ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಹತ್ಯೆ ಹೆಸರಲ್ಲಿಕೊಲೆ: ಜಾರ್ಖಂಡ್ ನಲ್ಲಿ 11 ಜನರಿಗೆ ಜೀವಾವಧಿ ಶಿಕ್ಷೆ

By ವಿಕಾಸ್ ನಂಜಪ್ಪ
|
Google Oneindia Kannada News

ರಾಮಗರ್, ಮಾರ್ಚ್ 22: ಜಾರ್ಖಂಡ್ ನ ರಾಮಗರ್ ನಲ್ಲಿ ಕಳೆದ ಒಂಭತ್ತು ತಿಂಗಳಿಗೂ ಮೊದಲು ಗೋ ರಕ್ಷಣೆಯ ಹೆಸರಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ರಾಮಗರ್ ತ್ವರಿತ ನ್ಯಾಯಾಲಯ ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

2017 ಜೂನ್ 29 ರಂದು ಅಲಿಮುದ್ದಿನ್ ಅನ್ಸಾರಿ ಎಂಬ ಮಾಂಸ ವ್ಯಾಪಾರಿಯನ್ನು ಗೋಹತ್ಯೆಯ ಆರೋಪದ ಮೇಲೆ ಸಾರ್ವಜನಿಕವಾಗಿ ಕೊಲೆ ಮಾಡಲಾಗಿತ್ತು. ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಪ್ರಧಾನಿ ಮೋದಿ ಹೇಳಿದ್ದರೂ ಆ ಮಾತಿಗೆ ಬೆಲೆ ಇರಲಿಲ್ಲ.

ದೇಶದಲ್ಲೇ ಮೊದಲ ತೀರ್ಪು: ಗೋರಕ್ಷಣೆ ಹೆಸರಲ್ಲಿ ಹತ್ಯೆಗೈದವರಿಗೆ ಶಿಕ್ಷೆ ದೇಶದಲ್ಲೇ ಮೊದಲ ತೀರ್ಪು: ಗೋರಕ್ಷಣೆ ಹೆಸರಲ್ಲಿ ಹತ್ಯೆಗೈದವರಿಗೆ ಶಿಕ್ಷೆ

ಈ ಕುರಿತು ವಿಚಾರಣೆ ನಡೆಸಿದ ರಾಮಗರ್ ತ್ವರಿತ ನ್ಯಾಯಾಲಯ, 12 ಆರೋಪಿಗಳಲ್ಲಿ 11 ಜನರನ್ನು ದೋಷಿ ಎಂದು ಪರಿಗಣಿಸಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥದೊಂದು ತೀರ್ಪು ಪ್ರಕಟಗೊಂಡಿದೆ.

Jharkhand: 11 get lifer in case relating to lynching over cow

ದೋಷಿಗಳಾದ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ನಿತ್ಯಾನಂದ ಮಹಾತೊ, ವಿಕಿ ಸಾ, ಸಿಕಂದರ್ ರಾಮ್, ವಿಕ್ರಮ್ ಪ್ರಸಾದ್, ರಾಜು ಕುಮಾರ್, ರೋಹಿತ್ ಠಾಕೂರ್, ಕಪಿಲ್ ಠಾಕೂರ್ ಮತ್ತು ಉತ್ತಮ್ ಕುಮಾರ್ ಎಂದು ಗುರುತಿಸಲಾಗಿದ್ದು. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302, 147, 148, 149, 427 ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.

English summary
A court has sentenced 11 persons to life imprisonment after they were found guilty of beating to death a person in Jharkhand for carrying beef. Alimuddin Ansari, 55 was beaten to death by a mob led by members of a gau raksha samithi.In all there were 12 accused in the case. The court convicted 11 of them on March 16. However in the case of the 12th accused, the court is yet to decide as it has been claimed that he was a minor at the time of the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X