ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆ ವೇಳಾಪಟ್ಟಿ ಬದಲು
ನವದೆಹಲಿ, ಏಪ್ರಿಲ್ 14; ಜೆಇಇ ಅಡ್ವಾನ್ಸ್ಡ್ 2022ರ ಪರೀಕ್ಷೆಯ ದಿನಾಂಕ ಬದಲಾವಣೆಯಾಗಿದೆ. ಜುಲೈ 3ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಆಗಸ್ಟ್ 28ಕ್ಕೆ ನಡೆಸಲಾಗುತ್ತದೆ.
ಗುರುವಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಾಂಬೆ) ಈ ಕುರಿತು ಪ್ರಕಟಣೆ ಹೊರಡಿಸಿದೆ. ಜೆಇಇ ಅಡ್ವಾನ್ಸ್ಡ್ 2022ರ ಪರೀಕ್ಷೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್ 7 ರಿಂದ 11ರ ತನಕ ನಡೆಯಲಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಅಭ್ಯರ್ಥಿಗಳು ಪರೀಕ್ಷೆ ಶುಲ್ಕಗಳನ್ನು ಆಗಸ್ಟ್ 12ರ ತನಕ ಪಾವತಿ ಮಾಡಬಹುದು. ಆಗಸ್ಟ್ 23 ರಿಂದ 28ರ ತನಕ ಅಭ್ಯರ್ಥಿಗಳು ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಭ್ಯರ್ಥಿಗಳು ಹಾಲ್ ಟಿಕೆಟ್‌ಗಳನ್ನು jeeadv.ac.in ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ಜೆಇಇ ಅಡ್ವಾನ್ಸ್ಡ್ 2022ರ ಪರೀಕ್ಷೆಯು ಬೆಳಗ್ಗೆ ಮತ್ತು ಮಧ್ಯಾಹ್ನ ಎಂದು ಎರಡು ಹಂತಗಳಲ್ಲಿ ನಡೆಯಲಿದೆ.
ಬೆಳಗ್ಗೆ 9 ರಿಂದ 12ರ ತನಕ ಮೊದಲ ಪತ್ರಿಕೆ ಪರೀಕ್ಷೆ ನಡೆಯಲಿದೆ. 1ನೇ ಪರೀಕ್ಷೆ ಮಧ್ಯಾಹ್ನ 2.30 ರಿಂದ 5.30ರ ತನಕ ನಡೆಯಲಿದೆ. ಸೆಪ್ಟೆಂಬರ್ 3ರಂದು ಪರೀಕ್ಷೆಗಳ ಕೀ ಉತ್ತರ ಪ್ರಕಟಿಸಲಾಗುತ್ತದೆ.
ಸೆಪ್ಟೆಂಬರ್ 3 ಮತ್ತು 4 ರಂದು ಅಭ್ಯರ್ಥಿಗಳು ಕೀ ಉತ್ತರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಸೆಪ್ಟೆಂಬರ್ 11ರಂದು ಅಂತಿಮ ಉತ್ತರ ಪ್ರಕಟಿಸಲಾಗುತ್ತದೆ. ಸೆಪ್ಟೆಂಬರ್ 12ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ.











Click it and Unblock the Notifications