JEE Examination 2024: ಜೆಇಇ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದೇಗೆ?-ಇಲ್ಲಿವೆ ವಿಧಾನಗಳು
JEE Advanced 2024 Admit Card: ಇಂದು (ಮೇ 17) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್ಡ್ ಪ್ರವೇಶ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಆಕಾಂಕ್ಷಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಹೇಗೆ ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜೆಇಇ ಅಡ್ವಾನ್ಸ್‌ಡ್‌ನ ಅಧಿಕೃತ (jeeadv.ac.in) ವೆಬ್‌ಸೈಟ್‌ನಿಂದ ಜೆಇಇ ಅಡ್ವಾನ್ಸ್ಡ್ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಪ್ರವೇಶ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಈ ಪ್ರವೇಶ ಕಾರ್ಡ್‌ಗಳನ್ನು ಮೇ 26ರವರೆಗೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

ಮೇ 26 ರಂದು IIT ಮದ್ರಾಸ್ JEE ಅಡ್ವಾನ್ಸ್ಡ್ 2024 ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಿದೆ.
ಅಭ್ಯರ್ಥಿಗಳು ತಮ್ಮ ಜೆಇಇ ಅಡ್ವಾನ್ಸ್ಡ್ ಪ್ರವೇಶ ಪತ್ರಗಳನ್ನಯ ಪರೀಕ್ಷೆಯ ದಿನದಂದೇ ಪರೀಕ್ಷಾ ಕೇಂದ್ರಕ್ಕೆ ಸಲ್ಲಿಸಬೇಕಾಗುತ್ತದೆ. ಕಡ್ಡಾಯ ಪೇಪರ್‌ಗಳು, ಪೇಪರ್ 1 ಮತ್ತು 2 ಇರುತ್ತದೆ.
ಪ್ರತಿ ವಿಷಯದಲ್ಲಿ 18ರಂತೆ ಪರೀಕ್ಷೆಯ ಮಾದರಿಯು 54 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಗೆ ಅವಧಿಯು 3 ಗಂಟೆಗಳಿರುತ್ತದೆ. ಎರಡೂ ಪತ್ರಿಕೆಗಳು ಎಲ್ಲಾ ಮೂರು (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ವಿಭಾಗಗಳನ್ನು ಒಳಗೊಂಡಿರುತ್ತದೆ.
ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದೇಗೆ?
* jeeadv.ac.inನಲ್ಲಿ JEE ಅಡ್ವಾನ್ಸ್ಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ಅಭ್ಯರ್ಥಿ ಪೋರ್ಟಲ್ ಪರದೆಯ ಮೇಲೆ ತೋರಿಸುತ್ತದೆ.
* ನಂತರ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
* ಜೆಇಇ ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.
* ಕೊನೆಗೆ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದಾಗಿದೆ.
100% ಫಲಿತಾಂಶ: ರಾಜ್ಯದಲ್ಲಿ ಮೇ 09ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಯಾಗಿದ್ದು, ಆ ವೇಳೆ ಯಾವ್ಯಾವ ಜಿಲ್ಲೆಗಳಿಗೆ ಎಷ್ಟನೇ ಸ್ಥಾನ ಎನ್ನುವ ಮಾಹಿತಿಯನ್ನು ಒದಗಿಸಲಾಗಿತ್ತು. ಆದರೆ ಕಲವು ಶಾಲೆಗಳು ತಲೆಮರೆಕಾಯಿಯಂತೆ ಉತ್ತಮ ಸಾಧನೆ ಮಾಡಿದರೂ ಬೆಳಕಿಗೆ ಬಂದಿಲ್ಲ. ಇದೀಗ ಅಂತಹ ಒಂದೊಂದೇ ಶಾಲೆಗಳ ಸಾಧನೆಗಳು ಹೊರಬರುತ್ತಿವೆ. ಹಾಗೆಯೇ ಈ ಬಾರಿ ಮಂಗಳೂರು ಜಿಲ್ಲೆ ಸುರತ್ಕಲ್‌ನ ಮದ್ಯದಲ್ಲಿರುವ ವಾಲ್ಮೀಕಿ ಆಶ್ರಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಲಿತಾಂಶದಲ್ಲಿ ವಿಶೇಷ ಸಾಧನೆ ಮೂಲಕ ಗುರುತಿಸಿಕೊಂಡಿದೆ.
ವಾಲ್ಮೀಕಿ ಆಶ್ರಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಲಿತಾಂಶದಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದು ಇತಿಹಾಸ ಬರೆದಿದೆ. 2004-05ರಲ್ಲಿ ಹೈಸ್ಕೂಲ್ ಮಾನ್ಯತೆ ಪಡೆದ ನಂತರ ಶಾಲೆಯು ಮೊದಲ ಬಾರಿಗೆ ಈ ಸಾಧನೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications