ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bharat Jodo Yatra: ಸಮಾರೋಪ ಸಮಾರಂಭಕ್ಕೆ ಜೆಡಿಎಸ್‌ಗೆ ಆಹ್ವಾನ- ಮೈತ್ರಿ ಮುನ್ಸೂಚನೆಯೇ?

|
Google Oneindia Kannada News

ನವದೆಹಲಿ, ಜನವರಿ 14: ಜನವರಿ ಕೊನೆಯ ವಾರ ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಎಚ್‌ ಡಿ ದೇವೇಗೌಡ ನೇತೃತ್ವದ ಜನತಾ ದಳವನ್ನು (ಜಾತ್ಯತೀತ) ಕಾಂಗ್ರೆಸ್‌ ಆಹ್ವಾನಿಸಿದೆ. ಆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಮತ್ತು ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಇನ್ನೂ ಆಹ್ವಾನವನ್ನು ಪಡೆದಿಲ್ಲ ಎಂದು ಹೇಳಿಕೊಂಡಿವೆ.

ಮಹಾತ್ಮಾ ಗಾಂಧಿಯವರ ಹುತಾತ್ಮ ದಿನದಂದು (ಜನವರಿ 31) ರಾಹುಲ್ ಗಾಂಧಿಯವರ 3,570 ಕಿಮೀ ಯಾತ್ರೆ ಕೊನೆಗೊಳ್ಳಲಿದೆ. ಕನ್ಯಾಕುಮಾರಿಯಿಂದ ಆರಂಭಗೊಂಡಿದ್ದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭವು ದೇಶದ 23 ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್‌ ಆಹ್ವಾನಿಸಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಕಾಂಗ್ರೆಸ್ ಬುಧವಾರ ಪ್ರಕಟಿಸಿದ 21 ಪಕ್ಷಗಳ ಪಟ್ಟಿಯಲ್ಲಿ ಜೆಡಿಎಸ್ ಇರಲಿಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ ತನ್ನ ಮಿತ್ರಪಕ್ಷವಾದ JD(S) ಅನ್ನು ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕೈಬಿಟ್ಟಿದ್ದರ ಬಗ್ಗೆ ಹಲವು ಚರ್ಚೆಗಳು ಉದ್ಬವಗೊಂಡಿದ್ದವು. ಈ ಸಂದೇಶ ಕಳುಹಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

JD(S) finally gets invite for Congress’s Srinagar Bharat Jodo Yatra programme

ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೆ, ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಜಯಂತ್ ಸಿಂಗ್ ನೇತೃತ್ವದ ಆರ್‌ಎಲ್‌ಡಿ ಸಹ ತಡವಾಗಿ ಆಹ್ವಾನವನ್ನು ಪಡೆದಿದೆ. ಜಯಂತ್‌ ಸಿಂಗ್ ಅವರನ್ನು ವೈಯಕ್ತಿಕವಾಗಿ ತಲುಪಲು ಸಾಧ್ಯವಾಗದ ಕಾರಣ, ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರಾ ಅಥವಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಉತ್ತರ ಪ್ರದೇಶದಲ್ಲಿ ಸಾಗಿದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ತನ್ನ ಕಾರ್ಯಕರ್ತರಿಗೆ ಅಗಾಧವಾಗಿ ಆರ್‌ಎಲ್‌ಡಿ ಸೂಚಿಸಿತ್ತು.

JD(S) ಮತ್ತು RLD ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಆಹ್ವಾನ ಪಡೆದ ಇತರ ಪಕ್ಷಗಳ ಅಧ್ಯಕ್ಷರೆಂದರೆ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಸಿಪಿಐ(ಎಂ), ಸಿಪಿಐ, ಜೆಡಿಯು, ಶಿವಸೇನೆ (ಠಾಕ್ರೆ), ಎನ್‌ಸಿಪಿ, ಜೆಎಂಎಂ, ಆರ್‌ಜೆಡಿ, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಟಿಡಿಪಿ, ಬಿಎಸ್‌ಪಿ, ಆರ್‌ಎಲ್‌ಎಸ್‌ಪಿ, ಎಚ್‌ಎಎಂ, ಎಂಡಿಎಂಕೆ, ವಿಸಿಕೆ, ಮುಸ್ಲಿಂ ಲೀಗ್ ಮತ್ತು ಆರ್‌ಎಸ್‌ಪಿ.

