ್ಖಂಡ್ ಕಠಿಣ ರಾಜ್ಯವಾಗಿದೆ. ಆದರೆ, ಉತ್ತಮ ಫಲಿತಾಂಶ ಸಿಗುವ ಭರವಸೆ ಇದೆ ಎಂದು ಹೇಳಿದರು.
ಇನ್ನೂ ಈಗಾಗಲೇ ಜಾರ್ಖಂಡ್‌ನಲ್ಲಿ ನಡೆಸಿದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, 1.5 ಲಕ್ಷ ಉದ್ಯೋಗ ಸೃಷ್ಟಿಸುವುಸಾದಾಗಿ ಹಿಮಂತ ಬಿಸ್ವ ಅವರು ಭರವಸೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ಆಕ್ರೋಶ: ಮತ್ತೊಂದೆಡೆ ಇಲ್ಲಿನ ಮುಖ್ಯಮಂತ್ರಿ ಅವರ ಎದರು ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಅಭ್ಯರ್ಥಿಗಳೇ ಇಲ್ಲ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಮನೋಜ್ ಪಾಂಡೆ ಹೇಳಿದರು. ಸಿಎಂ ಸೊರೇನ್ ಕ್ಷೇತ್ರ ಆಗಿರುವ ಬರ್ಹೈತ್‌ನಲ್ಲಿ ಅಭ್ಯರ್ಥಿಗಳೇ ಇಲ್ಲದ ಹಿನ್ನೆಲೆ ಬಿಜೆಪಿಯು ಜೆಜೆಎಂ ನಾಯಕರಿಗೆ 5,00,00,000 ರೂಪಾಯಿ ಆಮಿಷ ಒಡುತ್ತಿದೆ ಎಂದು ಆರೋಪ ಮಾಡಿದರು.
"ಬಿಜೆಪಿಯವರಿಗೆ ಇಲ್ಲಿಯವರೆಗೂ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ. ಆದ್ದರಿಂದ ಹುಡುಕಾಟ ಮುಂದುವರೆಸಿದ್ದಾರೆ. ಪ್ಯಾಕೇಜ್ ಘೋಷಸಿ ನಮ್ಮ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ. ರಾಜಕೀಯವಾಗಿ ಬಲಿಯಾಗಲು ಯಾರು ಬಯಸುತ್ತಾರೆ? ಎಂದು ಪ್ರಶ್ನಿಸುವ ಮೂಲಕ ಮುಗುಳ್ನಕ್ಕಿದ್ದಾರೆ.
ತಮ್ಮ ಪಕ್ಷಕ್ಕೆ 100-150 ಮತಗಳೂ ಬರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದ್ದರಿಂದ ಬಿಜೆಪಿಯ ಯಾವ ಅಭ್ಯರ್ಥಿಯೂ ಸಿಎಂ ಸೊರೇನ್ ವಿರುದ್ಧ ಸರ್ಧೆಗೊಳಿಯಲು ಮುಂದಾಗಿತ್ತಿಲ್ಲ ಎಂದರು. ಇನ್ನು ಒಂದು ವೇಳೆ ಬಿಜೆಪಿಯ ಅಭ್ಯರ್ಥಿ ಕೇವಲ 250 ಮತಗಳನ್ನು ಪಡೆದರೆ, ಎಷ್ಟು ಅವಮಾನ ಆಗಬಹುದು. ಆದ್ದರಿಂದ ಅವರು ಈ ಕ್ಷೇತ್ರದಿಂದ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆಯೋ ಕಾದುನೋಡಬೇಕಿದೆ ಎಂದಿ ಹೇಳಿದರು.
ಸೊರೇನ್ ಅವರು ಬರ್ಹೈತ್‌ನಲ್ಲಿ ಮತ್ತು ಅವರ ಪತ್ನಿ, ಶಾಸಕಿ ಕಲ್ಪನಾ ಅವರು ಗಾಂಡೇಯ್‌ನಲ್ಲಿ ಅಕ್ಟೋಬರ್ 24ರಂದು ನಾಮಪತ್ರ ಸಲ್ಲಿಸಿದ್ದಾರೆ. ಬರ್ಹೈತ್ ಕ್ಷೇತ್ರಗಳನ್ನೊಳಗೊಂಡ ಸಂಥಲ್ ಪತರಗಣ ಪ್ರದೇಶವು ಜೆಎಂಎಂ ಪಕ್ಷದ ಭದ್ರಕೋಟೆಯಾಗಿದೆ ಎಂದು ಹಳಿದರು.












Click it and Unblock the Notifications