'ಜನಸೇವಕಿ ಜಯಾ ಯಾಕೆ ಆಸ್ತಿ ಬಹಿರಂಗ ಮಾಡ್ಲಿಲ್ಲ?'

Subscribe to Oneindia Kannada

ನವದೆಹಲಿ, ಮಾರ್ಚ್, 29: ಜಯಲಲಿತಾ ಪ್ರಕರಣದ ಒಟ್ಟು ಚಿತ್ರಣ ಸುಪ್ರೀಂ ಕೋರ್ಟ್ ಗೆ ಸಿಗುತ್ತಿಲ್ಲ. ಒಂದೆಡೆ ಕರ್ನಾಟಕ ಸರ್ಕಾರದ ಪರವಾಗಿ ವಕೀಲ ಬಿವಿ ಆಚಾರ್ಯ ವಾದ ಮಂಡಿಸುತ್ತಿದ್ದಾರೆ. ಇನ್ನೊಂದೆಡೆ ಕರ್ನಾಟಕ ಸರ್ಕಾರ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮನವಿ ಸಲ್ಲಿಸಲು ಸಾಧ್ಯ ಎಂದು ಜಯಲಿತಾ ಸಹ ಪ್ರಶ್ನೆ ಮಾಡಿದ್ದಾರೆ.

ಇದೀಗ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮನವಿ ಮತ್ತು ಮೇಲ್ಮನವಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹುರುಳಿದಲ್ಲದ ವಾದ ಮಾಡುತ್ತಿದ್ದು ಸುಮ್ಮನೆ ಕಾಲಹರಣ ಮಾಡುತ್ತಿದೆ. ಕರ್ನಾಟಕ ಸರ್ಕಾರ ಸಲ್ಲಿಕೆ ಮಾಡಿರುವ ಮೇಲ್ಮನವಿಯಲ್ಲೇ ಸಾಕಷ್ಟು ದೋಷಗಳಿವೆ ಎಂದು ಜಯಾ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.[ಜಯಾ ಪ್ರಕರಣ: 76 ಸಾಕ್ಷಿಗಳು ಉಲ್ಟಾ ಹೊಡೆದಿದ್ದು ಯಾಕೆ?]

supreme court

ಇನ್ನೊಂದೆಡೆ ರಾಜ್ಯ ಸರ್ಕಾರದ ಪರ ಆಚಾರ್ಯ ವಾದ ಮುಂದುವರಿಸಿದ್ದಾರೆ. ಮಂಗಳವಾರ ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ.

* ಭ್ರಷ್ಟಾಚಾರದ ಪ್ರಕರಣದಲ್ಲಿ ನೀಡುರುವ ತೀರ್ಪು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನೆ ಮಾಡುತ್ತಿದೆ.[ಅಕ್ರಮ ಆಸ್ತಿ ಕಳೆಯಲು ಸುಳ್ಳು ಸಾಲ ತೋರಿಸಿದ್ದರೆ ಜಯಾ?]
* ಜನಪ್ರತಿನಿಧಿ ಅಥವಾ ಸಾರ್ವಜನಿಕರ ಸೇವಕಿಯಾದ ಜಯಲಲಿತಾ ತಮ್ಮ ಎಲ್ಲ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕಾಗಿತ್ತು.
* ಕರ್ನಾಟಕ ಹೈ ಕೋರ್ಟ್ ನೀಡಿದ ತೀರ್ಪು ಸಂಪೂರ್ಣವಾಗಿ ದೋಷಗಳಿಂದ ಕೂಡಿದೆ. ಆಸ್ತಿ ಲೆಕ್ಕ ಹಾಕುವುದರಲ್ಲೇ ನ್ಯಾಯಾಲಯ ಎಡವಿದೆ.
* ಅಕ್ರಮ ಆಸ್ತಿಗೆ ಸಂಬಂಧಿಸಿ 1977 ರ ಕೃಷ್ಣಾನಂದ್ ಅಗ್ನಿಹೋತ್ರಿ ಪ್ರಕರಣವನ್ನು ಉಲ್ಲೇಖ ಮಾಡಿಕೊಡಬೇಕಾಗುತ್ತದೆ. ಒಂದು ರೂಪಾಯಿ ಇರಲಿ ಅಥವಾ ಕೋಟಿ ಇರಲಿ ಅಕ್ರಮ ಆಸ್ತಿಗೆ ಸೇರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court has decided to hear a petition challenging the decision of the Karnataka High Court in admitting the appeal filed by Tamil Nadu Chief Minister, J Jayalalithaa challenging her conviction in the disproportionate assets case. While this matter has been ordered to be clubbed with the main case, during the course of the arguments, Jayalalithaa too is likely to raise the issue of locus standi and how Karnataka could file the appeal in the Supreme Court.
Please Wait while comments are loading...