JD(S) finally gets invite for Congress’s Srinagar Bharat Jodo Yatra programme

ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತು ಮಾಯಾವತಿಯಂತಹ ಅಗ್ರ ನಾಯಕರು ಶ್ರೀನಗರಕ್ಕೆ ತೆರಳಿದ್ದಾರೆಯೇ ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹಿಂದೆ ಈ ಯಾವ ನಾಯಕರೂ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಅವರ ಉಪಸ್ಥಿತಿಯಿಂದ ರಾಹುಲ್‌ ಗಾಂಧಿ ಅವರ ನಾಯಕತ್ವ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ವಾರ ಬಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ್‌ ರಾವ್ ಅವರು ಆಯೋಜಿಸಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆಲಂಗಾಣಕ್ಕೆ ಅಖಿಲೇಶ್‌ ಯಾದವ್‌ ಅವರು ತೆರಳಲಿದ್ದಾರೆ. ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸುವುದಾಗಿ ಅವರು ಹೇಳಿದ್ದಾರೆ.

JD(S) finally gets invite for Congress’s Srinagar Bharat Jodo Yatra programme

ಎಎಪಿ ಮುಖ್ಯಮಂತ್ರಿಗಳಾದ ಕೇಜ್ರಿವಾಲ್ ಮತ್ತು ಭಗವಂತ್ ಮಾನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಂದ್ರಶೇಖರ್‌ ರಾವ್ ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಬಿಆರ್‌ಎಸ್ ಮತ್ತು ಎಎಪಿ ಜೊತೆಗೆ ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ, ಅಕಾಲಿದಳ ಮತ್ತು ಎಐಯುಡಿಎಫ್‌ಗೂ ಆಹ್ವಾನಗಳು ಹೋಗಿಲ್ಲ. ಈಶಾನ್ಯ ಮೂಲದ ಯಾವುದೇ ಪಕ್ಷಗಳನ್ನು ಸಹ ಇದುವರೆಗೆ ಆಹ್ವಾನಿಸಲಾಗಿಲ್ಲ. 'ಜನವರಿ 13 ರಂದು ಮಧ್ಯಾಹ್ನ 2:45 ಕ್ಕೆ, ನಾವು 23 ಪಕ್ಷಗಳಿಗೆ ಆಹ್ವಾನ ನೀಡಿದ್ದೇವೆ. ಎಎಪಿ ಮತ್ತು ಬಿಆರ್‌ಎಸ್‌ಗೆ ಯಾವುದೇ ಆಹ್ವಾನ ಹೋಗಿಲ್ಲ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

JD(S) finally gets invite for Congress’s Srinagar Bharat Jodo Yatra programme

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಸಮಾರಂಭ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿ ಇದೆ. ಈ ಹೊತ್ತಿನಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಅನ್ನು ಆಹ್ವಾನಿಸಿದೆ. ಕಳೆದ ಬಾರಿ ಚುನಾವಣೋತ್ತರ ಮೈತ್ರಿಯನ್ನು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಮಾಡಿಕೊಂಡಿದ್ದರೆ. ಒಂದು ಈ ಬಾರಿಯ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮತ್ತೆ ಮೈತ್ರಿ ಮಾಡಕೊಳ್ಳಲಿವೆಯೇ ಎಂಬುದನ್ನು ಕಾದುನೋಡಬೇಕಿದೆ.

English summary
Congress has invited HD Deve Gowda-led Janata Dal (Secular) to the concluding ceremony of Bharat Jodo Yatra in Srinagar, Kashmir in the last week of January,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X