ನೇಪಾಳಿ ಹುಡುಗನ ಪುನರ್ಮಿಲನ, ಮೋದಿ ಹೇಳಿದ್ದು ಸುಳ್ಳೆ?

ನವದೆಹಲಿ, ಆ.6: 'ಅದೊಂದು ಅಪರೂಪದ ಕ್ಷಣ. 16 ವರ್ಷಗಳ ನಂತರ ಮನೆ ಬಿಟ್ಟು ಹೋಗಿದ್ದ ಪುತ್ರನನ್ನು ಕಂಡು ಭಾವುಕರಾದ ನೇಪಾಳಿ ತಂದೆ-ತಾಯಿಗಳು ಹಾಗೂ ಅವರ ಕುಟುಂಬ. ಹೆತ್ತವರನ್ನು ಕಂಡು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಕುಣಿದು ಕುಪ್ಪಳಿಸಿದ ಮಗ. ಇಂಥ ಅಪರೂಪದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕಾರಣರಾಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ' ಎಂದೆಲ್ಲಾ ಮಾಧ್ಯಮಗಳಿಂದ ಹೊಗಳಿಸಿಕೊಂಡ ಮೋದಿ ಅವರು ಹೇಳಿದ್ದು ಸುಳ್ಳು ಎಂದು ಫೇಸ್ ಬುಕ್ ಸಾರುತ್ತಿದೆ.

ಕಳೆದ 16 ವರ್ಷಗಳಿಂದ ತಮ್ಮ ಜತೆಗಿದ್ದ ನೇಪಾಳದ ಜೀತ್ ಬಹದೂರ್ ಸದುಮಾಗರ್ ಎಂಬ ಅನಾಥ ಯುವಕನನ್ನು ಇತ್ತೀಚಿನ ನೇಪಾಳ ಪ್ರವಾಸದ ವೇಳೆ ಅವನ ಹೆತ್ತವರಿಗೊಪ್ಪಿಸಿದ ಪ್ರಧಾನಿ ನರೇಂದ್ರ ಮೋದಿಯವರ ಮಾನವೀಯತೆಯ ಪರಮಾವಧಿ, ಅವರ ಹೃದಯ ವೈಶಾಲ್ಯತೆಗಳನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು.


ಅದರೆ, ಜೀತ್ ಬಹದೂರ್ 2012ರಲ್ಲೇ ತನ್ನ ಕುಟುಂಬವನ್ನು ಕಾಣಲು ನೇಪಾಳಕ್ಕೆ ಬಂದಿದ್ದ. ಜೊತೆಯಲ್ಲಿ ಫೋಟೊ ತೆಗೆಸಿಕೊಂಡಿದ್ದ ಎಂಬುದನ್ನು ಜೀತ್ ಬಹದೂರ್ ಫೇಸ್ ಬುಕ್ ಪೋಸ್ಟ್ ಹೇಳುತ್ತಿದೆ. [ಹೆತ್ತವರ ಜತೆ ಮೋದಿ 'ಪುತ್ರ' ನ ಪುನರ್ಮಿಲನ]

ಪ್ರಧಾನಿಯೇಕೆ ಇಂಥ ಸುಳ್ಳಿನ ನಾಟಕ ಆಡಿದರು. ನೇಪಾಳ ಸರ್ಕಾರದ ಮನಗೆಲ್ಲಲೆಂದೇ ಹೀಗೆ ಮಾಡಿದರೇ? ದೇಶದ ಜನತೆಯ ಕಣ್ಣಲ್ಲಿ ತಮ್ಮ ಮಾನವೀಯ ಹೃದಯದ ಆರ್ದ್ರತೆಯನ್ನು ಪ್ರದರ್ಶಿಸಲೆಂದೇ? ಅಥವಾ ಅವರಿಂದ ಜೀತ್ ಈ ವಿಷಯ ಮುಚ್ಚಿಟ್ಟನೇ? ಜೀತ್ ಕುಟುಂಬ ಕಾಣಲು ಮೋದಿ ಬಂದಿದ್ದಾರೆ ಎಂದಿದ್ದರೆ ಸಾಕಿತ್ತಲ್ಲವೇ? ಇಂಥ ಹಲವು ಪ್ರಶ್ನೆಗಳು ಕಾಡತೊಡಗಿವೆ.

ಕುಟುಂಬಕ್ಕೂ ಬಹಾದೂರ್‌ಗೂ ಸಂಪರ್ಕವಿತ್ತು

ಕುಟುಂಬಕ್ಕೂ ಬಹಾದೂರ್‌ಗೂ ಸಂಪರ್ಕವಿತ್ತು

ಜೀತ್ ಬಹದ್ದೂರ್ 2012ರಲ್ಲಿ ನೇಪಾಳಕ್ಕೆ ಹೋಗಿ ತನ್ನ ಕುಟುಂಬದವರೊಂದಿಗೆ ಕೆಲ ದಿನಗಳಿದ್ದು ಬಂದಿದ್ದ! ಕುಟುಂಬಕ್ಕೂ ಬಹಾದೂರ್‌ಗೂ ಸಂಪರ್ಕವಿತ್ತು. ಈ ಘಟನೆಗೆ ಸಾಕ್ಷಿಯಾಗಿ 2012ರ ಜೂನ್ 19ರಂದು ಬಹಾದೂರ್ ಕಳುಹಿಸಿದ್ದ ಟ್ವಿಟರ್‌ನಲ್ಲಿರುವ ಸಂದೇಶ 'ಹೇ ಫ್ರೈ ಟು ಡೆ ಐ ಯಾವ್ ವೆರಿ ಹ್ಯಾಪಿ, ಬಿಕಾಸ್ ಐ ಯಾಮ್, ಮೈ ಹೋಮ್-ಸಿಕ್ (ನಾನೀಗ ತುಂಬಾ ಸಂತಸದಿಂದಿದ್ದೇನೆ. ಏಕೆಂದರೆ ನಾನು ನನ್ನ ಮನೆ (ನೇಪಾಳ) ಕಡೆಯ ಚಿಂತೆಯಿಂದ ಬಾಧಿತನಾಗಿದ್ದೆ). ಎಂದಿದ್ದ

ಇದು ಜೀತ್ ಬಹದ್ದೂರ್ ಅಂದು ಫೇಸ್ ಬುಕ್ ನಲ್ಲಿ ಹಾಕಿರುವ ಚಿತ್ರ.

ಚಿತ್ರದಲ್ಲಿ ನೇಪಾಳದಲ್ಲಿರುವ ಜೀತ್ ಮನೆ

ಚಿತ್ರದಲ್ಲಿ ನೇಪಾಳದಲ್ಲಿರುವ ಜೀತ್ ಮನೆ

10 ವರ್ಷದ ಬಾಲಕ ನೇಪಾಳದಿಂದ ತನ್ನ ಅಣ್ಣನ ಜತೆ ಕೆಲಸಕ್ಕಾಗಿ ಹುಡುಕುತ್ತ ಗುಜರಾತಿಗೆ ಬಂದದ್ದು, ಅವನು ಮೋದಿಯವರ ಗಮನಕ್ಕೆ ಬಂದದ್ದು, ಮೋದಿ ಅವನನ್ನು ಓದಿಸಿದ್ದು, ಸದ್ಯ ಅವನು ಬಿಬಿಎ ವಿದ್ಯಾರ್ಥಿಯಾಗಿರುವುದು, ಗುಜರಾತಿ ಕಲಿಯುತ್ತಿರುವುದು, ಅವನ ಕಾಲಲ್ಲಿ ಆರು ಬೆರಳಿರುವುದು... ಮುಂತಾದ ಕಥೆಗಳೆಲ್ಲ ಇರುವಂಥವು ಮತ್ತು ಆ ಬಗ್ಗೆ ಜನ ಮಾಧ್ಯಮಗಳಲ್ಲಿ ಕೇಳಿ, ಓದಿ ತಿಳಿದಿದ್ದಾರೆ. ಈ ಬಗ್ಗೆ ಮೋದಿ ಅವರು ಕೂಡಾ ಹೇಳಿದ್ದರು.

16 ವರ್ಷದ ಬಳಿಕ ಹೆತ್ತವರ ಮಡಿಲಿಗೆ ಹಾಕುತ್ತಿದ್ದೇನೆ

16 ವರ್ಷದ ಬಳಿಕ ಹೆತ್ತವರ ಮಡಿಲಿಗೆ ಹಾಕುತ್ತಿದ್ದೇನೆ

16 ವರ್ಷದ ಬಳಿಕ ಹೆತ್ತವರ ಮಡಿಲಿಗೆ ಹಾಕುತ್ತಿದ್ದೇನೆ. ನನ್ನ ನೇಪಾಳ ಪ್ರವಾಸದ ವೇಳೆ ಈ ಕುಟುಂಬದ ಪುನರ್ಮಿಲನವಾಗಲಿದೆ. ಇದೇ ನನ್ನ ನೇಪಾಳ ಭೇಟಿಯ ಹಿಂದಿರುವ ವೈಶಿಷ್ಟ್ಯ ಎಂದೆಲ್ಲ ಮೋದಿಯವರು ಹೇಳಿದ್ದರು. ಅದರಂತೆ ಕುಟುಂಬವನ್ನು ಭೇಟಿ ಮಾಡಿ ಉಡುಗೊರೆ ನೀಡಿದರು.

ಆ ಕಾತುರ, ಭಾವುಕತೆ ಎಲ್ಲವೂ ಪೂರ್ವ ನಿಯೋಜಿತವೇ?

ಆ ಕಾತುರ, ಭಾವುಕತೆ ಎಲ್ಲವೂ ಪೂರ್ವ ನಿಯೋಜಿತವೇ?

ನೇಪಾಳದ ಪೂರ್ವ ಭಾಗದಲ್ಲಿರುವ ನವಲ್ ಪರಾಸಯ್ ಜಿಲ್ಲೆಯ ಕವಸೋಟಿ ಗ್ರಾಮದಲ್ಲಿ ಬಹದ್ದೂರ್ ಜನಿಸಿದ್ದ ಜೀತ್ ನೋಡಲು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗನ ಬರುವಿಕೆಗಾಗಿ ತಂದೆ-ತಾಯಿಗಳು, ಸಹೋದರ-ಸಹೋದರಿಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+